ಚರಂಡಿಯಲ್ಲಿ ಕಾಲು ಜಾರಿ ಬಿದ್ದಿರುವ ಆಕಳನ್ನು ಜೀವಂತವಾಗಿ ರಕ್ಷಣೆ ಮಾಡಿದ – ಅಗ್ನಿಶಾಮಕ ದಳದ ಸಿಬ್ಬಂದಿಯವರು.
ಜಮಖಂಡಿ ಅ.31

ಬಾಗಲಕೋಟ ಜಿಲ್ಲೆಯ ಜಮಖಂಡಿಯ ನಗರದ ನೀರಾವರಿ ಇಲಾಖೆಯ ವಾಸತಿ ಗೃಹಗಳ ಹತ್ತಿರ ಚರಂಡಿಯಲ್ಲಿ ಆಕಳು ಕಾಲು ಜಾರಿ ಬಿದ್ದಿರುವದನ್ನು ಕಂಡು ಶ್ರೀ ಇಬ್ರಾಹಿಂ ಗೊಗಿ ಶಿಕ್ಷಕರು ಜಮಖಂಡಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಶ್ರೀ ರಾಜು ತಳವಾರ ಅಗ್ನಿಶಾಮಕ ಠಾಣಾಧಿಕಾರಿ ಯವರ ನೇತೃತ್ವದ ತಂಡ ಜಲ ವಾಹನ ಮತ್ತು ಸಿಬ್ಬಂದಿ ಯವರು ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿ ಗಳೊಂದಿಗೆ ಆಗಮಿಸಿ 10 ಅಡಿ ಆಳದ ಅಳತೆಯ ಒಳ ಚರಂಡಿಯಲ್ಲಿ ಬಿದ್ದ ಬೀದಿ ಆಕಳನ್ನು ಕಷ್ಟ ಪಟ್ಟು ಸುಮಾರು 01:00 ಒಂದು ಗಂಟೆಗಳ ಕಾಲ ಕಾರ್ಯಚರಣೆಯನ್ನು ಮಾಡಿ ಆಕಳನ್ನು ಜೀವಂತವಾಗಿ ಚರಂಡಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು.

ಆಕಳ ಪ್ರಾಣ ಕಾಪಾಡಿದ ಜಮಖಂಡಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯವರಿಗೆ ಸೇರಿರುವ ಸಾರ್ವಜನಿಕರು ಹಾಗೂ ವಸತಿ ಗೃಹದ ಸಿಬ್ಬಂದಿಯವರು ಚಪ್ಪಾಳೆ ಮೂಲಕ ಧನ್ಯವಾದಗಳನ್ನು ತಿಳಿಸಿದರು. ಹಾಗೂ ಹಸ್ತಲಾಘವ ಮಾಡಿ ಅಭಿನಂದಿಸಿದರು.

ಬೀದಿ ಆಕಳು ಹಸುವಿನ ಜೀವ ಉಳಿಸಿವ ಕೆಲಸಕ್ಕೆ ಅಗ್ನಿಶಾಮಕ ದಳದವರ ಸೇವೆ ಅಮೋಘ ಎಂದು ಬಣಿಸಿದರು..💐ಈ ರಕ್ಷಣಾ ಕಾರ್ಯಚರಣೆಯಲ್ಲಿ ಶ್ರೀ ರಾಜು ತಳವಾರ ಅಗ್ನಿಶಾಮಕ ಠಾಣಾಧಿಕಾರಿಯವರು, ಶ್ರೀ ಏನ್ ಪಿ ಹೂಗಾರ ASO, ಸಿಬ್ಬಂದಿಗಳಾದ. ಶ್ರೀ ಅಶೋಕ್ ಹಳಿಗೌಡರ, ಶ್ರೀ ಪ್ರಕಾಶ ಯಲಶೆಟ್ಟಿ , ಆನಂದ್ ಹನಬರಟ್ಟಿ, ಶ್ರೀ ಕೆ.ಬಿ. ಮುಲ್ಲಾ, ಶ್ರೀಧರ್ ಮಾಳಶೆಟ್ಟಿ,ಶ್ರೀ ಬಿ.ಎಸ್ ರೊಳ್ಳಿ, ಶ್ರೀ ಬಿ.ಎಸ್. ಬಿರಾದಾರ್, ಶ್ರೀ ಎಸ್.ಎಸ್. ಕುಂಬಾರ,ಶ್ರೀ ಬಿ.ವೈ. ಮೆಳ್ಳಿಗೇರಿ. ಸ್ಥಳೀಯರು ಕಾರ್ಯಾಚರಣೆಯಲ್ಲಿ ಹಾಜರಿದ್ದರು.🙏🙏