ಭಾರತಿ ವಿದ್ಯಾಪೀಠ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ.
ದೇವರ ಹಿಪ್ಪರಗಿ ಮಾರ್ಚ್.4

ದೇವರ ಹಿಪ್ಪರಗಿಯಲ್ಲಿರುವ ನನ್ನ ಕನಸಿನ ಭಾರತಿ ವಿದ್ಯಾಪೀಠ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಸಿಂದಗಿ ಶಾಸಕರಾದ ಶ್ರೀ ಅಶೋಕಣ್ಣ ಮನಗೂಳಿ ಹಾಗೂ ದೇವರ. ಹಿಪ್ಪರಗಿ ಶಾಸಕರಾದ ರಾಜೂಗೌಡ ಪಾಟೀಲ ಇವರ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಿತು.ಪರಮಪೂಜ್ಯ ಶ್ರೀ ಶಿವಯೋಗಿ ಸ್ವಾಮೀಜಿ, ಪರದೇಶಿಮಠ ಸಾನಿದ್ಯ ವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ, ಜಯಗಳಿಸಿದ ಪುಟಾಣಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಿದರು . ಮಕ್ಕಳು ವಿವಿಧ ಮನೋರಂಜನೆಗಳ ಮೂಲಕ ನೆರೆದವರ ಮನಸು ರಂಜಿಸಿದರು. ವಿದ್ಯಾಪೀಠದ ಮುಖ್ಯಸ್ಥರಾದ ಅರವಿಂದ ಹಂಗರಗಿ ,ಶಾಲಾ ಶಿಕ್ಷಕವೃಂದ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ