ಬಲಿಜ ಸಮಾಜದವರು ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ….
ತರೀಕೆರೆ (ಮಾ. 7) :

ಪವಾಡ ಪುರುಷ ಕೈವಾರ ತಾತಯ್ಯ ಎಂದೇ ಪ್ರಖ್ಯಾತರಾಗಿರುವ ಯೋಗಿ ನಾರಾಯಣ ಯತೀಂದ್ರ ಟಿವಿ ಶಿವಣ್ಣ ರವರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ತರೀಕೆರೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಹಾಗೂ ತರೀಕೆರೆ ತಾಲೂಕು ಬಲಿಜ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರ ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಬಲಿಜ ಸಮಾಜದವರು ಅತಿ ಹೆಚ್ಚಾಗಿ ಸೇರಿದ್ದೇವೆ ನಾವೆಲ್ಲರೂ ಸರ್ಕಾರದ ಗಮನ ಸೆಳೆಯಲು ಒಗ್ಗಟ್ಟಿನಿಂದ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು ಸೌಲತ್ತುಗಳನ್ನು ಪಡೆಯಬೇಕು ಎಂದು ಹೇಳಿದರು. ಬಲಿಜ ಸಂಘದ ಗೌರವಾಧ್ಯಕ್ಷರಾದ ನಾಗೇಂದ್ರಪ್ಪ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 300 ವರ್ಷಗಳ ಹಿಂದೆ ಕೈವಾರದಲ್ಲಿ ವಾಸಿಸುತ್ತಿದ್ದ ಬಲಿಜ ವಂಶಸ್ಥರಾದ ಕೊಂಡಪ್ಪ ಮತ್ತು ಮುದ್ದಮ್ಮ ಎಂಬ ದಂಪತಿಗಳಿಗೆ ಕ್ರಿ. ಶ.1726 ರ ಪಾಲ್ಗುಣ ಮಾಸ ಹುಣ್ಣಿಮೆಯ ದಿನದಂದು ಜನಿಸಿದರು, ನಾರಾಯಣಪ್ಪ ರವರು ಬಾಲ್ಯದಲ್ಲಿ ಧ್ಯಾನ, ಕೀರ್ತನಗಳ ಮೂಲಕ ಚಿಂತನೆಯನ್ನು ಒಲಿಸಿಕೊಂಡರು, ಸಂಸಾರವನ್ನು ತ್ಯಜಿಸಿ ನರಸಿಂಹ ಸ್ವಾಮಿ ಗುಹೆಯಲ್ಲಿ ದೀರ್ಘಕಾಲ ತಪಸ್ಸು ಮಾಡಿ ಬಾಯಿಯೊಳಗೆ ಇರುವ ಬೆಣಚಿನ ಕಲ್ಲುನ್ನು ಸಕ್ಕರೆಯಾಗಿ ಪರಿವರ್ತಿಸಿದರು. ಪವಾಡ ಪುರುಷರಾದ ಇವರು ಅನೇಕ ಆಧ್ಯಾತ್ಮಿಕ ಗ್ರಂಥಗಳನ್ನು, ಕೀರ್ತನೆಗಳನ್ನು, ರಚಿಸಿದ್ದಾರೆ. ಇವರು ಬರೆದ ಕಾಲಜ್ಞಾನ ಗ್ರಂಥವು ಅತ್ಯಂತ ಪ್ರಸಿದ್ಧಿ ಪಡೆದಿದೆ ಜನಪ್ರಿಯವಾಗಿದೆ. ಬೋಧನೆಯ ಮುಖಾಂತರ ಸಮಾಜ ಸುಧಾರಣೆಯಲ್ಲಿ ತೊಡಗಿದ್ದರು. 110 ವರ್ಷಗಳ ಕಾಲ ತುಂಬು ಜೀವನ ನಡೆಸಿ ಕ್ರಿ,ಶ.1836 ರಲ್ಲಿ ಸಜೀವ ಬೃಂದಾವನಸ್ಥರಾದರು. ಅವರು ತಪಸ್ಸು ಮಾಡಿದ ಪ್ರದೇಶವು ಭಕ್ತರಾದ ದಿವಂಗತ ಎಂಎಸ್ ರಾಮಯ್ಯನವರ ವಂಶಸ್ಥರು ಸೇವಾ ಕಾರ್ಯದಿಂದ ಪವಿತ್ರ ಪುಣ್ಯ ಯಾತ್ರಾ ಸ್ಥಳವಾಗಿದೆ ಎಂದು ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯದ ಗೀತಾ ಶಂಕರ್ ರವರು, ಜಾನಪದ ಗೀತೆಗಳ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗಡಿಹಳ್ಳಿ ಪದ್ಮಮ್ಮ, ಮಾತನಾಡಿದರು. ಹಾಗೂ ನಾಡ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ತಹಸಿಲ್ದಾರ್ ಸಿ ಎಸ್ ಪೂರ್ಣಿಮಾ ಅವರು ಅಧ್ಯಕ್ಷರ ಭಾಷಣ ಮಾಡಿದರು. ನಿವೃತ್ತ ಅರಣ್ಯ ಅಧಿಕಾರಿ ಬಲಿಜ ಸಂಘದ ಉಪಾಧ್ಯಕ್ಷರಾದ ಟಿ ಎಂ ಮಂಜುನಾಥ್ ದಂಪತಿಗಳನ್ನು, ಗುರುಮೂರ್ತಿಯವರನ್ನು ಹಾಗೂ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಗೌತಮ್, ಸಹಕಾರ್ಯದರ್ಶಿ ಟಿ ಎಂ ವೆಂಕಟೇಶ್ ನಾಯ್ಡು, ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಟಿ ಕೆ ರಮೇಶ್ ಮುಂತಾದವರು ಉಪಸ್ಥಿತರಿದ್ದರು.
- JOIN OUR INSTAGRAM COMMUNITY
- JOIN OUR WHATSAPP COMMUNITY
- JOIN OUR TWITTER COMMUNITY
ವರದಿಗಾರರು : ತರೀಕೆರೆ N. ವೆಂಕಟೇಶ್