ಮೈಸೂರು ಮಹಾ ರಾಜರ ಮೇಲೆ ಸ್ವಾಮಿ ವಿವೇಕಾನಂದರ ಪ್ರಭಾವ ಅಗಾಧ – ಮಾತಾಜೀ ತ್ಯಾಗಮಯೀ.
ಚಳ್ಳಕೆರೆ ಜು.24

ಮೈಸೂರಿನ ಮಹಾ ರಾಜರ ಮೇಲೆ ಸ್ವಾಮಿ ವಿವೇಕಾನಂದರು ಬೀರಿದ ಪ್ರಭಾವ ಅಗಾಧವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ‘ಸುಂದರ್ ರಾಮ್ ಅಯ್ಯರ್’ ಅವರ ಸ್ಮೃತಿಗಳ ಬಗ್ಗೆ ಪ್ರವಚನ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಹಾಗೂ ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಸಿ.ಎಸ್ ಭಾರತಿ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಜಿ.ಯಶೋಧಾ ಪ್ರಕಾಶ್, ಕವಿತಾ ಗುರುಮೂರ್ತಿ, ವನಜಾಕ್ಷಿ ಮೋಹನ್ ರುದ್ರಪ್ಪ, ಯತೀಶ್ ಎಂ ಸಿದ್ದಾಪುರ, ಗೀತಾ ನಾಗರಾಜ್, ವೆಂಕಟೇಶರೆಡ್ಡಿ, ಚೇತನ್, ಸಂತೋಷ್, ಉಷಾ ಶ್ರೀನಿವಾಸ್, ಸುಮನಾ ಕೋಟೇಶ್ವರ್, ಮಂಜುಳ ಉಮೇಶ್, ಜಗದೀಶ್, ಸೋಮನಾಥ್, ಸುರೇಶ್, ಕಾವೇರಿ, ಋತಿಕ್ ಸೇರಿದಂತೆ ಸದ್ಭಕ್ತರು ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ,ಚಳ್ಳಕೆರೆ.

