“ಬನ್ನಿ ಬನ್ನಿ ಮಕ್ಕಳೆ”…..
ಬನ್ನಿ ಬನ್ನಿ ಮಕ್ಕಳೆ ಇಲ್ಲಿ
ಆಟವ ಆಡೋಣ ಇಲ್ಲಿ
ಮರಗಿಡಗಳು ಎಲ್ಲಿ
ಶಾಲೆ ಸುತ್ತಮುತ್ತ ಖಾಲಿ
ತನ್ನಿರಿ ತನ್ನಿರಿ ಬೀಜವನ್ನು
ವಿಧಿ ವಿಧ ಬೀಜವ ಚೆಲ್ಲೋಣ
ಹಸಿರು ತೋಟ ಮಾಡೋಣ
ಬೀಜವ ಒಡೆದು ಸಸಿ ಆಯಿತ್ತು
ಸಸಿ ಗಿಡವಾಗಿ ಮರವಾಯಿತ್ತು
ಮರ ಗಿಡಗಳಿಂದಲೇ ತರಕಾರಿ ಹಣ್ಣುಗಳು
ಗಿಡ ಮರಗಳಿಂದಲೇ ಗಾಳಿ ನೆರಳು
ಮರ ಗಿಡಗಳಿಂದಲೇ ಮಳೆ ಬೆಳೆ ಎಲ್ಲ
ಗಿಡ ಮರಗಳು ನೋಡುತ್ತ
ವಿಧ ವಿಧ ಹಣ್ಣುನ್ನು ತಿನ್ನುತ
ಹಾಡುತ ಕುಣಿಯುತ ಸವಿಯೋಣ.
– ವಿ.ಎಂ.ಎಸ್.ಗೋಪಿ✍️
ಲೇಖಕರು, ಸಾಹಿತಿಗಳು
ಬೆಂಗಳೂರು.