“ಈ ಪಾದ ಪುಣ್ಯ ಪಾದ” ಚಲನ ಚಿತ್ರದ – ಪೋಸ್ಟರ್ ಬಿಡುಗಡೆ.

ಬೆಂಗಳೂರು ಡಿ.17

ಭಿನ್ನ ಕಥಾನಕಗಳಿಗೆ ಪರಿಣಾಮಕಾರಿಯಾಗಿ ದೃಶ್ಯ ರೂಪ ಕೊಡುವ ಮೂಲಕ ಗಮನ ಸೆಳೆದಿರುವ ಸಿದ್ದು ಪೂರ್ಣಚಂದ್ರ. “ದಾರಿ ಯಾವುದಯ್ಯಾ ವೈಕುಂಠಕ್ಕೆ” ಬ್ರಹ್ಮಕಮಲ, ತಾರಿಣಿ ಸೇರಿದಂತೆ ಒಂದಷ್ಟು ಭಿನ್ನ ಧಾಟಿಯ ಸಿನಿಮಾಗಳೊಂದಿಗೆ ಪ್ರತಿಭಾನ್ವಿತ ನಿರ್ದೇಶಕರೆಂದು ಗುರುತಿಸಿ ಕೊಂಡಿರುವ ಸಿದ್ದು ಪೂರ್ಣಚಂದ್ರ ಇದೀಗ “ಈ ಪಾದ ಪುಣ್ಯ ಪಾದ” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರ ಮೊದಲ ಪೋಸ್ಟರ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆ ಗೊಳಿಸಿ, ಚಿತ್ರ ತಂಡಕ್ಕೆ ಶುಭ ಕೋರಿದರು.ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿ ಇರುವ, ನೊಂದ ಜೀವಗಳಿಗೆ ಸಾಂತ್ವನ ಹೇಳುವಂಥಾ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂಥಾ ಘಳಿಗೆಯಲ್ಲಿ ಸಾಮಾಜಿಕ ಕಾಳಜಿಯ ಭೂಮಿಕೆಯಲ್ಲಿ ರೂಪು ಗೊಂಡಿರುವ ಈ ಸಿನಿಮಾದ ಆಶಯವನ್ನು ಶ್ರೀಮುರುಳಿ ಮೆಚ್ಚಿಕೊಂಡಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಆಪ್ತರಾಗಿರುವ ಆಟೋ ನಾಗರಾಜ್ ಅವರು ಈ ಸಿನಿಮಾ ಮೂಲಕ ನಾಯಕ ನಟರಾಗಿದ್ದಾರೆ. ಹಲವಾರು ಪ್ರಶಸ್ತಿ ಪಡೆದಿರುವ ಸಿದ್ದು ಪೂರ್ಣಚಂದ್ರ ಈ ಚಿತ್ರವನ್ನೂ ಕೂಡಾ ಅದ್ಭುತವಾಗಿ ಮಾಡಿದಾರೆ. ಟ್ಯಾಲೆಂಟೆಡ್ ಟೆಕ್ನಿಷಿಯನ್ಸ್, ಕಲಾವಿದರ ಸಾಥ್ ನೊಂದಿಗೆ ತಯಾರಾಗಿರುವ ಈ ಚಿತ್ರಕ್ಕೆ ಒಳಿತಾಗಲಿ ಈ ಅಪರೂಪದ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸುವಂತೆಯೂ ಪ್ರೇಕ್ಷಕರಲ್ಲಿ ಶ್ರೀಮುರುಳಿ ಮನವಿ ಮಾಡಿದರು.ನಿರ್ದೇಶಕ ಸಿದ್ದು ಪೂರ್ಣಚಂದ್ರ ಇಲ್ಲಿ ಆಪ್ತ ಕಥೆಯೊಂದನ್ನು ದೃಶ್ಯಕ್ಕೆ ಒಗ್ಗಿಸಿದ್ದಾರೆ. ಆನೆಕಾಲು ರೋಗಿಯೊಬ್ಬನ ಸುತ್ತ ಚಲಿಸುವ ಕಥೆಯನ್ನೊಳ ಗೊಂಡಿರುವ ಸಿನಿಮಾ ಇದು. ಸಾಮಾನ್ಯವಾಗಿ ಯಾವುದೇ ಖಾಯಿಲೆ ಕಸಾಲೆಗಳು ಆವರಿಸಿ ಕೊಂಡಾಗಲೂ, ಅದು ದೈಹಿಕವಾಗಿ ಬಾಧಿಸುವುದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಕೊಂದು ಹಾಕಿ ಬಿಡುತ್ತೆ. ಅದೆಂಥಾ ಕಾಯಿಲೆ ಬಂದರೂ ಎದೆಗುಂದದೆ ಎದುರಿಸಬೇಕು.

ಎಲ್ಲದಕ್ಕೂ ಸೆಡ್ಡು ಹೊಡೆದು ಬದುಕ ಬೇಕೆಂಬ ಸ್ಫೂರ್ತಿದಾಯಕ ಆಶಯ ಈ ಸಿನಿಮಾದ ಆತ್ಮವಾಗಿದೆ. ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿ, ಅದನ್ನು ಕಥೆಯೊಂದರ ಚೌಕಟ್ಟಿಗೆ ಒಗ್ಗಿಸಿ ದೃಶ್ಯರೂಪ ನೀಡಿದ್ದಾರೆ. ಯಾವುದೇ ಕಾಯಿಲೆ ಪೀಡಿತ ವ್ಯಕ್ತಿಗಳನ್ನು ಹೇಗೆಲ್ಲ ನೋಡಿ ಕೊಳ್ಳಬೇಕೆಂಬ ಸಂದೇಶವೂ ಇಲ್ಲಿದೆ. ಎರಡ್ಮೂರು ದಶಕಗಳಿಂದಲೂ ೮೫೦ ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸಿರುವ ಆಟೋ ನಾಗರಾಜ್ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಆ ವೃತ್ತಿಯ ನಡುವೆಯೇ ಹಲವಾರು ಸಿನಿಮಾ, ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ, ನಟನಾಗಿ ರೂಪು ಗೊಂಡಿದ್ದಾರೆ. ಮತ್ತೊಂದು ಭಿನ್ನ ಚಹರೆಯ ಪಾತ್ರ ಸಿಕ್ಕ ತುಂಬು ಖುಷಿಯೂ ಅವರಲ್ಲಿದೆ. ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್, ಕಲೆ ಬಸವರಾಜ್ ಆಚಾರ್, ವಸ್ತ್ರಲಂಕಾರ ನಾಗರತ್ನ ಕೆ.ಎಚ್, ಶಬ್ಧ ವಿನ್ಯಾಸ ಶ್ರೀರಾಮ್, ಕಲರಿಂಗ್ ಗಗನ್ ಆರ್, ಸಂಕಲನ ದೀಪು ಸಿ.ಎಸ್ , ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ , ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಹೊಣೆ ಸಿದ್ದು ಪೂರ್ಣಚಂದ್ರ ಹೊತ್ತಿದ್ದಾರೆ. ನಿರ್ವಹಿಸಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದಿದೆ. ಈ ಚಿತ್ರವು ಹಲವಾರು ಚಲನ ಚಿತ್ರೋತ್ಸವಗಳಿಗೆ ಸ್ಪರ್ಧಿಸಲು ರೆಡಿಯಾಗಿದೆ.

*****

-ಡಾ.ಪ್ರಭು ಗಂಜಿಹಾಳ

ಮೊ:೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button