ಮನುಷ್ಯ ಮನುಷ್ಯರನ್ನು ಗೌರವಿಸುವುದು, ಅವರಿಗಿಂತಲೂ ದೊಡ್ಡವರು – ಆರ್. ನರಸಿಂಹಮೂರ್ತಿ ಅಭಿಮತ.
ಅಮೀನಗಡ ನ.06





ಕನ್ನಡ ಸಾಹಿತ್ಯ ಪರಿಷತ್ ವೇದಿಕೆ ತಾಲೂಕ ಅಧ್ಯಕ್ಷ ನಮ್ಮ ಹುಡುಗ ಮಲ್ಕು ಸಜ್ಜನ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಅವರ ಕಾಯಕ ನಿಷ್ಟೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ. ಈ ಪ್ರಶಸ್ತಿ ನಿಜವಾದ ಸಾಧಕರಿಗೆ ನೀಡಲಾಗಿದೆ. ಇನ್ನೂ ಈ ಸಮಾಜದಲ್ಲಿ ಅನೇಕ ಸಾಧಕರು ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಅಂತವರಿಗೆ ಸಮಾಜ ಗುರುತಿಸಿ ಇಂತಹ ಪ್ರಶಸ್ತಿ ನೀಡಿ ಗೌರವಿಸಬೇಕು. ನಿಮ್ಮ ಸೇವೆಯ ಫಲವಾಗಿ ನಿಮಗೆ ಈ ಪ್ರಶಸ್ತಿಗಳು ಬಂದಿವೆ ನಾನು ತಮಗೆ ಅಭಿನಂದಿಸುತ್ತೇನೆ ಎಂದರು. ಇಂದು ಅಂತಹ ಸಾಧಕರಿಗೆ ಅಭಿನಂದನೆ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಹಿರಿಯ ಪತ್ರಕರ್ತರಾದ ಆರ್.ನರಸಿಂಹಮೂರ್ತಿ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕಿನ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಒಬ್ಬ ಸಾಧಕನನ್ನು ಪ್ರಶಸ್ತಿಗಳು ಆಯ್ಕೆ ಮಾಡುವುದಿಲ್ಲ ಈ ಸಮಾಜದ ಜನ ಅವರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಆ ಪ್ರಶಸ್ತಿಗೆ ಒಂದು ಬೆಲೆ ಇರುತ್ತದೆ. ಆ ನಿಟ್ಟಿನಲ್ಲಿ ನಮ್ಮ ಅಮೀನಗಡ ದಿಂದ 4 ಜನ ಹಾಗೂ ಸೂಳೇಭಾವಿ ಇಂದ 4 ಜನ ಈ ರಾಜ್ಯೋತ್ಸವ ಪ್ರಶಸ್ತಿ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು ಮುಂದಿನ ದಿನ ಮಾನದಲ್ಲಿ ಇವರ ಸೇವೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಇವರ ಕೀರ್ತಿ ನಾಡಿನಾಧ್ಯಾಂತಹ ಬೆಳಗಲಿ ಎಂದು ಅಜಮೀರ ಮುಲ್ಲಾ ಅವರು ಶುಭ ಕೋರಿದರು. ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅದ್ಯಕ್ಷ ಡಿ.ಬಿ ವಿಜಯಶಂಕರ್ ಅಮೀನಗಡ ಮತ್ತು ಸೂಳೇಭಾವಿ ಗ್ರಾಮದಲ್ಲಿ ಸೇರಿ ಒಟ್ಟು 8 ಪ್ರಶಸ್ತಿಗಳನ್ನು ಪಡೆದ ಆರಾಧಕರು ಈ ಸಮಾಜಕ್ಕೆ ನೀವು ಮಾದರಿಯಾಗಿದ್ದೀರಿ ಇನ್ನೂ ಮುಂದೆ ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ.
ಈ ಸಮಾಜಕ್ಕೆ ನಿಮ್ಮ ಸೇವೆ ಅನನ್ಯವಾಗಿದೆ. ಮುಂದಿನ ದಿನ ಮಾನದಲ್ಲಿ ತಮ್ಮೆಲ್ಲರ ಸೇವೆಯಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ತಮಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ಶುಭ ಕೋರಿದರು. ನಂತರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ, ಪ್ರಶಾಂತ್ ಲಮಾಣಿ ಮಾತನಾಡಿ ಸಮಾಜ ಸೇವೆ ಯೇ ಜನಾರ್ದನ ಸೇವೆ ನಾನು ಕೂಡ ಸಾಮಾಜಿಕ ರಂಗದಲ್ಲಿ ವಿವಿಧ ರೀತಿಯಲ್ಲಿ ಸೇವೆ ಮಾಡುತ್ತಿದ್ದೇನೆ ನಾನು ಯಾವ ಸ್ವಾರ್ಥವನ್ನು ಬಯಸಿಲ್ಲ, ಬದಲಾಗಿ ನಿಮ್ಮ ಸಮಾಜ ಸೇವೆ ನೋಡಿ ಆ ಪ್ರಶಸ್ತಿಗಳು ನನಗೆ ಸಿಕ್ಕಷ್ಟು ಸಂತೋಷವಾಗಿದೆ ನಿಮಗೆ ಶುಭ ಕೋರುತ್ತೇನೆ ಎಂದು ಹೇಳಿದರು. ಹೀಗೆ ಉತ್ತಮ ಸೇವೆ ಮಾಡಿ ಸಮಾಜದಲ್ಲಿ ಉತ್ತಮ ಶಾಂತಿ ಮತ್ತು ಸೇವಾ ಮನೋಭಾವನೆಗಳನ್ನು ಬಿತ್ತಿ ಮಾದರಿಯಾಗಿ ಎಂದು ಶುಭ ಕೋರಿದರು. ನಂತರ ನಾಗೇಶ ಗಂಜೀಹಾಳ, ಅಮರೇಶ ಮಡ್ಡಿಕಟ್ಟಿ, ರವಿಕುಮಾರ, ಪಟ್ಟದಕಲ್ಲು, ಶ್ರೀಮತಿ ರೇಣುಕಾ ರಾಠೋಡ, ಮಾತನಾಡಿದರು. ಸಂಗನೇಶ ಬೆವೂರು “ಸಂಪತ್ತಿಗೆ ಸವಾಲ್” ನಾಟಕದ ಡೈಲಾಗ್ ಹೇಳಿದರು. ತುಳಸಿರಾಮ್ ಲಮಾಣಿ ಅವರು ವಚನ ಗಾಯನ ಹಾಡಿ ರಂಜಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಗಂಗಾಧರ ಕಮ್ಮಾರ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಭೋಜಪ್ಪ ಭಜಂತ್ರಿ, ಶ್ರೀ ರವಿಕುಮಾರ ಪಟ್ಟದಕಲ್ಲು, ಶ್ರೀ ತುಳಸಿರಾಮ್ ಲಮಾಣಿ, ಶ್ರೀ ಸಂಗಮೇಶ ಬೆವೂರ, ಶ್ರೀ ಮುತ್ತಪ್ಪ ಹಡಪದ, ಇವರೆಲ್ಲಗೂ ಸನ್ಮಾನ ಮಾಡಿ ಶುಭ ಕೋರಿ ಅಭಿನಂದಿಸಲಾಯಿತು. ಸರಳ ಅಭಿನಂದನಾ ಕಾರ್ಯಕ್ರಮದಲ್ಲಿ ನಾಗೇಶ ಗಂಜಿಹಾಳ, ತುಕಾರಾಮ್ ಪವಾರ್, ಗ್ಯಾನಪ್ಪ ಗೋನಾಳ, ನಿಂಗರಾಜ್ ರಾಮೋಡಗಿ, ಈರಣ್ಣ ಪರಾಳದ, ಯಮನಪ್ಪ ಭಜಂತ್ರಿ, ಹನಮಂತ ಹಿರೇಮನಿ, ಉಪಸ್ಥಿತರಿದ್ದರು.