ಸರ್ಕಾರದ ನಿರ್ದೇಶನದಂತೆ ಪ್ರಾಣಿ ಬಲಿ ತಡೆಯಬೇಕೆಂದು – ವಿಶ್ವ ಪ್ರಾಣಿ ಕಲ್ಯಾಣ ಸಮಿತಿಯಿಂದ ಮನವಿ.
ಕೊಕಟನೂರ ಡಿ.28

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಶ್ರೀ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಶ್ರೀ ದಯಾನಂದ ಸ್ವಾಮೀಜಿ, ಡಿ.ವೈ. ಎಸ್ಪಿ ಪೋಲಿಸ್ ಇಲಾಖೆ ಹಾಗೂ ಪಶು ವೈಧ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರಾಣಿ ಬಲಿ ನಿಷೇದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಯಿತು. ಜಿಲ್ಲಾಧಿಕಾರಿ. ತಹಸೀಲ್ದಾರ್. ಡಿ.ವೈ.ಎಸ್ಪಿ, ಪಿ.ಎಸ್.ಐ ಎಲ್ಲರೂ ಸರಕಾರದ ನಿರ್ದೇಶನದಂತೆ ಪ್ರಾಣಿ ಬಲಿ ತಡೆಯಬೇಕು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಮೂಲಕ ನಾವು ಮನವಿ ಮಾಡಿ ಕೊಳ್ಳುತ್ತೇವೆ.

ಶ್ರೀ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಅಥಣಿ ಪೋಲಿಸ್ ಇಲಾಖೆ ಹಾಗೂ ಪಶು ವೈಧ್ಯಕೀಯ ಇಲಾಖೆ ಅಧಿಕಾರಿಗಳೊಂದಿಗೆ ಪ್ರಾಣಿ ಬಲಿ ನಿಷೇಧ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಸಲಹೆ ನೀಡಿದರು. ಯಲ್ಲಮ್ಮ ದೇವಿಯ ಹೆಸರಿನಲ್ಲಿ ನಡೆಯುವ ಪ್ರಾಣಿ ಬಲಿ ನಿಷೇಧ ನಿಲ್ಲಬೇಕೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದರು.

ಅಥಣಿ ಡಿ.ವೈ.ಎಸ್ಪಿ ಪ್ರಶಾಂತ ಮುನ್ನೊಳಿ, ಕೊಕಟನೂರ ಗ್ರಾಮ ಆಡಳಿತಾಧಿಕಾರಿ ಕಲೇಶ ಕಲಮಡಿ, ಪಶು ವೈಧ್ಯಕೀಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ