ಒಳ ಮೀಸಲಾತಿ ಹೋರಾಟಗಾರರಿಗೆ – ಅಭಿನಂದನಾ ಸಮಾರಂಭ.
ಮಾನ್ವಿ ಸ.16





ರಾಜ್ಯದಲ್ಲಿ ಸಾಮಾಜಿಕ ಸಮೀಕ್ಷೆಯ ಮೂಲಕ ನಡೆಸಿದ ಸದಾಶಿವ ಆಯೋಗ,ಮಾಧುಸ್ವಾಮಿ ಆಯೋಗ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ ಏಕ ಸಮಿತಿ ಆಯೋಗ ಸಮೀಕ್ಷೆ ನಡೆಸಿ ತಮ್ಮ ವರದಿಗಳನ್ನು ಸರ್ಕಾರಕ್ಕೆ ಒಳ ಮೀಸಲಾತಿ ವರದಿ ಸಲ್ಲಿಸಿದ ನಂತರ ಮಾದಿಗ ಸಮುದಾಯದಕ್ಕೆ ಶೇಕಡವಾರು 6 ತಲುಪಿದೆ ಎಂದು ಮಾನ್ವಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಿವಿಆರ್ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘ ಹಮ್ಮಿಕೊಂಡಿದ್ದ ಒಳ ಮೀಸಲಾತಿ ಹೋರಾಟಗಾರರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಸಮುದಾಯದವರಿಗೆ ಸರ್ಕಾರದ ಮೀಸಲಾತಿಯ ಸೌಲಭ್ಯ ದೊರೆಯಬೇಕಾದಲ್ಲಿ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವುದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದರು.
ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ನಮ್ಮ ಸಮುದಾಯದವರ ನಿರಂತರ ಮೂರು ದಶಕಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡಿದ್ದು, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಗೊಂದಾಲ ನಿವಾರಣೆಗಾಗಿ ಹಾಗೂ ನಮ್ಮ ಸಮುದಾಯಕ್ಕೆ ಶೇ 7 ರಷ್ಟು ಹೆಚ್ಚಿನ ಮೀಸಲಾತಿಯನ್ನು ಪಡೆಯುವುದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ.ಮಾನ್ವಿ