ನನ್ನನ್ನು ಪ್ರೀತಿಸು?, ಮದುವೆಯಾಗು!, ಎಂದು ಪೀಡಿಸಿದಕ್ಕೆ ಮನನೊಂದು 14 ವರ್ಷದ ಅಪ್ರಾಪ್ತ ಬಾಲಕಿ ನೇಣಿಗೆ ಶರಣು, ಆರೋಪಿ ಮೈಹಿಬೂಬ್ ಗೆ ಗಲ್ಲು ಶಿಕ್ಷೆ ಆಗಲಿ – ಈಶ್ವರ್ ಹಿಪ್ಪರಗಿ ಅಗ್ರಹ!
ಜೇವರ್ಗಿ ಜ.13

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಓಂ ನಗರ ಬಡಾವಣೆಯಲ್ಲಿ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಹ ಒಂದು ಘಟನೆ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿ ಯಶವಂತರಾಯ್ (14) ಎಂಬ ವಿದ್ಯಾರ್ಥಿನಿಯು ಪಟ್ಟಣದ ನರೇಂದ್ರ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಶಾಲೆಗೆ ಹೋಗುವಾಗ ಬರುವಾಗ ದಾರಿಯಲ್ಲಿ ಆರೋಪಿ ಮೈಹಿಬೂಬ್ ಮುಲ್ಲಾ ತನ್ನ ಆಟೋ ಮೂಲಕ ಬಂದು ವಿದ್ಯಾರ್ಥಿನಿಗೆ ನನ್ನನ್ನು ಪ್ರೀತಿಸುವ ಮದುವೆಯಾಗು ಎಂದು ಪಿಡಿಸುತ್ತಿದ್ದ ಪದೇ ಪದೇ ಅವಳನ್ನು ಕೇಳುತ್ತಾ ಕಣ್ಣು ಹೊಡಿಯೋದು ಕೈ ಸನ್ನೆ ಮಾಡಿ ಕರೆಯುವುದು ಮಾಡುತ್ತಾ ಅವಳಿಗೆ ಬಹಳಷ್ಟು ರೀತಿಯಿಂದ ಹಿಂಸೆ ಕೊಟ್ಟಿದ್ದಾನೆ.

ಈ ಸಮಸ್ಯೆಯನ್ನು ಮನೆಯಲ್ಲಿ ತಿಳಿಸಿದಾಗ ಅವರ ತಂದೆ ಯಶವಂತರಾಯ ಬಿರಾದರ್ ಆರೋಪಿ ಮೈಬೂಬ್ ಮುಲ್ಲಾ ನನ್ನು ಭೇಟಿಯಾಗಿ ಬುದ್ಧಿವಾದ ಹೇಳಿದರು. ಆದರೂ ಕೂಡ ಮತ್ತೆ ಅದೇ ಕೃತ್ಯಕ್ಕೆ ಕೈ ಹಾಕಿದ ಅಪ್ರಾಪ್ತ ಬಾಲಕಿಯು ಮನನೊಂದು ಪಟ್ಟಣದ ಓಂ ನಗರ ಬಡಾವಣೆಯಲ್ಲಿರುವ ಮನೆಯಲ್ಲಿ ನೇಣ ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಇನ್ನೂ ಈ ಕೃತ್ಯವನ್ನು ಖಂಡಿಸಿ ವೀರಶೈವ ಲಿಂಗಾಯತ ಮತ್ತು ಹಿಂದೂಪರ ಸಂಘಟನೆಗಳು ಸೇರಿ ಅಖಂಡೇಶ್ವರ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕೃತ್ಯವನ್ನು ಖಂಡಿಸಿ ಮಾತನಾಡಿದ ಹಿಂದೂಪರ ಮತ್ತು ಸಾಮಾಜಿಕ ಹೋರಾಟಗಾರ ಈಶ್ವರ್ ಹಿಪ್ಪರಗಿ ರವರು ಪಟ್ಟಣದಲ್ಲಿ ಪುಂಡ ಪೋಕರಿಗಳ ಹಾವಳಿಯಿಂದ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗಿದೆ ಲವ್ ಜಿಹಾದ್ ಅಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದರು ಪೊಲೀಸ್ ಇಲಾಖೆ ಚಿರ ನಿದ್ರೆಗೆ ಜಾರಿದ್ದಾರೆ ಎಂದು ಪೊಲೀಸರ ವಿರುದ್ಧ ದೂರರಿದರು.

ಕೆಲವು ವರ್ಷಗಳ ಹಿಂದೆ ಬೇರೆ ರಾಜ್ಯದಲ್ಲೇ ಲವ್ ಜಿಹಾದ್ ಎಂಬ ಸುದ್ದಿ ಕೇಳುತ್ತಿದ್ದೇವು ಕಳೆದ ವರ್ಷವೇ ನಮ್ಮ ರಾಜ್ಯದಲ್ಲಿ ನಡೆಯಿತು. ಈ ವರ್ಷ ನಮ್ಮ ತಾಲೂಕಿನಲ್ಲಿ ಲವ್ ಜಿಹಾದ್ ನಡೆದಿದೆ. ತಲೆ ಎತ್ತಿ ಮಾತನಾಡುವ ಘಟನೆ ಅಲ್ಲ ನಾವು ತಲೆ ತಗ್ಗಿಸಿ ಮಾತನಾಡುವ ಸಂದರ್ಭ ಬಂದು ಎದರಾಗಿದೆ ಎಂದು ಮಾತನಾಡುತ್ತಾ ಆತ್ಮಹತ್ಯೆ ಮಾಡಿಕೊಂಡ ಸಹೋದರಿ ಮಹಾಲಕ್ಷ್ಮಿ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಮತ್ತು ಕೃತ್ಯವನ್ನು ಎಸೆಗಿದ ಆರೋಪಿ ಮೈಹಿಬೂಬ್ ಮುಲ್ಲಾ ಅವನಿಗೆ ಗಲ್ಲು ಶಿಕ್ಷೆ ವಿಧಿಸಿಸಬೇಕು ಎಂದು ಅಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ್.ಎನ್.ನೀಲಕೋಡ.ಇಜೇರಿ.ಜೇವರ್ಗಿ