ಎ.ಐ.ಕೆ.ಎಸ್ ರಾಜ್ಯ ಅಧ್ಯಕ್ಷ ಡಾ, ಸಿದ್ಧನಗೌಡ ಪಾಟೀಲ್ ರು ಪತ್ರಿಕಾ ಗೋಷ್ಠಿ ನಡೆಸಿ – ಜಾತಿಗಣತಿ ವರದಿಯನ್ನು ಬಿಡುಗಡೆ ಗೊಳಿಸಲು ಸಿ.ಪಿ.ಐ ಯಿಂದ ಒತ್ತಾಯಿಸಿದರು.

ಕೂಡ್ಲಿಗಿ ಜ.13

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ನಡೆದ ಜಾತಿಗಣತಿ ಸಮೀಕ್ಷೆಯನ್ನು ಈ ಕೂಡಲೇ ಬಿಡುಗಡೆ ಗೊಳಿಸಲು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಜಾತಿಗಣತಿ ವರದಿ ಅವೈಜ್ಞಾನಿಕ ಎಂದು ಕೆಲವು ಸಮುದಾಯಗಳು ವಿರೋಧಿಸುತ್ತಿವೆ. ರಾಜ್ಯ ಬೊಕ್ಕಸದ ಹಣ ಖರ್ಚುಮಾಡಿ ನಡೆಸಿದ ಸಮೀಕ್ಷೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ಬಿಡುಗಡೆ ಮಾಡಬೇಕು ಎಂದರು. ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಾಜಿ ಎಂ.ಪಿ ಅಜೀಜ್ ಬಾಷ ಮಾತನಾಡಿ, ಸಿ.ಪಿ.ಐ ಬ್ರಿಟಿಷರ ವಸಾಹುತ ಶಾಹಿಗೆ ಪ್ರತಿರೋಧ, ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಮತ್ತು ಭೂ ಸುಧಾರಣೆಗಾಗಿ ಭಾರಿ ಪ್ರಮಾಣದಲ್ಲಿ ತೊಡಗಿಸಿ ಕೊಂಡ ಪರಿಣಾಮ 1933 ರಲ್ಲಿ ಅನೇಕ ಕಮ್ಯುನಿಸ್ಟ್ ನಾಯಕರನ್ನು ಬಂಧಿಸಲಾಯಿತು ಎಂದರು.

1946 ಮತ್ತು 1951 ರ ನಡುವೆ ತೆಲಂಗಾಣದಲ್ಲಿ ರೈತರ ದಂಗೆಯನ್ನು ರಚಿಸಿತು ಮತ್ತು ಊಳಿಗ ಮಾನ್ಯ ಧಣಿಗಳ ವಿರುದ್ದ ಗೆರಿಲ್ಲಾ ಯುದ್ಧವನ್ನು ಕೂಡಾ ಸಿ.ಪಿ.ಐ ಅಯೋಜಿಸಿರುವುದನ್ನು ನೆನಪಿಸಿ ಕೊಂಡರು. ಸಿ.ಪಿ.ಐ ರಾಜ್ಯ ಸಹಕಾರ್ಯದರ್ಶಿ ಅಮ್ಜದ್ ಖಾನ್ ಮಾತನಾಡಿ, ಬಿ.ಪಿ.ಎಲ್ ಕಾರ್ಡಗಳನ್ನು ರದ್ದು ಪಡಿಸುವ ಮೂಲಕ ಬಡವರ ಅನ್ನಕ್ಕೂ ಸಿದ್ದರಾಮಯ್ಯ ನವರ ಸರ್ಕಾರ ಕೈ ಹಾಕುವುದನ್ನು ನಾವು ವಿರೋಧಿಸುತ್ತೇವೆ. ಈ ಕೂಡಲೇ ರದ್ದು ಪಡಿಸಿರುವ ಕಾರ್ಡುಗಳನ್ನು ಪುನಃ ಸಕ್ರೀಯ ಗೊಳಿಸಬೇಕು ಎಂದರು. ಸಿ.ಪಿ.ಐ ಪಕ್ಷವು ಡಿಸೆಂಬರ್ 2025 ರಂದು 100 ವರ್ಷಗಳನ್ನು ಆಚರಿಸಿ ಕೊಳ್ಳುವ ಸಂಭ್ರಮದಲ್ಲಿದೆ. ಸಿ.ಪಿ.ಐ ಪಕ್ಷವು ವಿದ್ಯಾರ್ಥಿ, ಯುವ ಸಮುದಾಯ, ಮಹಿಳಾ, ರೈತವರ್ಗ, ಕೃಷಿ ಕೂಲಿ ಕಾರ್ಮಿಕ, ಸಂಘಟಿತ, ಅಸಂಘಟಿತ ಕಾರ್ಮಿಕ ವಲಯಗಳಿಗೆ ನಿರಂತರ ಹೋರಾಟವನ್ನು ಮಾಡಿಕೊಂಡು ನ್ಯಾಯಯುತವಾಗಿ ಬೆಂಬಲಿಸುತ್ತಾ ಬಂದಿದೆ. ಸಮ ಸಮಾಜಕ್ಕೆ ಹಗಲಿರಳು ಶ್ರಮ ವಹಿಸುತ್ತಿರುವ ಸಿ.ಪಿ.ಐ ಇನ್ನಷ್ಟೂ ಕ್ರೀಯಾಶೀಲತೆ, ಚಟುವಟಿಕೆಯ ಮೂಲಕ ಹೋರಾಟ ಮಾಡುವುದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವೆಂದರು. ಎ.ಐ.ಆರ್‌.ಡಿ.ಎಂ ರಾಜ್ಯ ಅಧ್ಯಕ್ಷ ಡಾ. ಜನಾರ್ದನ, ಎ.ಐ.ಕೆ.ಎಸ್ ರಾಜ್ಯ ಅಧ್ಯಕ್ಷರು ಡಾ. ಸಿದ್ದನಗೌಡ ಪಾಟೀಲ್, ಎ.ಐ.ವೈ.ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ವಿಜಯನಗರ ಜಿಲ್ಲಾ ಕಾರ್ಯದರ್ಶಿ ಹೆಚ್. ವೀರಣ್ಣ, ತಾಲೂಕು ಕಾರ್ಯದರ್ಶಿ ಕರಿಯಪ್ಪ ಇದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button