“ಬಯಸದೇ ಬಂದ ರಾಜಯೋಗ” ಟೆಲಿಫಿಲ್ಮ್ – ಬಿಡುಗಡೆ.

ಹುಬ್ಬಳ್ಳಿ ಜ.13

ಉತ್ತರ ಕರ್ನಾಟಕದ ಹಲವು ಪ್ರತಿಭೆಗಳು ಚಿತ್ರ ರಂಗದಲ್ಲಿ ಮಿಂಚುತ್ತಿವೆ, ಅದರಂತೆ ನಿರ್ಮಾಪಕರು ಸಹ ಈ ಭಾಗದವರು ಹೆಚ್ಚಾಗ ಬೇಕಿದೆ ಎಂದು ಹಿರಿಯ ಚಿತ್ರ ನಿರ್ದೇಶಕ, ನಟ, ನಿರ್ಮಾಪಕ ಸುಶೀಲ್ ಮೊಕಾಶಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಅಭಿ ಕ್ರಿಯೇಷನ್ಸ್ ಗದಗ ಅವರ ಅರವಿಂದ್ ಮುಳಗುಂದ ನಿರ್ದೇಶನದ “ಬಯಸದೇ ಬಂದ ರಾಜಯೋಗ” ಟೆಲಿಫಿಲ್ಮ್ ಪ್ರದರ್ಶನ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತ . ಉತ್ತರ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣ ಆಗುವಂತಹ ಹಲವು ವಿಶೇಷಗಳು ಇಲ್ಲಿವೆ, ಅವುಗಳನ್ನು ಚಿತ್ರರಂಗ ಹೆಚ್ಚು ಬಳಸಿ ಕೊಳ್ಳಬೇಕಿದೆ, ಉತ್ತಮ ಕಥೆ, ತಂತ್ರಜ್ಞಾನ ಬಳಸಿಕೊಂಡು ಸಿನಿಮಾ ಮಾಡಿದರೆ ಜನ ನೋಡುತ್ತಾರೆ. ಜನರ ಆಸಕ್ತಿಯನ್ನು ಅರಿತು ಚಿತ್ರ ಮಾಡಬೇಕು ಹಾಗೂ ಈ ಭಾಗದ ಸೊಗಡು ಇರುವಂತಹ ಚಿತ್ರಗಳು ಹೆಚ್ಚು ಬರಬೇಕಿದೆ ಎಂದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಗಂಗಾಧರ ದೊಡ್ಡವಾಡ ಆಗಮಿಸಿ ಹುಬ್ಬಳ್ಳಿಯಲ್ಲಿನ ಹಲವು ಜನರು ಚಿತ್ರ ರಂಗದಲ್ಲಿ ಕೆಲಸ ಮಾಡಿದ್ದಾರೆ, ಯುವ ಸಮುದಾಯವು ಸಹ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯ ಮಾಡಬೇಕು ಎಂದರು. ನಿರ್ಮಾಪಕ, ನಿವೃತ್ತ ಮುಖ್ಯಾಧ್ಯಾಪಕ ಚಂದ್ರಶೇಖರ ಆಡಿನ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಿರ್ದೇಶಕ ಅರವಿಂದ ಮುಳಗುಂದ ಅವರು ತಮ್ಮ ಸಿನಿಮಾದ ಅನುಭವ ಹಂಚಿಕೊಂಡು ಈ ಟೆಲಿಫೀಲ್ಮ್ ನ್ನು ಸಿದ್ದುಕೃಷ್ಣ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸ ಬಹುದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ ಬೆಂಗಳೂರು ನಂತರ ಚಿತ್ರರಂಗ ಹುಬ್ಬಳ್ಳಿಯಲ್ಲಿ ಹೆಚ್ಚು ಬೆಳೆಯುತ್ತಿರುವುದು ಸಂತೋಷದ ವಿಷಯ, ಈ ಭಾಗದ ಹಲವಾರು ಬೆಂಗಳೂರಲ್ಲಿ ಚಿತ್ರರಂಗ ಸೇರಿದ ನಂತರ ಇಲ್ಲಿಯ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಿ ಚಿತ್ರ ರಂಗದಲ್ಲಿ ಮುಂದೆ ಬರುವಂತೆ ಮಾಡಬೇಕಿರುವ ಜವಾಬ್ದಾರಿ ಅವರ ಮೇಲಿದೆ ಎಂದರು. ಇದೇ ಸಂದರ್ಭದಲ್ಲಿ ‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತ ಅಂದಾನೆಪ್ಪ.ಬ ಉಪ್ಪಿನ, ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ನಿರ್ದೇಶಕಿ ಪ್ರಿಯಾ ಸಂಭಾಜಿ ಕಲಾಲ್ ಹಾಗೂ ನಿರ್ದೇಶಕ ಸುಶೀಲ್ ಮೊಕಾಶಿ ಅವರನ್ನು ಸತ್ಕರಿಸಲಾಯಿತು. ನಂತರ ಟೆಲಿಫಿಲ್ಮ್ ನ ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳಿಗೆ ಡ್ರಾ ಮೂಲಕ ಆಯ್ಕೆ ಮಾಡಲಾಯಿತು. ಮಹೇಶ್ ಅಂಗಡಿ ಪ್ರಥಮ ಸ್ಥಾನ ಪಡೆದು ರೂ,2000/-ಅಭಿನಂದನಾಪತ್ರ, ನೆನಪಿನ ಕಾಣಿಕೆ ,ಶ್ರೀಮತಿ ಮಂಜುಳಾ ಚೌಗಲೆ ದ್ವಿತೀಯ ಬಹುಮಾನ ರೂ,1500/-ಅಭಿನಂದನಾ ಪತ್ರ, ನೆನೆಪಿನ ಕಾಣಿಕೆ, ಲಲಿತಾ ಪತ್ತಾರ್ ತೃತೀಯ ಬಹುಮಾನ ರೂ 1000/-ಅಭಿನಂದನಾಪತ್ರ, ಮೇಘಾ ಮಹೇಶ್ ಮಾಳವದೆ ರೂ 750/-ಅಭಿನಂದನಾ ಪತ್ರ ಸಮಾಧಾನಕರ ಬಹುಮಾನ ಪಡೆದರು. ವಿಜೇತರಿಗೆ ಸ್ಥಳದಲ್ಲೇ ಬಹುಮಾನ ವಿತರಿಸಲಾಯಿತು. ಡಾ, ವೀರೇಶ್ ಹಂಡಿಗಿ ಸ್ವಾಗತಿಸಿದರು. ಸಿದ್ದುಕೃಷ್ಣ ಢೇಕಣೆ ಪರಿಚಯಿಸಿದರು, ರವೀಂದ್ರ ರಾಮದುರ್ಗಕರ ನಿರೂಪಿಸಿದರು, ಕೊನೆಯಲ್ಲಿ ಡಾ, ಪ್ರಭು ಗಂಜಿಹಾಳ ವಂದಿಸಿದರು. ನಂತರ “ಬಯಸದೇ ಬಂದ ರಾಜಯೋಗ” ಟೆಲಿಫಿಲ್ಮ್ ಪ್ರದರ್ಶನ ಹಾಗೂ ಸಂವಾದ ನಡೆಯಿತು.

*****

-ಡಾ.ಪ್ರಭು ಗಂಜಿಹಾಳ

ಮೊ-೯೪೪೮೭೭೫೩೪೬

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button