ಶ್ರೀ ಸಿದ್ಧಾರೂಢ ಜ್ಯೋತಿ ಯಾತ್ರೆ ವಿಶ್ವ ಶಾಂತಿಗಾಗಿ ರಾಜ್ಯಾದ್ಯಂತ ಪ್ರವಾಸ – ನಿತ್ಯಾನಂದ ಸ್ವಾಮಿ.
ತರೀಕೆರೆ ಜ.13

ಶ್ರೀ ಸಿದ್ಧಾರೂಢ ಸ್ವಾಮಿ ಅವರ ನೂರ ತೊಂಬತ್ತನೆ ಹಾಗೂ ಶ್ರೀ ಗುರುನಾಥರೂಡರ 115 ನೇ. ಜಯಂತೋತ್ಸವದ ಅಂಗವಾಗಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಹುಬ್ಬಳ್ಳಿ ಹಾಗೂ ವಿಶ್ವ ವೇದಾಂತ ಪರಿಷತ್ ವತಿಯಿಂದ ವತಿಯಿಂದ ವಿಶ್ವ ಶಾಂತಿಗಾಗಿ ಆರೋಡ ಜ್ಯೋತಿ ಯಾತ್ರೆ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತ ಮೆರವಣಿಗೆಯ ಶೋಭೆ ಯಾತ್ರೆ ರಾಜ್ಯಾದ್ಯಂತ ಹಾಗೂ ಮಹಾರಾಷ್ಟ್ರ ಆಂಧ್ರ ಗೋವಾ ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಫೆಬ್ರವರಿ 20 ರಿಂದ 26 ರ ವರೆಗೆ ವಿಶ್ವ ಶಾಂತಿಗಾಗಿ ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಅನೇಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿತ್ಯಾನಂದ ಸ್ವಾಮೀಜಿ ತಿಳಿಸಿದರು.

ತರೀಕೆರೆ ನಗರಕ್ಕೆ ಆಗಮಿಸಿದ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದ ಸಿದ್ಧಾರೂಢರ ಭಕ್ತ ಮಂಡಳಿ ಬಸವೇಶ್ವರ ಬೀದಿಯ ಹುಬ್ಬಳ್ಳಿ ಮಠದ ಆವರಣದಲ್ಲಿ ಅಖಂಡ ಭಜನೆ ರಾತ್ರಿ ಏರ್ಪಡಿಸಿ ಸೋಮವಾರ ವಿವಿಧ ಪ್ರದೇಶಗಳಿಗೆ ರಥಯಾತ್ರೆ ಸಂಚರಿಸಿ ಜ್ಯೋತಿ ದರ್ಶನ ಹಾಗೂ ಪ್ರಸಾದ ಹಂಚಲಾಯಿತು ಜ್ಯೋತಿ ರಥಯಾತ್ರೆಯ ಕಾರ್ಯಕ್ರಮದಲ್ಲಿ ರಥಯಾತ್ರೆಯ ಸದಸ್ಯರಾದ ಶಂಕರಗೌಡ.ಎಚ್ ಸಗೊಂದಿ ಈರಣ್ಣ ಎಸ್ ಪಾಳೇದ ಅರ್ಚಕ ಸಿದ್ದಿಜಿ ತರೀಕೆರೆ ಸಿದ್ದಾರೂಢ ಭಕ್ತ ಮಂಡಳಿಯ ಸದಸ್ಯರುಗಳಾದ ಲಕ್ಳಪ್ಪರ ಮಂಜುನಾಥ ಉಪವೀರ ಸಮಾಜದ ಬೈರಪ್ಪ ಫೋಟೋ ಮಲ್ಲೇಶ್ ದೇವಾಂಗ ಬೆಣ್ಣೆ ಕೃಷ್ಣಣ್ಣ ವಾಲ್ಮೀಕಿ ಸಮಾಜದ ಮುಖಂಡರಾದ ಪರಶುರಾಮ್ ಬಾಬು ಲೋಕಣ್ಣ ಕುರುಬ ಸಮಾಜದ ಮುಖಂಡರಾದ ಶಾಮಿಯಾನ ರಘು ಟಿ.ಎನ್ ಜಗದೀಶ್ ಟಿ ಎಸ್ ಪ್ರಕಾಶ್ ಎಂ.ಟಿ ಗಂಗಾಧರ್ ಸಮಾಜ ಸೇವಕ ಟಿ.ಜಿ ಮಂಜುನಾಥ್ ರೈತ ಸಂಘದ ಮುಖಂಡ ಜಯರಾಮ್ ಮತ್ತು ಭಕ್ತ ಮಂಡಳಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಮುಂದಿನ ಭದ್ರಾವತಿಗೆ ಬೀಳ್ಕೊಡಲಾಯಿತು.