ವಿವಿಧ ಯೋಜನೆಗಳ ಕಾಮಗಾರಿ ಪರಿಶೀಲಿಸಿದ – ಸಿಇಓ ಶಶಿಧರ ಕುರೇರ.
ಹುನಗುಂದ ಸಪ್ಟೆಂಬರ್.28

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರ ಅಧ್ಯಕ್ಷತೆಯಲ್ಲಿ ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ಜರುಗಿತು.ಬಳಿಕ ಇಲ್ಲಕಲ ತಾಲೂಕಿನ ಗೂಡೂರ ಎಸ್. ಕೆ ಗ್ರಾಮಕ್ಕೆ ಭೇಟಿದ ಅವರು , ಅಮೃತ ಸರೋವರ ಕಾಮಗಾರಿ ಹರ್ ಘರ್ ಜಲ ಕಾಮಗಾರಿಯ ಪರಿಶೀಲನೆ ನಡೆಸಿದರು. ಬಳಿಕ ಗೂಗಲಮರಿ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ ಮಿಷನ್ ಕಾಮಗಾರಿ ಪ್ರಗತಿಯ ಹಂತ ಪರಿಶೀಲಿಸಿ ಗುಣಮಟ್ಟ ಕಾಪಾಡಲು ಸೂಚಿಸಿದರು. ಇನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಿದರು. ಜೊತೆಗೆ ಕುಡಿಯುವ ನೀರಿನ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಅಮರೇಶ್ ನಾಯಕ್ , ಯೋಜನಾ ನಿರ್ದೇಶಕರು ಎನ್. ವೈ ಬಸರಿಗಿಡದ , ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಮುರಳಿ ದೇಶಪಾಂಡೆ, ಜಿಲ್ಲಾ ಐಇಸಿ ಸಂಯೋಜಕ ಅಜಯ್ ಸೂಳಿಕೇರಿ ಉಪಸ್ಥಿತರಿದ್ದರು.