ಯಶವಂತರಾಯಾಗೌಡ ಪಾಟೀಲರಿಂದ ಏ.17 ರಂದು ನಾಮಪತ್ರ ಸಲ್ಲಿಕೆ
ಇಂಡಿ ಏ.16-

ಬರುವ ಮೇ.೧೦ರಂದು ಜರುಗಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇಂಡಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಾನು ಬಿ.ಫರ‍್ಮದೊಂದಿಗೆ ಏ.೧೭ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಬೀರಪ್ಪ ನಗರದಿಂದ ಮೆರವಣೆಗೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಲಾಗವುದು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಹಾಲಿ ಮಾಜಿ ಗ್ರಾ.ಪಂ, ತಾ.ಪಂ, ಜಿ.ಪಂ ಸದಸ್ಯರು, ಅಭಿಮಾನಿಗಳು ಮತ್ತು ಕಾರ್ಯಕರ್ತರು, ಅಕ್ಕ ತಂಗಿಯರು, ತಾಯಂದಿರರು ಹೆಚ್ಚಿನ ಸಂಖ್ಯೇಯಲ್ಲಿ ಆಗಮಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದ್ದಾರೆ
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್. ವಿಜಯಪುರ