ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟವರು ಸಂವಿಧಾನ ಶಿಲ್ಪಿ ಅಂಬೇಡ್ಕರ್
ಚಿಕ್ಕಮಗಳೂರು ಏ.16.
ಭಾರತಕ್ಕೆ ಸ್ವತಂತ್ರ ಬಂದ ನಂತರ ಪ್ರಬುದ್ಧವಾದ ಸಂವಿಧಾನ ನೀಡಿದವರು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್, ಎಂದು ಕ,ದ, ಸಂ,ಸ, ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ಹೊರಗುತ್ತಿಗೆ ಪೌರಕಾರ್ಮಿಕರ ಸಂಘವು ಚಿಕ್ಕಮಗಳೂರಿನ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ ಸಂಘದ ಉದ್ಘಾಟನೆ ಮತ್ತು ಡಾ. ಬಿಆರ್ ಅಂಬೇಡ್ಕರ್ ರವರ 132ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಾಬಾ ಸಾಹೇಬ್ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಎಲ್ಲರೂ ಶಿಕ್ಷಣ ಪಡೆಯಬೇಕು,ಶಿಕ್ಷಣದಿಂದಲೇ ಮಾತ್ರ ಬದಲಾವಣೆ ಸಾಧ್ಯ. ಪೌರ ಕಾರ್ಮಿಕರಾದ ತಾವುಗಳು ತಮ್ಮ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸದೊಂದಿಗೆ IAS, ಐಪಿಎಸ್, ಅಧಿಕಾರಿಗಳನ್ನಾಗಿ ಮಾಡಿರಿ. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಶೇ, 2% ಮೀಸಲಾತಿಯನ್ನು ಸರ್ಕಾರ ಕೊಟ್ಟಿದೆ ಇದರ ಸದುಪಯೋಗ ಮಾಡಿಕೊಳ್ಳಬೇಕು. ಮತ್ತು ಎಲ್ಲರೂ ಸಹ ಸಪಾಯ ಕರ್ಮಚಾರಿ ಗುರುತಿನ ಚೀಟಿಯನ್ನು ನಗರಸಭೆಯಿಂದ ಪಡೆದುಕೊಳ್ಳಬೇಕು. ಕೊಟ್ಟವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಇವರ ವಿಚಾರಗಳು ಪ್ರಪಂಚಾದ್ಯಂತ ಪ್ರಚಲಿತವಾಗಿವೆ. ಕರ್ನಾಟಕದಲ್ಲಿ ಮೂಡನಂಬಿಕೆಗೆ ಬಲಿಯಾಗಿ ದಲಿತ ಮಹಿಳೆಯರ ಬೆತ್ತಲೆ ಸೇವೆ ನಡೆಸುತ್ತಿದ್ದ ಚಂದ್ರಗುತ್ತಿ ಜಾತ್ರೆಯನ್ನು ಬ್ಯಾನ್ ಮಾಡಿಸಿ ಮಹಿಳೆಯರ ಮಾನ ಉಳಿಸಿದವರು ಮಹಾತ್ಮ ಪ್ರೊ, ಬಿ ಕೃಷ್ಣಪ್ಪನವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಮಸ್ಥಾಪಕರು ಎಂದು ಹೇಳಿದರು. ಬಹುಜನ ಸಮಾಜ ಪಕ್ಷದ ಅಧ್ಯಕ್ಷರಾದ ಕೆ ಟಿ ರಾಧಾಕೃಷ್ಣ ಮಾತನಾಡಿ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು ನೀಡಿದ ಮತದಾನವು ತುಂಬಾ ಪವಿತ್ರವಾದದ್ದು ಹೆತ್ತ ತಾಯಿ ಮಡದಿ ಸೋದರಿಯ ಶೀಲದಷ್ಟೇ ಮುಖ್ಯವಾದದ್ದು ಆದ್ದರಿಂದ ಮತವನ್ನು ಹಣ ಹೆಂಡ ಕಂಡಕ್ಕೆ ಮಾರಿಕೊಳ್ಳದೆ ಉತ್ತಮ ಸರ್ಕಾರ ರಚನೆಗೆ ಬಳಸಿರಿ ಎಂದು ಹೇಳಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ನಗರಸಭಾ ಸದಸ್ಯರು ಕಾರ್ಮಿಕ ಮುಖಂಡರು ಆದ ಶ್ರೀಮತಿ ರಾಧಾ ಸುಂದರೇಶ್ ರವರು ಮಾತನಾಡಿ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಸಹ ಗುಲಾಮಗಿರಿ,ಜೀತ ಪದ್ಧತಿ ನಿಂತಿಲ್ಲ,ಕಾರ್ಮಿಕರ ಶೋಷಣೆ ನಿಂತಿಲ್ಲ, ಸಂಘಟಿತ ಹೋರಾಟದಿಂದ ಬದಲಾವಣೆ ಸಾಧ್ಯ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕೀರ್ತಿ ಕುಮಾರ್ ಮಾತನಾಡಿ ಮನೆ ಮನೆ ಕಸ ಸಂಗ್ರಹ ಮಾಡುವ ಸಪಾಯ ಕರ್ಮಚಾರಿಗಳಿಗೆ ಕನಿಷ್ಠ ವೇತನ ನೀಡಬೇಕು ಭವಿಷ್ಯ ನಿಧಿ ಮತ್ತು ಇಎಸ್ಐ ಸೌಲಭ್ಯ ಕೊಡಬೇಕು ಆಗ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಭೀಮ್ ಆರ್ಮಿ ಅಧ್ಯಕ್ಷರಾದ ಹೊನ್ನೇಶ್ ಮಾತನಾಡಿ ಶೋಷಿತ ಸಮಾಜಗಳಿಗೆ ಹಿಂದುಳಿದವರಿಗೆ ಸಾಮಾಜಿಕ ನ್ಯಾಯವನ್ನು ಸಂವಿಧಾನ ಬದ್ಧವಾಗಿ ಅಂಬೇಡ್ಕರ್ ಅವರು ನೀಡಿದರು ಎಂದು ಹೇಳಿದರು. ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷರಾದ ರಮೇಶ್ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದು ಮೂರ್ತಿ ಸ್ವಾಗತಿಸಿ ರಾಜೇಶ್ವರಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್ ವೆಂಕಟೇಶ್.ತರೀಕೆರೆ