ಅಸ್ವಚ್ಛತೆಗೆ ಕಾರಣವಾಗಿರುವ ಭೂಮಿ ವಿಭಾಗ – ಗ್ರಾಮ ಆಡಳಿತ ವಿಭಾಗ.
ರೋಣ ಜ.15

ನಗರದ ತಾಲೂಕ ಆಡಳಿತದ ಭೂಮಿ ವಿಭಾಗದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬು ನಾರಿದರು ಕಣ್ಣು ಮುಚ್ಚಿ ಕುಳಿತ ಭೂಮಿ ವಿಭಾಗ ಗ್ರಾಮ ಆಡಳಿತ ಅಧಿಕಾರಿ ಎಂದು ವರದಿ ಯಾದರೂ ಅದಕ್ಕೆ ವಿರುದ್ಧವಾಗಿ ಕಚೇರಿಯಲ್ಲಿ ಕಡಲೆಕಾಯಿ ತಿಂದ ಗಿಡಗಳು ನೀರು ಕುಡಿದ ಖಾಲಿ ನೀರಿನ ಬಾಟಲ್ ಗಳು ಚಹಾದ ಕಪ್ಪುಗಳು, ಹೋಟೆಲ್ ನಲ್ಲಿ ಪಾರ್ಸೆಲ್ ಊಟಕ್ಕೆ ತಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಭೂಮಿ ವಿಭಾಗದ ಕೊಠಡಿ ಸಂಖ್ಯೆ 11 ರ ಎದುರಿಗೆ ಸಂಗ್ರಹಿಸಿ ಸ್ವಚ್ಛತೆಗೆ ಗಮನ ಕೊಡದೆ, ಸೊಳ್ಳೆಗಳು ವಾಸಿಸುವ ಸ್ಥಾನವಾದರೂ ಮೌನವಾಗಿರುವ ಭೂಮಿ ವಿಭಾಗ ಗ್ರಾಮ ಆಡಳಿತ ಅಧಿಕಾರಿ. ಸ್ವಚ್ಛ ಭಾರತ ಪ್ಲಾಸ್ಟಿಕ್ ನಿಷೇಧ ಅಭಿಯಾನಕೆ ವಿರೋಧವಾಗಿ ಮರಿಚೀಕೆ ಮಾಡಿದ್ದಾರೆ ಸ್ವಚ್ಛತೆ ಎಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಅತಿಯಾಗಿ ಕಸದ ರಾಶಿಯಂತೆ ಸಂಗ್ರಹಿಸಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಸೊಳ್ಳೆ ಕಡಿಯುತ್ತಿದ್ದಾವೆ ಸಂಬಂಧಿಸಿದ ಅಧಿಕಾರಿಗಳು ಸ್ವಚ್ಛತೆ ಮರಿಚೀಕೆಯಾದ ಭೂಮಿ ವಿಭಾಗ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯ ಕಡೆ ಗಮನ ಹರಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ