ಕಾಲೇಜು ಮಕ್ಕಳ ಭವಿಷ್ಯ ರೂಪಿಸುವ ವೇದಿಕೆಯಾಗಲಿ – ಜೀಶಾನ್.ಅಖಿಲ್ ಸಿದ್ಧಿಖಿ.
ಮಾನ್ವಿ ಅ.12





ವಿದ್ಯಾರ್ಥಿಗಳಿಗೆ ಕೇವಲ ವಿದ್ಯಾಭ್ಯಾಸ ಕೊಡುವುದಷ್ಟೆ ಕೆಲಸವಾಗದೇ ಭವಿಷ್ಯ ರೂಪಿಸುವ ವೇದಿಕೆಗಳಾಗಬೇಕು. ಸರ್ವಾಂಗೀಣ ಅಭಿವೃದ್ಧಿ ಜ್ಞಾನ, ಅನುಭವ, ಕೌಶಲ್ಯ ಭರಿತವಾದ ಶಿಕ್ಷಣ ಪಡೆದು ಕೊಳ್ಳಬೇಕು ಸಂಸ್ಥೆಗಳು ಸಹಾ ಈ ನಿಟ್ಟಿನಲ್ಲಿ ಶ್ರಮಿಸಬೇಕು ಒಟ್ಟಾರೆಯಾಗಿ ನಮ್ಮ ಮುಖ್ಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸಾಗಲಿ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಜೀಶಾನ್ ಅಖಿಲ್ ಸಿದ್ಧಿಖಿ ಉದ್ಘಾಟನೆಯಲ್ಲಿ ಮಾತನಾಡಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಮತ್ತು ಶ್ರೀ ವೆಂಕಟೇಶ್ವರ ಪದವಿ ಮಹಾವಿದ್ಯಾಲಯದ ವತಿಯಿಂದ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆರ್ ಸತೀಶ್ ಗೌಡ ಕಾಂಗ್ರೇಸ್ ಯುವ ಮುಖಂಡರು ಮಾತನಾಡುತ್ತಾ “ಮಕ್ಕಳಲ್ಲಿ ಉದಗಿರುವ ಪ್ರತಿಭೆಯನ್ನು ಹೊರ ಹಾಕುವ ಅವಕಾಶ ಮಾಡಿಕೊಡುವ ಆಡಳಿತ ಮಂಡಳಿಯಲ್ಲಿದ್ದು ಕೊಂಡು ಉಪನ್ಯಾಸ ಮಾಡುತ್ತಿರುವವರನ್ನು ನೋಡಿದರೆ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ ಎಂಬ ಎಲ್ಲಾ ಲಕ್ಷಣಗಳಿವೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಆಂಜನೇಯ ನಸಲಾಪುರ, ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ ಓಲೇಕಾರ, ನಮ್ಮ ಮಾನವಿ ಕಾಲೇಜು ಅಧ್ಯಕ್ಷ ಎಚ್ ಮೌನೇಶ ಗೌಡ, ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನಾಗ ಮಲ್ಲೇಶ್, ಮಾಜಿ ಯೋಧ ಆಂಜನೇಯ ಜೆಲ್ಲಿ, ಪ್ರಾಚಾರ್ಯ ಶಂಕರಪ್ಪ ಅಂಗಡಿ, ಉಪಾಧ್ಯಕ್ಷ ಮಹಿಬೂಬ್ ಮದ್ಲಾಪುರ,ಕಾರ್ಯದರ್ಶಿ ಡಾ. ಹುಲಿಯಪ್ಪ ದುಮತಿ,ಖಜಾಂಚಿ ಚಂದ್ರಶೇಖರ ಎಚ್, ಮಲ್ಲಪ್ಪ ನೆಲಕೋಳ,ಉಪನ್ಯಾಸಕರಾದ ಶೈಲಾಜಾ, ಆಫ್ರೀನ್ ಬೇಗಂ,ಅಂಬಣ್ಣ ನಾಯಕ ಉಮಳಿ ಹೊಸೂರು, ರೇಣುಕಾ, ಆಫೀಯ ಅಂಜುಮ್, ಸಂತೋಷ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್.ವಿ.ಡಿ. ಕ್ರಿಕೇಟ್ ಕಪ್ ಚಾಂಪಿಯನ್ ರಾಕರ್ಸ್, ರನ್ನರಫ್ ಇಂಡಿಯನ್ ಸ್ಟ್ರೈಕರ್ ತಂಡ, ಥ್ರೋಬಾಲ್ ಪ್ರಥಮ ದುರ್ಗಮ್ಮ ತಂಡ, ದ್ವಿತೀಯ ಯಲ್ಲಮ್ಮ ತಂಡ ಪಾರಿತೋಷಕ ಮತ್ತು ಪದಕಗಳನ್ನು ವಿತರಿಸಲಾಯಿತು.ಮಲ್ಲಿಕಾರ್ಜುನ ನಿರೂಪಿಸಿದರು. ರೇಣುಕಾ ಬಲ್ಲಟಗಿ ಸ್ವಾಗತಿಸಿದರು. ಸುದಾ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ