ಒಂದೇ ಕುಟುಂಬದ ಮೂವರು ನೀರು ಪಾಲು ಮುಗಿಲು ಮುಟ್ಟಿದ – ಸಂಬಂಧಿಕರ ಆಕ್ರಂದನ.
ಮುದ್ದೇಬಿಹಾಳ ನ.12

ಒಂದೇ ಕುಟುಂಬದ ಮೂವರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಶಿರೋಳ ರಸ್ತೆಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಮಂಗಳವಾರ (ನ, 11) ನಡೆದಿದೆ. ಸುಡುಗಾಡು ಸಿದ್ದರ ಸಮುದಾಯದ ಬಸಮ್ಮ ಕೊಣ್ಣೂರ್ (20) ತಮ್ಮ ಸಂತೋಷ್ ಚಿನ್ನಪ್ಪ ಕೊನ್ನೂರ್ (18) ಹಾಗೂ ಅಳಿಯ ರವಿ ಹನುಮಂತ ಕೊಣ್ಣೂರ್ (18) ಮೃತರು ಆದವರಾಗಿ ಗುರುತಿಸಲ್ಪಟ್ಟಿದ್ದಾರೆ. ಮಾಹಿತಿ ಪ್ರಕಾರ ಬಸಮ್ಮ ಬಟ್ಟೆ ತೊಳೆಯಲು ಕಾಲುವೆಯ ಬಳಿ ಬಂದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ, ಅಕ್ಕನನ್ನು ಉಳಿಸಲು ಪ್ರಯತ್ನಿಸಿದ ತಮ್ಮ ಸಂತೋಷ್ ಕೂಡ ನೀರಿಗೆ ಜಿಗಿದಿದ್ದಾನೆ, ಇವರಿಬ್ಬರನ್ನು ರಕ್ಷಿಸಲು ರವಿ ಕೂಡ ನೀರಿಗೆ ಇಳಿದಿದ್ದಾನೆ, ಆದರೆ ಕಾಲುವೆಯ ಆಳ ಮತ್ತು ನೀರಿನ ತೀವ್ರ ಅರಿವು ಕಾರಣಕ್ಕೆ ಮೂವರು ಮೇಲಕ್ಕೆ ಬರಲಾಗದೆ ನಿರುಪಾಲಾಗಿದ್ದಾರೆ. ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಸ್ಥಳಕ್ಕೆ ಪಿ.ಎಸ್.ಐ ಸಂಜಯ್ ತಿಪ್ಪಾರೆಡ್ಡಿ ಭೇಟಿ ನೀಡಿ, ಆಲಮಟ್ಟಿಯ ಕೆ.ಬಿ.ಜಿನಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ತಕ್ಷಣವೇ ಕಾಲುವೆ ನೀರಿನ ಹರಿವು ನಿಲ್ಲಿಸಲು ಸೂಚನೆ ನೀಡಿದರು. ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜ್ ಬಿರಾದಾರ್ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶವ ಹುಡುಕಾಟ ಕಾರ್ಯ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಬಂದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕುಟುಂಬಸ್ಥರು ಮತ್ತು ಬಂಧುಗಳು ಆಕ್ರಂದನ ಮುಗಿಲು ಮುಟ್ಟಿದೆ. ಅಲೆಮಾರಿ ವರ್ಗಕ್ಕೆ ಸೇರಿದ ಈ ಕುಟುಂಬವೂ ಅತಿ ದಾರಿದ್ರ ಜೀವನ ನಡೆಸುತ್ತಿದ್ದು, ಅಕ್ಕ ತಮ್ಮ ಅಳಿಯರನ್ನು ಕಳೆದುಕೊಂಡು ಸಂಪೂರ್ಣವಾಗಿ ಕುಟುಂಬ ಮಾನಸಿಕವಾಗಿ ಮುರಿದು ಬಿದ್ದಿದೆ. ಘಟನೆಯ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದು, ಕುಟುಂಬಕ್ಕೆ ತಲಾ ರೂ. 5 ಲಕ್ಷ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಸ್ಥಳೀಯ ಶಾಸಕರು ಮತ್ತು ಜನ ಪ್ರತಿನಿಧಿಗಳು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಡಳಿತಕ್ಕೆ ಸೂಚನೆ ನೀಡಿ ತಕ್ಷಣದ ಪರಿಹಾರ ಹಾಗೂ ನೆರವು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ ಸಂಕನಾಳ ಮುದ್ದೇಬಿಹಾಳ

