ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ನಂಬರ್ 2.ರ ಎಸ್.ಡಿ.ಎಂ.ಸಿ ರಚನೆ ಮಾಡಿ ಆಯ್ಕೆ ಮಾಡಿದರು.
ಕಲಕೇರಿ ಸ.14

ಗ್ರಾಮದ ಸರಕಾರಿ ಉರ್ದು ಪ್ರಾಥವಿುಕ ಶಾಲೆ ನಂಬರ್ 2 ರಲ್ಲಿ. ಎಸ್.ಡಿ.ಎಂ.ಸಿ ರಚನೆ ಮಾಡಲಾಗಿತ್ತು.ಈ ಶಾಲೆಯ ಅಧ್ಯಕ್ಷರಾಗಿ ಆಯ್ಕೆಯಾದ ಆಬಿದ್ ಹುಸೇನ್ ಇನಾಮ್ದಾರ್. ಉಪಾಧ್ಯಕ್ಷರಾಗಿ ಆಯ್ಕೆಯಾದ ತಾಹೇರಾಬೇಗಂ ಉಸ್ತಾದ್ ಇವರನ್ನು ಈ ಶಾಲೆಯ ಅಭಿವೃದ್ಧಿಗೆ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಪಾಧ್ಯಕ್ಷರಾಲಿ ಶಾಲೆಯ ಅಭಿವೃದ್ಧಿ ಕೆಲಸಗಳನ್ನು ಚಾಚು ತಪ್ಪದೇ ಮಾಡಬೇಕು ಶಾಲೆ ಅಂದರೆ ಒಂದು ದೇವಾಲಯ ಯಾವುದೇ ಕೆಲಸಗಳ ಬಂದರೂ ಶಾಲೆಯ ಬಗ್ಗೆ ಅನುಕಂಪ ತೋರಿಸಿ ಶಾಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಈ ಸಂದರ್ಭದಲ್ಲಿ ಕಾಸಿಂಸಾಬ ನಾಯ್ಕೋಡಿ ಇವರು ತಿಳಿಸಿದರು.

ಚಾಂದ್ ಪಾಷಾ ಹವಾಲ್ದಾರ್ ಇವರು ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಮತ್ತು ಸದಸ್ಯರುಗಳಿಗೆ ಈ ಶಾಲೆ ನಮ್ಮದು ಈ ಶಾಲೆ ಅಭಿವೃದ್ಧಿ ಕೆಲಸಗಳನ್ನು ನಾವೆಲ್ಲರೂ ಸೇರಿ ಮಾಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಗ್ರಾಮ ಪಂಚಾಯತಿಯವರು ಊರಿನ ಮುಖ್ಯಸ್ಥರು ಸೇರಿದಂತೆ ಎಸ್.ಡಿ.ಎಂ.ಸಿ ರಚನೆ ಮಾಡಿ ಆಯ್ಕೆ ಮಾಡಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ.