“ದಡಾರ ವೈರಾಣು ಸೋಂಕು ನಿರ್ಲಕ್ಷ್ಯ ಬೇಡ ಇರಲಿ ಕಾಳಜಿ” ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಗುಂಡನಪಲ್ಲೆ ಸ.14

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ, ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದಲ್ಲಿ “ದಡಾರ” ವೈರಾಣು ರೋಗ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು.ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು, ದಡಾರ ರೋಗವು ವೈರಾಣು ರೋಗವಾಗಿದ್ದು ಸಾಂಕ್ರಾಮಿಕ ಸೋಂಕುವಾಗಿದ್ದು ಸಾರ್ವತ್ರಿಕ ಚುಚ್ಚು ಮದ್ದು ಕಾರ್ಯಕ್ರಮದಲ್ಲಿ 9 ತಿಂಗಳ ವಯೋ ಮಾನದ ಹಾಗೂ 16 ತಿಂಗಳ ಪೂರ್ಣ ಗೊಂಡ ಮಕ್ಕಳಿಗೆ ದಡಾರ ಲಸಿಕೆ ಹಾಕಲಾಗುವುದು ದಡಾರ ಲಸಿಕೆ ಜೊತೆ “ಅ” ಅನ್ನಾಂಗ ಪೂರಕ ದ್ರಾವಣ ಬಾಯಿ ಮುಖಾಂತರ ನೀಡಲಾಗುವುದು. ತೀವ್ರ ಸಾಂಕ್ರಾಮಿಕವಾಗಿದೆ. ಮೀಸಲ್ಸ ವೈರಾಣವು ಕೆಮ್ಮು, ಸೀನು, ವೈಯುಕ್ತಿಕ ಸಂಪರ್ಕ ಅಥವ ಮೂಗಿನ ಅಥವ ಗಂಟಲಿನ ಸ್ರಾವಗಳ ಜೊತೆಗೆ ನೇರ ಸಂಪರ್ಕದಿಂದ ಇದು ಹರಡುತ್ತದೆ. ವೈರಾಣವು ಗಾಳಿಯಲ್ಲಿ ಅಥವಾ ಸೋಂಕಿತ ಪ್ರದೇಶದಲ್ಲಿ ಸಕ್ರಿಯವಾಗಿದ್ದು ಎರಡು ಗಂಟೆಗಳ ಕಾಲ ಸಾಂಕ್ರಾಮಿಕ ವಾಗಿರುವುದು. ಸೋಂಕಿತ ವ್ಯಕ್ತಿಯು ರೋಗ ಕಾಣಿಸಿ ಕೊಳ್ಳುವ ನಾಲ್ಕು ದಿನ ಮೊದಲೆ ಮತ್ತು ಬಂದ ನಂತರ ನಾಲ್ಕು ದಿನ ಸೋಂಕು ಹರಡುವುದು. ಜ್ವರ ಶೀತ ಕೆಮ್ಮು ಮೈಮೇಲೆ ಗಂಧೆಗಳು ದದ್ದು ಕಾಣಿಸುವುದು ಮೂಢ ನಂಬಿಕೆಯಿಂದ ದಡಾರ ನಿರ್ಲಕ್ಷ್ಯ ಬೇಡ ಮೀಸಲ್ಸ ತೀವ್ರವಾದ ಶ್ವಾಸಕೋಶದ
ಸೋಂಕು ಫ್ಲೂ ನಂತಹ ಲಕ್ಷಣಗಳು ಜ್ವರ, ಕೆಮ್ಮು, ನೀರಿನಿಂದ ಕೂಡಿದ ಕಣ್ಣು ಮತ್ತು ಸಿಂಬಳ ಸುರಿಯುವುದು. ಬಾಯಿಯಲ್ಲಿ ಕೆಂಪಾದ ತಿಳಿನೀಲಿ ತುದಿಯ ಗುಳ್ಳೆಗಳಾಗುತ್ತವೆ. ದೇಹದ ಪೂರ್ತಿ ಚರ್ಮದ ಮೇಲೆ ಚಿಕ್ಕ ಚಿಕ್ಕ ಗುಳ್ಳೆಗಳು, ಚಿಕ್ಕ ಮಕ್ಕಳ ತಜ್ಞೆ ಸಲಹೆ ಚಿಕಿತ್ಸೆ ಅಗತ್ಯವಾಗಿರುತ್ತದೆ ದಡಾರ ಗಂಭೀರತೆಯಿಂದ ಅಪೌಷ್ಟಿಕತೆ ಮಕ್ಕಳಲ್ಲಿ ಮರಣ ಅಂಧತ್ವ ಕಾಣಿಸಬಹುದು. ನೀರ್ಲಕ್ಷ್ಯ ಮಾಡದೇ ಮುಂಜಾಗ್ರತೆಯಾಗಿ ದಡಾರ ಲಸಿಕೆಯನ್ನು ಕಡ್ಡಾಯವಾಗಿ ಮಕ್ಕಳಿಗೆ ಹಾಕಿಸಬೇಕು ಅಂಧತ್ವ ನಿವಾರಣೆಗೆ “ಅ” ಅನ್ನಾಂಗ ದ್ರಾವಣವನ್ನು 9 ತಿಂಗಳ ಪೂರ್ಣ ಗೊಂಡ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ 5, ವರ್ಷ 6 ತಿಂಗಳವರೆಗೆ ಉಪಕೇಂದ್ರ ಅಂಗನವಾಡಿ ಕೇಂದ್ರಗಳಲ್ಲಿ “ಅ”ಅನ್ನಾಂಗ ದ್ರಾವಣ ನೀಡಲಾಗುವುದು. ರಾಷ್ಟ್ರೀಯ ಲಸಿಕಾ ಅಭಿಯಾನ ಕಾರ್ಯಕ್ರಮ ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬೇಕು. ದಡಾರ ವೈರಾಣು ತಡೆಗೆ ಮುಂಜಾಗ್ರತೆ ಕ್ರಮಗಳ ಪಾಲನೆ ಮಾಡಬೇಕು ಆರೋಗ್ಯವಂತ ಮಗು ದೇಶದ ಸಂಪತ್ತು ಎಂದರು. ದಡಾರ ವೈರಾಣು ಪ್ರಕರಣ ಮನೆ ಭೇಟಿ ಮುಂಜಾಗ್ರತೆ ಕ್ರಮಗಳ ಪಾಲನೆ ಆರೋಗ್ಯ ಶಿಕ್ಷಣ, ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು, ಯುವಕರು, ತಾಯಿಂದಿರು, ಗರ್ಭಿಣಿಯರು, ಬಾಣಂತಿಯರು ಭಾಗವಹಿಸಿದ್ದರು.