ತಾಲೂಕಿನಲ್ಲಿ ದಿನಕ್ಕೊಂದು ಸಮಸ್ಯೆ ಹೆಚ್ಚುತ್ತಿದೆ – ಹೋರಾಟಗಾರರ ಆಕ್ರೋಶ.
ಮಾನ್ವಿ ಜ.24

ಲೋಕೋಪಯೋಗಿ ಇಲಾಖೆ ಎ.ಇ.ಇ ಸಾಮುವೇಲಪ್ಪನ ದುರಾಡಳಿತ ಹೆಚ್ಚುತ್ತಿದ್ದರಿಂದ ಜಾಗೀರಪನ್ನೂರು ಗ್ರಾಮಸ್ಥರು ನಮಗೆ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶಾಸಕರ ಭವನದ ಮುಂದೆ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆ ಈಡೇರುವವರೆಗೂ ನಾವು ಕದಲುವುದಿಲ್ಲ. ಹಾಗೆಯೇ ಮಾನ್ವಿ ಲೋಕೋಪಯೋಗಿ ಇಲಾಖೆಗೆ ಚೀಕಲಪರ್ವಿಟು ಜಾಗೀರಪನ್ನೂರು ಗ್ರಾಮದ ರಸ್ತೆ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಎ.ಇ.ಇ ಸಾಮುವೇಲಪ್ಪ ಅವರಿಗೆ ಮನವಿ ಸಲ್ಲಿಸಿದರೂ ಬೆಲೆ ಇಲ್ಲದಂತಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಸದಾನಂದ ಪನ್ನೂರು ಕಿಡಿ ಕಾರಿದರು.
ನಮ್ಮೂರಿನ ಮೋಡಗುಂಟ ಹಳ್ಳದ ಸೇತುವೆ ನಿರ್ಮಾಣ ಮಾಡಬೇಕೆಂದು ಹಾಗು ರೈತರ ಜಮೀನುಗಳಿಗೆ ಕಾಲು ದಾರಿಯಾಗಿ ಹೋಗಲು ರಸ್ತೆ ನಿರ್ಮಾಣ ಮಾಡಬೇಕು ಎಂದು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು ಸಹ ಪ್ರಯೋಜನ ಇಲ್ಲದಂತಾಗಿದೆ ಎಂದು ಅಬ್ರಾಹಂ ಪನ್ನೂರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ