“ಹೆಣ್ಣು ಜಗದ ಕಣ್ಣು”…..

“ಹೆಣ್ಣು ಜಗದ ಕಣ್ಣು”
ಹೆಣ್ಣು ಮಗುವನ್ನು ರಕ್ಷಿಸಿ
ಓದಿಸಿ ಹೆಣ್ಣು ಜಗದ ಮೂಲ
ಸೃಷ್ಟಿಯ ಸಿರಿ ನಂದಾದೀಪ
ಜನ್ಮ ಕೊಟ್ಟು ಸಲಹುವ ಹೆಣ್ಣು
ಸೃಷ್ಠಿಕರ್ತನ ಸಮಾನಳು
ತಂದೆ ತಾಯಿ ಖುಷಿ ನಗು
ಅಣ್ಣ ಅತ್ತಿಗೆಗೆ ಮಮತೆ
ಸಹೋದರರ ರಕ್ಷಣೆಯ ದೈರ್ಯ
ಅತ್ತೆ ಮಾವರ ಆಸರೆ
ಇಳಿ ವಯಸ್ಸಲಿ ಊರಗೋಲು
ಗಂಡನಿಗೆ ಸ್ಪೂರ್ತಿ ಬಲ
ಕಲಿತ ಹೆಣ್ಣು ಜಗದ ಬೆಳಕು
ತೊಟ್ಟಿಲು ತೂಗುವ ಕೈ
ಜಗವ ತೂಗಿ ನಗುವ
ಸರ್ವ ರಂಗದಲಿ ಹೆಣ್ಣು ಸಬಲೆ
ಭಾರತ ಮಾತೆಯ ರೂಪದವಳು
ಸಮಾಜದಲಿ ಹೆಣ್ಣು ಎದಿರಿಸುವ
ಸಮಸ್ಯೆಗಳಿಗೆ ಮುಕ್ತಿ ಹಾಡಿ
ಹೆಣ್ಣು ಲಿಂಗ ತಾರತಮ್ಯ ಬೇಡ
ಬಾಲ್ಯ ವಿವಾಹ ತಡೆಯಿರಿ
ವಿದ್ಯ ಸಂಪತ್ತು ಶಕ್ತಿ ಮಾತೆ
ಹೆಣ್ಣು ಉಳಸಿ ಬೆಳಸಿ ಓದಿಸಿ
ಗೌರವಿಸಿ ಪ್ರೋತ್ಸಾಹಿಸಿ
ಭ್ರೂಣ ಹತ್ಯೆ ತಡೆಯೋಣ
ವಿಶ್ವ ಉಜ್ವಲ ನಾಳೆಗಾಗಿ
ಹೆಣ್ಣು ಸಬಲೀಕರಣ ಜಾಗೃತಿ ಇರಲಿ
ಸರ್ವಗುಣ ಸಂಪನ್ನ ಗಣಂಗಳ
ಕಾಯಕದಿ ಜಗದಲಿ ಸ್ವರ್ಗನಿ
ರ್ಮಾತೃರಗೆ ಗೌರವದ ಸಲಾಂ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಸರ್ವ ಹೆಣ್ಣು ಕುಲಕೋಟಿಗೆ
ಶುಭ ಹರುಷದ ಏಳ್ಗೇಗೆ ಶ್ರಮಿಸೋಣ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ”
ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.