ಮಲೇರಿಯಾ ಮುಕ್ತ ಭಾರತಕ್ಕಾಗಿ – ಜನ ಜಾಗೃತಿ.
ಗುಂಡನಪಲ್ಲೆ ಜ.25

ಬಾಗಲಕೋಟ ಜಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಉಪ ಆರೋಗ್ಯ ಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಗ್ರಾಮದಲ್ಲಿ ಮಲೇರಿಯಾ ಮುಕ್ತ ಭಾರತಕ್ಕಾಗಿ ಆರೋಗ್ಯ ಅರಿವು ಜನಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ನಮ್ಮ ನಿರ್ಲಕ್ಷತನದಿಂದ ಸಾಂಕ್ರಾಮಿಕ ರೋಗಳು ಬಾಧಿಸಿ ಮಾನವನನ್ನು ನರಕದ ಕೂಪಕ್ಕೆ ತಳ್ಳಿ ನರಳುವಂತೆ ಯಾಗುತ್ತದೆ. ಮಲೇರಿಯಾ ರೋಗವು ಅನಾಫಿಲೇಸ್ ಹೆಣ್ಣು ಸೊಳ್ಳೆಗಳು ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಸಾಂಕ್ರಾಮಿಕವಾಗಿ ಹರಡುತ್ತದೆ ತಲೆ ನೋವು, ಮೈ ಕೈ ನೋವು ಚಳಿಜ್ವರ ಮಲೇರಿಯಾ ಲಕ್ಷಣ ವಿರಬಹುದು. ನಿರ್ಲಕ್ಯ ಬೇಡ ನಿಮ್ಮ ಗ್ರಾಮಕ್ಕೆ ಬರುವ ಆರೋಗ್ಯ ನಿರೀಕ್ಷಣಾಧಿಕಾರಿಗಳಲ್ಲಿ ರಕ್ತ ಲೇಪನ ಮಾಡಿಸಿ ಸಹಕರಿಸಿ ಮಲೇರಿಯಾ ರೋಗಕ್ಕೆ ಸರಕಾರಿ ಆಸ್ಪತ್ರೆ ಉಚಿತ ಪರೀಕ್ಷೆ ಚಿಕಿತ್ಸೆ ಲಭ್ಯವಿರುತ್ತದೆ ಮುಂಜಾಗ್ರತೆಯಾಗಿ ಮನೆ ಸುತ್ತ ಮುತ್ತ ನೀರು ಸಂಗ್ರಹವಾಗದಂತೆ ನೋಡಿ ಕೊಳ್ಳಿ ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ಪರದೆ ನಿರೋಧಕ ಬಳಸಿ, ವಲಸೆ ಕಾರ್ಮಿಕರು ಬೇರೆ ಜಿಲ್ಲೆಗಳಿಗೆ ಕೆಲಸ ಮಾಡಲು ಹೋಗಿ ಬಂದವರಿಗೆ ಜ್ವರ ತಲೆನೋವು ಚಳಿ ಜ್ವರ ಕಾಣಿಸಿದರೆ ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಮಲೇರಿಯಾ ಮುಕ್ತ ಭಾರತಕ್ಕಾಗಿ ಗ್ರಾಮದ ಮುಖಂಡರು ಯುವಕರು ಸಮಾಜ ಸೇವಕರು ಆರೋಗ್ಯ ಇಲಾಖೆಯ ಜೋತೆ ಮಲೇರಿಯಾ ಮುಕ್ತಕ್ಕಾಗಿ ಕೈಜೋಡಿಸಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೊಲನೆ ಮಾಡೋಣ ಸೊಳ್ಳೆ ಕಡಿತ ದಿಂದ ತಪ್ಪಿಸಿ ಕೊಳ್ಳಲು ಸ್ವಯಂ ರಕ್ಷಣಾ ಕ್ರಮಗಳನ್ನು ಪಾಲಿಸೋಣ ಎಂದು ಜನಜಾಗೃತಿ ಮೂಡಿಸಿದರು. ಗ್ರಾಮದಲ್ಲಿ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗಹಿಸಿ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಯಿತು. ಮಲೇರಿಯಾ ಮುಕ್ತ ಭಾರತಕ್ಕಾಗಿ ಆರೋಗ್ಯ ಅರಿವು ಜನಜಾಗೃತಿ ಕಾರ್ಯದಲ್ಲಿ, ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಪ್ರಾಥಮಿಕ ಶಾಲಾ ಗುರು ವೃಂದವರು, ಅಂಗನವಾಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಯುವಕರು ಮುದ್ದು ಮಕ್ಕಳು ಭಾಗವಹಿಸಿದ್ದರು.