ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ತ ಹಳ್ಳಿ ಸೊಗಡು – ಸುಗ್ಗಿ ಸಂಭ್ರಮ ಕಾರ್ಯಕ್ರಮ ಜರಗಿತು.
ಮುಗಳಖೋಡ ಜ.13

ಶ್ರೀ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆ ಹಾಗೂ ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಮುಗಳಖೋಡ ಇವರ ಆಶ್ರಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ಯ ಹಳ್ಳಿ ಸೊಗಡು-ಸುಗ್ಗಿ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಪ್ರದಾಯದ ಉಡುಗೆ ತೊಟ್ಟು ವಾದ್ಯ ಮೇಳ ದೊಂದಿಗೆ ಶ್ರೀ ಸಿದ್ದರಾಮೇಶ್ವರ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿದರು ತದನಂತರ ವಿದ್ಯಾರ್ಥಿಗಳು ನಿರ್ಮಿಸಿದ ಧವಸ ಧಾನ್ಯಗಳ ಖಣದ ರಾಶಿಗೆ ಪೂಜೆ ಸಲ್ಲಿಸಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಎಸ್.ಜಿ ಹಂಚಿನಾಳ ಸರ್ ವಹಿಸಿ ಕೊಂಡಿದ್ದರು. ಹಾಗೂ ಮುಖ್ಯ ಅಥಿತಿಗಳಾಗಿ ಜಿ.ಎಸ್ ಜಂಬಗಿ ಹಾಗೂ ವಿ.ಎಂ ಕರಡಿ ವಹಿಸಿ ಕೊಂಡಿದ್ದರು ಬಿ.ಬಿ ಬಂಡಿಗನಿ ಬಿ.ವಿ ಹಟ್ಟಿಮನಿ ವಾಯ್.ಕೆ ಕಾಕಂಡಕಿ ಎ.ಎಂ ಮ್ಯಾಗೇರಿ ಎಸ್.ಎಂ ಢವಳೇಶ್ವರ ಎ.ಎಸ್ ಸಾರವಾಡೆ ಎಂ.ಡಿ ಹಳಬರ ಎ.ಸಿ ಹಿರೇಮಠ ಉಪಸ್ಥಿತರಿದ್ದರು ಪಿ.ಆರ್ ತೆಳಗಡೆ ಕಾರ್ಯಕ್ರಮ ನಿರೂಪಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ್.ಆರ್.ತೇಳಗಡೆ.ರಾಯಬಾಗ