ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗಣಿತ ಮೇಳ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದ – ಗಣಿತ ಶಿಕ್ಷಕಿ ರೋಹಿಣಿ.
ಗುಡೇಕೋಟೆ ಜ.11

ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಶನಿವಾರ ರಂದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ 2024-25 ನೇ. ಸಾಲಿನ ಗಣಿತ ಮೇಳದಲ್ಲಿ ಅನೇಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಗಣಿತದ ಸೂತ್ರಗಳ, ಪ್ರಮೇಯಗಳ, ಆಕೃತಿಗಳ, ತ್ರಿಭುಜ ಆಕೃತಿ, ಥೇಲ್ಸ್ ಪ್ರಮೇಯ ತ್ರಿಭುಜಗಳು, ಕೋನಗಳು, ಅನುಪಾತ ಕೋನಗಳು, ಜೋಡಿಸಿದ ಘನಾಕೃತಿಗಳು, ತ್ರಿಕೋಮಿಯ ನಿರ್ದಿಷ್ಟ ಕೋಷ್ಟಕ, ಹಾಗೆ ವಿವಿಧ ರೀತಿಯ ತಮ್ಮ ತಮ್ಮ ಕಲಾ ಪ್ರತಿಭೆಯಿಂದ ಮಾಡಿದಂತಹ ಗಣಿತ ಮೇಳದ ಗುಡೇಕೋಟೆಯ ರಥೋತ್ಸವ ಎನ್ನುವ ರಥವನ್ನು ಸಹ ಕೆಲವರು ಥರ್ಮಲ್ ಕೋಲಗಳಿಂದ ಹಾಗೂ ಪೇಪರ್ಸ್ ಕಟಿಂಗ್ ಗಳ ಮೂಲಕ ಗಣಿತ ಶಾಸ್ತ್ರಜ್ಞರ ಭಾವ ಚಿತ್ರಗಳನ್ನು ಕಲಾತ್ಮಕ ಚಿತ್ರಗಳಲ್ಲಿ ಅಳವಡಿಸುವುದರ ಮೂಲಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಲ್ಲರ ಗಮನ ಸೆಳೆದರು.

ಹಾಗೆ ಇನ್ನೂ ಕೆಲ ವಿದ್ಯಾರ್ಥಿಗಳು ಊಟ ಮಾಡುವಂತ ಅಕ್ಕಿಯನ್ನು ಬಳಸಿ ಕೊಂಡು ಬಣ್ಣ ಬಣ್ಣದ ಮೂಲಕ ಗಣಿತ ಸೂತ್ರಗಳು ರಂಗೋಲಿಯ ಮೂಲಕ ಚಿತ್ರಗಳನ್ನು ಬಿಡಿಸುವುದ ರೊಂದಿಗೆ ತಮ್ಮ ಪ್ರತಿಭೆಗಳನ್ನು ತೋರಿಸಿರುವುದನ್ನ ಕಂಡ ಶಾಲಾ ಶಿಕ್ಷಕರು ತುಂಬಾ ಸಂತೋಷ ಪಡುವುದರೊಂದಿಗೆ ಮುಂದಿನ ದಿನ ಮಾನಗಳಲ್ಲಿ ಇವರ ಪ್ರತಿಭೆಗಳು ಸಹ ಉನ್ನತವಾಗಿ ಬೆಳೆಯಲಿ ಎಂದು ಗಣಿತ ಶಿಕ್ಷಕಿ ಯಾರಾದ ರೋಹಿಣಿ ರವರು ಹಾಗೂ ಗಣಿತ ಮೇಳದ ಕುರಿತು ಹಾಗೂ ಗಣಿತ ಶಾಸ್ತ್ರಜ್ಞರ ಕುರಿತು ವಿದ್ಯಾರ್ಥಿಗಳಿಗೆ ತಮ್ಮ ಗಣಿತ ಅನುಭವದ ಕೆಲವರ ವಿಷಯಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಂಚಿ ಕೊಂಡರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರುಕ್ಮಿಣಿ ಬಾಯಿ ಶೇಪುರ್ ಉಪ ಪ್ರಾಚಾರ್ಯರು ವಹಿಸಿ ಕೊಂಡಿದ್ದರು, ಗಣಿತ ಮೇಳವನ್ನು ಆಯೋಜಿಸಿದಂತಹ ಗಣಿತ ಶಿಕ್ಷಕರಾದ ಶ್ರೀಮತಿ ರೋಹಿಣಿ, ಪರ್ವಿನ್. ಎಚ್, ಗಣಿತ ಶಿಕ್ಷಕರಾದ ಪಾಂಡುರಂಗ, ರವಿಕುಮಾರ್ ಹಾಗೂ ಶಾಲೆಯ ಮುಖ್ಯ ಗುರುಗಳು ಎಲ್ಲಾ ಸಹ ಶಿಕ್ಷಕರು ಹಾಗೂ ಅಂಬೇಡ್ಕರ್ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ