ಎಲ್ಲರಿಗೂ ಅಚ್ಚರಿ ಮೂಡಿಸಿದ ಕಡ್ಲಿಮಟ್ಟಿ ಕಾಶಿಬಾಯಿ – ಕಿರು ನಾಟಕ.

ಕೋಡಿಕೊಪ್ಪ ಫನರೇಗಲ್ಲ ಕೋಡಿಕೊಪ್ಪದ ಶ್ರೀ ವೀರಪ್ಪಜ್ಜ ನವರ ಪುಣ್ಯಾರಾಧನೆ ಶತಮಾನೋತ್ಸವದ 5 ನೇ. ದಿನದ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪುರಾಣ ಅಂಗವಾಗಿ ನರೇಗಲ್ಲ ಎಸ್.ಎ.ವಿ.ವಿ.ಪಿ ಸಮಿತಿಯ ಕಿವುಡ ಮತ್ತು ಮೂಗ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳು ಕಡ್ಲಿಮಟ್ಟಿ ಕಾಶಿಬಾಯಿ ಕಿರುನಾಟಕ ಪ್ರದರ್ಶಿಸಿದರು. ಶ್ರೀ ವೀರಪ್ಪಜ್ಜ ನವರ ಜಾತ್ರಾ ಮಹೋತ್ಸವದಲ್ಲಿ ಸ್ಥಳೀಯ ಶ್ರೀ ಅನ್ನದಾನೇಶ್ವರ ಸಂಸ್ಥೆಯ ಕಿವುಡ ಮತ್ತು ಮೂಗ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಕಡ್ಲಿಮಟ್ಟಿ ಕಾಶಿಬಾಯಿ ಸೂರೆಗೊಂಡಿತು. ನಾಟಕ ಜನ ಮನ ಗಮನ ಸೇಳಿದ್ದಿದ್ದಾರೆ ಕಥನಗೀತ ರೂಪದಲ್ಲಿ ಮೂಡಿ ಬಂದ ಈ ನಾಟಕ ಎಲ್ಲರ ಗಮನ ಸೆಳೆಯಿತು. ಕಿವಿ ಕೇಳದ, ಬಾಯಿ ಇಲ್ಲದ ಮಕ್ಕಳು ಎಲ್ಲವನ್ನೂ ಅರ್ಥ ಮಾಡಿ ಕೊಂಡು ತಮ್ಮ ಭಾವಾಭಿನಯ ದಿಂದ ಎಲ್ಲರ ಮೆಚ್ಚುಗೆ ಪಡೆದರು. ಚೈತ್ರಾಳ ಕಾಶಿಬಾಯಿ ಪಾತ್ರ, ಮಲ್ಲಿಕಾರ್ಜುನ ಬಿಂಗಿಯ ಸ್ಟೇಷನ್ ಮಾಸ್ಟರ್ ಪಾತ್ರ, ವೀರೇಶ ಅಂಗಡಿಯ ಕಾಶಿಬಾಯಿ ಗಂಡನ ಪಾತ್ರ,ತರುಣ ಕುಮಾರನ ಸೂತ್ರಧಾರನ ಪಾತ್ರ ಮನದಲ್ಲಿ ಉಳಿಯುವಂತೆ ಮೂಡಿ ಬಂದವು. ಶಿಕ್ಷಕ ಆರ್. ಕೆ. ಬಾಗವಾನ ಅವರ ಪರಿಕಲ್ಪನೆಯಲ್ಲಿ, ಶರಣಪ್ಪ ಅರಮನಿಯವರ ಕಲಾ ಮತ್ತು ಸಂಚಾಲಕತ್ವದಲ್ಲಿ ಶ್ರೀಕಾಂತ ನವಲಗರಿ ಮೂಡಿ ಬಂದಿತು. ಅವರ ನಿರ್ದೇಶನದಲ್ಲಿ ಪ್ರವಚನಕಾರ ಡಾ, ವಿಶ್ವನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂದಿನ ಪೀಳಿಗೆಗೆ ಇಂತಹ ನಾಟಕಗಳ ಅವಶ್ಯಕತೆ ಬಹಳಷ್ಟಿದೆ. ನಾಟಕದಲ್ಲಿನ ದುಷ್ಟ ಅಂಶಗಳ ಕಡೆಗೆ ಗಮನ ನೀಡದೆ ಒಳ್ಳೆಯ ಮತ್ತು ಮಾರ್ಗದರ್ಶನ ಪರವಾದ ಅಂಶಗಳ ಕಡೆಗೆ ನಾವು ಮನಸ್ಸನ್ನು ಕೇಂದ್ರೀಕರಿಸ ಬೇಕು. ಈ ನಾಟಕವನ್ನು ಕಿವುಡ ಮತ್ತು ಮೂಗ ಮಕ್ಕಳು ಅಭಿನಯಿಸಿದ್ದು ಅಚ್ಚರಿ ಪಡುವಂತಿದೆ ಎಂದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ.ರೋಣ.ಗದಗ