ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅಮಾನವೀಯ ಕ್ರೂರತೆಗೆ – ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತೀವ್ರ ಖಂಡನೆ.
ಮುದ್ದಂಗುಡ್ಡಿ ಫೆ.08

ಪೋತ್ನಾಳ ಗ್ರಾಮದಲ್ಲಿ ಮುದ್ದಂಗುಡ್ಡಿ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ಅದೇ ಗ್ರಾಮದ ಶಿವನಗೌಡ ಎಂಬುವನಿಂದ ಸಂತ್ರಸ್ತೆಯ ಸ್ವಂತ ತಮ್ಮ ನನ್ನನು ಜೊತೆಗೆ ಕರೆದು ಕೊಂಡು ಬಂದು ಶಾಲೆಯವರಿಗೆ ಭರವಸೆ ಮೂಡಿಸಿ ಶಾಲೆ ಬಿಟ್ಟ ನಂತರ ಅಪ್ರಾಪ್ತ ಏಳು ವರ್ಷದ ಬಾಲಕಿಯನ್ನು ಮನೆಗೆ ತಲುಪಿಸುವ ನೆಪ ಹೇಳಿ ಶಾಲೆಯ ಹೊರವಲಯದ ಕಟ್ಟಡದಲ್ಲಿ ಅತ್ಯಾಚಾರ ವೆಸಗಿ ತನ್ನ ಊರಿನ ದಾರಿಯಲ್ಲಿ ಬಿಟ್ಟು ಹೋಗಿರುವುದು ಅತ್ಯಂತ ಧಾರುಣ ಮತ್ತು ಮನ ಕಲಕುವ ಘಟನೆ ಒಬ್ಬ ಅಪ್ರಾಪ್ತ ಶಾಲಾ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಯಿಂದ ನಡೆದ ಅತ್ಯಾಚಾರ ಮತ್ತು ಇತ್ತೀಚಿಗೆ ಸಿಂಧನೂರಿನಲ್ಲಿ ಕಾಲೇಜಿನ ಪಕ್ಕದಲ್ಲಿರುವ ಲೇಔಟ್ ನಲ್ಲಿ ಶಿಫಾ ಎಂಬ ಬಿ.ಎಸ್.ಸಿ ಓದುತ್ತಿರುವ ವಿದ್ಯಾರ್ಥಿನಿಯ ಕೊಲೆ ಪ್ರಕರಣ ನಮ್ಮ ಸಮಾಜದ ದುರಂತದ ಚಿತ್ರಣ ನೀಡುತ್ತದೆ. ಈ ಅಮಾನವೀಯ ಮತ್ತು ಹೀನ ಕೃತ್ಯಗಳನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.ಇಂತಹ ಘಟನೆಯಲ್ಲಿ ಶಾಲಾ ಆಡಳಿತದ ನೇರ ಪಾತ್ರ ಇಲ್ಲದಿದ್ದರೂ, ಇದು ಮಕ್ಕಳ ಭದ್ರತೆ ಮತ್ತು ನಮ್ಮ ಸಮಾಜದ ವೈಫಲ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಒಂದು ಬಾಲಕಿಯ ಶಿಕ್ಷಣ ಪಡೆಯಲು ಹೋಗಿ, ಇಂತಹ ಕ್ರೂರತೆಯ ಅತ್ಯಂತ ಖೇದಕಾರಿ ಮತ್ತು ಅಸಹ್ಯಕರವಾಗಿದೆ. ಈ ಪತ್ರಿಕಾ ಹೇಳಿಕೆಯ ಮುಖಾಂತರ ನಮ್ಮ ಒತ್ತಾಯಗಳು ಈ ಕೆಳಗಿನಂತಿವೆ,
1. ಅಪರಾಧಿಯನ್ನು ತಕ್ಷಣ ಬಂಧಿಸಲಾಗಿದೆ ಯಾದರೂ ಅವನಿಗೆ ತಕ್ಕ ಶಿಕ್ಷೆ ನೀಡಿ ಗಲ್ಲಿಗೇರಿಸ ಬೇಕು ಮುಂದೆ ಯಾರೂ ಇಂತಹ ಅಮಾನುಷ ಕೃತ್ಯ ಮಾಡಲು ಧೈರ್ಯ ಮಾಡಬಾರದು.
2. ಶಿಕ್ಷಣ ಸಂಸ್ಥೆಗಳ ಸುತ್ತಲೂ ಭದ್ರತಾ ಕ್ರಮಗಳನ್ನು ಕಡ್ಡಾಯ ಗೊಳಿಸಿ ಶಾಲಾ ಮಕ್ಕಳ ಸುರಕ್ಷತೆಯ ಜವಾಬ್ದಾರಿ ಹೆಚ್ಚಿಸಬೇಕು.
3. ಮಕ್ಕಳಿಗೆ ಆತ್ಮ ರಕ್ಷಣೆ (Self-defense) ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸ ಬೇಕು, ಮತ್ತು ಅವರು ಸಂಶಯಾಸ್ಪದ ಪರಿಸ್ಥಿತಿಗಳನ್ನು ಅರಿಯುವ ಸಾಮರ್ಥ್ಯವನ್ನು ಬೆಳಸ ಬೇಕು.
4. ಈ ರೀತಿಯ ಘಟನೆಗಳು ಪುನರಾವರ್ತನೆ ಯಾಗದಂತೆ ತಕ್ಷಣದ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
5. ಸಾಮಾಜಿಕ ಜಾಗೃತಿ ಅಭಿಯಾನ ನಡೆಸಿ, ಪೋಷಕರು, ಶಿಕ್ಷಕರು, ಮತ್ತು ವಿದ್ಯಾರ್ಥಿಗಳಲ್ಲಿ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕು.
6. ಮಹಿಳಾ ಮತ್ತು ವಿದ್ಯಾರ್ಥಿನಿಯರ ರಕ್ಷಣೆಗೆ ಸೂಕ್ತವಾದ ಕ್ರಮಗಳನ್ನು ಜರುಗಿಸ ಬೇಕು.
ಇದು ಕೇವಲ ಆಕೆಯ ಕುಟುಂಬದ ದುಃಖ ಮಾತ್ರವಲ್ಲ, ಇಡೀ ಸಮಾಜದ ಅವಮಾನವಾಗಿದೆ. ನಮ್ಮ ಮಕ್ಕಳು ಸುರಕ್ಷಿತವಾಗಿರಲು, ಇಂತಹ ಕ್ರೌರ್ಯಗಳ ವಿರುದ್ಧ ನಾವು ಒಂದಾಗಿ ಧ್ವನಿ ಎತ್ತಬೇಕು. ನಾವೆಲ್ಲರೂ “ಮಕ್ಕಳ ಸುರಕ್ಷತೆ ನಮ್ಮ ಜವಾಬ್ದಾರಿ” ಎಂಬ ಮಾತನ್ನು ಮನದಲ್ಲಿ ಇಟ್ಟು ಕೊಂಡು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೆ ನಮ್ಮ ಹೋರಾಟ ಮುಂದುವರಿಯ ಬೇಕು…..!
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ