ವಿದ್ಯಾರ್ಥಿ ಜೀವನ ಅಮೂಲ್ಯವಾದದು ಅದನ್ನು ಉತ್ತಮ ಗೊಳಿಸಿ ಕೊಳ್ಳಬೇಕು – ಸಂಜಯ.ರಡ್ಡೆರ ಹೇಳಿಕೆ.
ರೋಣ ಫೆ.09

ಮುಖ್ಯ ಅಥಿತಿಗಳಾದ ಸoಜಯ್ ರಡ್ಡೆರವರು ಕಾರ್ಯಕ್ರಮ ಉದ್ದೇಶಿಸಿ ಎಲ್ಲರಿಗೂ ತಾವು ಕಳೆದುಕೊಂಡು ಬಂದಂತಹ ಬಾಲ್ಯದ ಜೀವನ ನೆನಪಿರುತ್ತದೆ. ಹಾಗೆಯೇ ಕೆಲವೊಂದು ನೆನಪುಗಳು ನಮ್ಮಲ್ಲಿ ಹಚ್ಚ ಹಸುರಾಗಿ ಉಳಿದುಕೊಂಡು ಬಿಡುತ್ತವೆ. ಕೆಲವೊಂದು ಸಿಹಿ ನೆನಪುಗಳಾದರೆ ಮತ್ತಷ್ಟು ಕಹಿ ನೆನಪುಗಳಿಂದ ಕೂಡಿರುತ್ತವೆ. ನಾವು ಚಿಕ್ಕವರಿದ್ದಾಗ ಎಲ್ಲಾ ಸಣ್ಣ ಪುಟ್ಟ ವಿಷಯಕ್ಕೂ ಹೆಚ್ಚು ಖುಷಿ ಪಡುತ್ತಿದ್ದೆವು. ಶಾಲಾ ದಿನಗಳ ಆರಂಭದ ದಿನ ನಮಗೆ ಹೊಸ ಪುಸ್ತಕಗಳನ್ನು ನೀಡುತ್ತಿದ್ದರು. ಹೊಸ ಬ್ಯಾಗ್ ನೊಳಗೆ ಶಾಲೆಯಲ್ಲಿ ಸಿಕ್ಕಿದ ಪುಸ್ತಕಗಳನ್ನು, ಸ್ಲೇಟ್ ಬಳಪವನ್ನು ತುಂಬಿ ಕೊಂಡು ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು ಖುಷಿಯಿಂದ ಶಾಲೆಗೆ ಹೋಗುತ್ತಿದ್ದೆವು. ಅಪ್ಪ ನಮ್ಮನ್ನು ಶಾಲೆಗೆ ಬಿಟ್ಟು ಮರಳುತ್ತಿದ್ದರು. ಹಾಗೆಯೇ ನಾವು ಶಾಲೆಗೆ ಹೋಗಿ ಪಾಲಿನಂತೆ ತರಗತಿ ಗುಡಿಸಿ ಸ್ವಚ್ಛವಾಗಿ ಇಟ್ಟು ಕೊಳ್ಳುವುದು ಅದಾದ ಅನಂತರ ಮನೆಯಲ್ಲಿ ಮಾಡಿದ ತುಂಟಾಟದ ಬಗ್ಗೆ ಸ್ನೇಹಿತರಲ್ಲಿ ಹೇಳಿ ಕೊಳ್ಳುತ್ತ ಆನಂದಿಸುತ್ತಿದ್ದೆವು. ಬೆಳಿಗ್ಗೆ 9.30 ಆಯಿತು ಎಂದರೆ ಪ್ರಾರ್ಥನೆಯ ಬೆಲ್ ಹೊಡೆದು ಎಲ್ಲರನ್ನೂ ಸಾಲಿನಲ್ಲಿ ನಿಲ್ಲಿಸಿ ಪ್ರಾರ್ಥನೆ ಮಾಡಿಸುತ್ತಿದ್ದರು. ಪ್ರಾರ್ಥನೆ ಮುಗಿದ ಬಳಿಕ ಅವರವರ ಕ್ಲಾಸಿಗೆ ಹೋಗಿ ಗಲಾಟೆ ಮಾಡುತ್ತಾ ಕುಳಿತುಕೊಂಡು ಬಿಡುವುದು.ಹೀಗೆ ಅನೇಕ ಬಾಲ್ಯದ ನೆನಪುಗಳ ಬಗ್ಗೆ ಮಾತನಾಡಿದರು ರೋಣ ನಗರದ ಪ್ರತಿಷ್ಠೆ ಹೊಂದಿರುವ ಗ್ರೀನ್ ವುಡ್ ಇಂಟರ್ನಾಷನಲ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಸಿದ್ದರಾಮೇಶ್ವರ ಪ್ರಾಥಮಿಕ ಶಾಲೆಯಲ್ಲಿ ಫೆಬ್ರುವರಿ 08 ರಂದು 13 ನೇ. ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ವಿಜೃಂಭಣೆ ಯಿಂದ ನಡೆಯಿತು. ಶ್ರೀ ಸಿದ್ದರಾಮೇಶ್ವರ ಸಮಿತಿ ಅಧ್ಯಕ್ಷ ಅವಿನಾಶ ಸಾಲಿಮನಿರವರು ಕಾರ್ಯಕ್ರಮ ಉದ್ದೇಶಿಸಿ ಶಾಲೆಯ ಪ್ರಗತಿಯ ಬಗ್ಗೆ ಹಾಗೂ ವಿದ್ಯಾರ್ಥಿಗಳ ಗುರಿ ಉದ್ದೇಶಗಳ ಬಗ್ಗೆ ಮಾತನಾಡಿದರು. ಈ ಸ್ನೇಹ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಗುಲಗಂಜಿ ಮಠದ ಗುರುಪಾದ ಶ್ರೀ ಗಳು ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಪಡೆದಿದ್ದರೆ ಅದರ ಹಿಂದೆ ಪ್ರತಿಯೊಬ್ಬ ಗುರುವಿನ ಶ್ರಮ ಅಡಗಿರುತ್ತದೆ. ಅವರು ಸುಪಾದಿಸಿದ ವಿದ್ಯೆಯನ್ನು ಧಾರೆ ಎರೆಯುವ ಮೂಲಕ ಕಟ್ಟಿದ ಜ್ಞಾನದಿಂದಲೆ ನಾವು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂಬುದನ್ನು ಯಾರೂ ಮರೆಯ ಬಾರದು ಎಂದು ಆಶೀರ್ವಚನ ನೀಡಿದರು. ನಂತರ ಶಾಲೆಯ ವಿದ್ಯಾರ್ಥಿಗಳಿಂದ ಬಗೆ ಬಗೆಯ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಿವ್ಯ ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು, ಎಸ್.ಎಂ ಕೊಟಗಿ ಆಡಳಿತ ಅಧಿಕಾರಿಗಳು ಮಂಜುನಾಥ್ ರಾಠೋಡ್ ಸುನೀತಾ ರಾಬಾಮಹೇಶ್ ಅಚ್ಚಿನಗೌಡ್ರಪಲ್ಲವಿ ರಾಠೋಡ ನೃತ್ಯ ಸಂಯೋಜಕರಾದ ಮುದ್ದುಸಾರ ಕಲಾಲ ಮಂಜುನಾಥ್ ರಾಠೋಡ್ ಗದಗವಾಣಿ ಸಂಪಾದಕರು ಶ್ರೀ ಸಿದ್ದರಾಮೇಶ್ವರ ಸಮಿತಿ ಅಧ್ಯಕ್ಷ ಅವಿನಾಶ ಸಾಲಿಮನಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಗುರುಗಳಾದ ಅಭಿಷೇಕ ಇನಾಮ್ದಾರ್ ಕಾರ್ಯಕ್ರಮ ನಿರೂಪಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ. ಗದಗ