ಯುವ ಕಾಂಗ್ರೆಸ್ ಪಕ್ಷದ ಜಿಲ್ಲಾ – ಅಧ್ಯಕ್ಷರಾಗಿ ಅಶೋಕ್.ಬಿ ನಾಯ್ಕ ಆಯ್ಕೆ.
ಹೊಸಪೇಟೆ ಫೆ.09

ಕೆಎಂಎಫ್ ಅಧ್ಯಕ್ಷ ಎಸ್.ಭೀಮಾ ನಾಯ್ಕ ಪುತ್ರ ಅಶೋಕ್.ಬಿ ನಾಯ್ಕ ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಶೋಕ್ ನಾಯ್ಕ 23,624 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಶೇಕ್ ತಾಜುದ್ದೀನ್ 8,838 ಮತಗಳನ್ನು ಪಡೆದು ಶೇಕ್ ತಾಜುದ್ದೀನ್ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.

ಜೆ.ಶಿವಕುಮಾರ 3,746 ಮತಗಳನ್ನು ಗಳಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಯ ಗಳಿಸಿದ್ದಾರೆ. ಪ್ರದೀಪ್ ಬಾವಿಕಟ್ಟಿ 3,642 ಮತ ಪಡೆದು ಬ್ಲಾಕ್ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಜಿಲ್ಲೆಯಾದ್ಯಂತ 1,12,524 ಮತಗಳನ್ನು ಚಲಾವಣೆ ಯಾಗಿದ್ದು, ಈ ಪೈಕಿ 58,363 ಮತಗಳು ತಿರಸ್ಕೃತ ಗೊಂಡಿವೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ