ಫೆ. 19 ರಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಯಿಂದ – ನಿಮ್ಮೊಂದಿಗೆ ನಾವು ಕಾರ್ಯಕ್ರಮ.
ಹುನಗುಂದ ಫೆ.16

ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆ ಮತ್ತು ಮಕ್ಕಳಲ್ಲಿ ಚಿತ್ರ ಕಲಾ ಅಭಿರುಚಿಯನ್ನು ಬೆಳೆಸುವ ಉದ್ದೇಶ ದಿಂದ ಕರ್ನಾಟಕ ಲಲಿತ ಕಲಾ ಅಕಾಡೆಮಿ ಬೆಂಗಳೂರು ವತಿಯಿಂದ ಫೆ. 19 ರ ಬುಧವಾರ ದಂದು ಬೆಳಗ್ಗೆ 10:30 ಗಂಟೆಗೆ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಿಮ್ಮೊಂದಿಗೆ ನಾವು ಕಲಾವಿದರ ನಡೆ ಜನ ಸಾಮಾನ್ಯರ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ಚಂದ್ರಕಾಂತ ಸರೋದೆ ಹೇಳಿದರು. ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಚಿತ್ರಕಲೆ ಮತ್ತು ಲಲಿತ ಕಲೆಯ ಕೌಶಲ್ಯ ಕಡಿಮೆಯಾಗುತ್ತಿದ್ದು. ಮಕ್ಕಳಲ್ಲಿ ಇದರ ಮಹತ್ವವನ್ನು ತಿಳಿಸುವುದ ಕೋಸ್ಕರ ಮತ್ತು ಅವರಲ್ಲಿ ಚಿತ್ರ ಕಲೆಯ ಒಲವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ವತಿಯಿಂದ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದು. ಈ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ, ವಿಮರ್ಶೆ, ಪ್ರದರ್ಶನ ಇದ್ದು. ತಾಲೂಕಿನ ವಿವಿಧ ಶಾಲೆಗಳ 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ. ಚಿತ್ರ ಕಲಾ ಪ್ರದರ್ಶನ ಹಾಗೂ ಶಾಲಾ ಮಕ್ಕಳ ಕಲಾ ಶಿಬಿರ ಕೂಡಾ ಜರಗಲಿದೆ. ಶಾಸಕ ವಿಜಯಾನಂದ ಕಾಶಪ್ಪನವರ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ ಕುಮಾರ ಅವರು ಅಧ್ಯಕ್ಷತೆಯನ್ನು ವಹಿಸಿ ಕೊಳ್ಳಲಿದ್ದು. ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ ಕಿಲ್ಲೇದಾರ, ಆದರ್ಶ ವಿದ್ಯಾಲಯದ ಉಪಾಧ್ಯಕ್ಷ ಬಸವರಾಜ ರಕ್ಕಸಗಿ, ಮುಖ್ಯೋಪಾಧ್ಯಾಯ ಎಸ್.ಜಿ ಕಡಿವಾಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬಾಗಲಕೋಟೆಯ ಚಿತ್ರ ಕಲಾವಿದರಾದ ಟಿ.ಎನ್ ಜಾಲಿಹಾಳ ಚಿತ್ರ ಕಲೆಯ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಶಿರೂರದ ಚಿತ್ರ ಕಲಾ ಶಿಕ್ಷಕ ಹಾಗೂ ಸಾಹಿತಿ ಲಕ್ಷ್ಮಣ ಬಾದಾಮಿ ಕರ್ನಾಟಕ ಕಲೆ ಮತ್ತು ಸಂಸ್ಕೃತಿಯ ವಿಮರ್ಶಿಸಲಿದ್ದಾರೆ. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ವೆಂಕಟೇಶ ಬಡಿಗೇರ, ಚಿತ್ರ ಕಲಾ ಶಿಕ್ಷಕ ಶ್ರೀಶೈಲ ದೋತ್ರೆ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಬಿ.ಬಂಡರಗಲ್ಲ.ಹುನಗುಂದ