ಉಚಿತ ಕಣ್ಣಿನ ತಪಾಸಣೆಯ ಶಿಬಿರದಲ್ಲಿ ವೈದ್ಯರಾದ – ಶಾಸಕರು, ಶ್ರೀ ಮ.ನಿ.ಪ್ರ ಬಸವಲಿಂಗ ಮಹಾ ಸ್ವಾಮೀಜಿಗಳು.
ಸಿದ್ದಯ್ಯಕೋಟೆ ಫೆ.16

ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಚಿತ್ತರಗಿ ಇಳಕಲ್ಲ ಶ್ರೀ ವಿಜಯ ಮಹಾಂತೇಶ ಶಾಖಾಮಠ, ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಕ್ರೀಡಾ ಯುವಕ ಸಂಘ (ರಿ), ಹಾಗೂ ಬಸವ ಅಂಬೇಡ್ಕರ್ ಜನ ಕಲ್ಯಾಣ ಸಂಸ್ಥೆ (ರಿ) ಬಿ.ಜಿ ಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಗಡಿನಾಡ ಸಾಂಸ್ಕೃತಿಕ ಉತ್ಸವ ಪ್ರಯುಕ್ತ ದಿವ್ಯ ಸಾನಿಧ್ಯವನ್ನು ವಹಿಸಿದ, ಕಾಯಕ ಯೋಗಿ, ರೈತ ರತ್ನ, ಪರಮ ಪೂಜ್ಯ ಶ್ರೀ ಮ.ನಿ.ಪ್ರ ಬಸವಲಿಂಗ ಮಹಾ ಸ್ವಾಮಿಗಳು, ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್.ಎನ್.ಟಿ ಅವರ ನೇತೃತ್ವದಲ್ಲಿ ಹಾಗೂ ಅಕ್ಷರ ಐ ಫೌಂಡೇಶನ್ ತುಮಕೂರು ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಮಾನ್ಯ ಶಾಸಕರು ಶಿಬಿರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು, ಮೊಳಕಾಲ್ಮೂರು ಮತ್ತು ಕೂಡ್ಲಿಗಿ ತಾಲೂಕುಗಳ ನಂಜುಂಡಪ್ಪನ ವರದಿ ಪ್ರಕಾರ ಅತ್ಯಂತ ಹಿಂದುಳಿದ ಪ್ರದೇಶಗಳಾಗಿವೆ. ಇಲ್ಲಿನ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಸಂಬಂಧಗಳು ಸಿರಿತನದಿಂದ ಕೂಡಿವೆ. ಆದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವುದು ಇದೆ. ಹೀಗಾಗಿ, ಸರ್ಕಾರದ ಮಟ್ಟದಲ್ಲಿ ಮತ್ತು ನಮ್ಮ ವೈಯಕ್ತಿಕವಾಗಿ ನಮ್ಮ ತಂದೆಯವರಾದ ಎನ್.ಟಿ.ಬೊಮ್ಮಣ್ಣನವರ ಕಾಲದಿಂದಲೂ ಬೇರೆ ಬೇರೆ ರೂಪದಲ್ಲಿ, ಇಲ್ಲಿನ ಮಠ ಮತ್ತು ಇಲ್ಲಿನ ಜನರ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಒತ್ತು ಕೊಡಲಾಗುತ್ತದೆ ಎಂದರು. ಸಭೆಯ ಬಳಿಕ, ಶಾಸಕ ಎಂಬ ಅಹಂ ಇಲ್ಲದೇ, ವೈದ್ಯನಾಗಿ ಇಲ್ಲಿನ ಜನರ ಕಣ್ಣಿನ ತಪಾಸಣೆ ಮಾಡಿ, ಈ ಭಾಗದ ಜನರ ಒಡಲ ಧ್ವನಿಯಾಗಿ, ಹಸಿವು ಮತ್ತು ಸಾಮಾನ್ಯ ಜನರ ಬಗ್ಗೆ ಕಷ್ಟ ನೋವುಗಳನ್ನು ಅರ್ಥ ಮಾಡಿ ಕೊಂಡರು.

ಶಿಬಿರದಲ್ಲಿ ಮೊಳಕಾಲ್ಮೂರು ಭಾಗದ ಗಡಿ ಗ್ರಾಮಗಳು ಹಾಗೂ ಕೂಡ್ಲಿಗಿ ತಾಲೂಕಿನ ಚಿರತಗುಂಡು, ಗಂಡಬೊಮ್ಮನಹಳ್ಳಿ, ಹುರುಳಿಹಾಳ್ ಗ್ರಾ. ಪಂ. ಜನರು ಪಾಲ್ಗೊಂಡು ತಮ್ಮ ಕಣ್ಣಿನ ತಪಾಸಣಾ ಶಿಬಿರದಲ್ಲಿ ವೈದ್ಯರ ಸಲಹೆ ಪಡೆದು, ಔಷಧಿ ಮತ್ತು ಕನ್ನಡಕ ಪಡೆದುಕೊಂಡರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರು ಹಾಗೂ ಗಡಿ ಗ್ರಾಮಗಳ ಸಾರ್ವಜನಿಕರು, ಮುಖಂಡರು, ಅಕ್ಷರ ಐ ಫೌಂಡೇಶನ್ ಆರೋಗ್ಯ ಸಿಬ್ಬಂದಿ ವರ್ಗ ಮತ್ತು ಶ್ರೀಮಠದ ಸದ್ಭಕ್ತರು,ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮುರು