ಸೌಕರ್ಯ ವಂಚಿತ ಮೆಟ್ರಿಕ್ ಪೂರ್ವ ವಸತಿ ನಿಲಯ.
ಮಸ್ಕಿ ಜು.06

ತಾಲೂಕಿನ ಸಂತೇ ಕೆಲ್ಲೂರು ಗ್ರಾಮದ ಹೊರ ವಲದಲ್ಲಿ ಇರುವ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬಾಲಕರು ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಬಡ ಕುಟುಂಬದ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುರುವಾಗಿರುವ ವಸತಿ ನಿಲಯ. ಕಟ್ಟಡವೇನೊ ಇದೆ ಆದರೆ, ಮೂಲಭೂತ ಸೌಕರ್ಯಗಳಿಲ್ಲದೆ ವಸತಿ ನಿಲಯವು ಬಾಲಕರು ತಮ್ಮ ವಿದ್ಯಾಭ್ಯಾಸ ಮುಂದುವರೆಸುವದೋ ಅಥವಾ ಬಿಡುವುದೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಮಕ್ಕಳಿಗೆ ಶಿಕ್ಷಣ ಮೇಲೆ ಪ್ರಭಾವ ಬೀರುವ ಪರಿಸ್ಥಿತಿ ಇದೆ. ಈ ವಸತಿ ನಿಲಯವು ಸಂತೇಕೆಲ್ಲೂರು ಗ್ರಾಮದಿಂದ ಒಂದು ಕಿಲೋ ಮೀಟರ್ ನಡೆಯಬೇಕು. ಈ ವಸತಿ ನಿಲಯವ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದುರ್ಬಲ ವರ್ಗಕ್ಕೆ ಸೇರಿದ ಸಮುದಾಯದ ಮಕ್ಕಳು ಇಲ್ಲಿ ಆಶ್ರಯ ಪಡೆದ್ದಾರೆ. ಸುಸಜ್ಜಿತವಾದ ಕಟ್ಟಡ ಇದೆ. ಆದರೆ ಮೂಲಭೂತ ಸೌಕರ್ಯಗಳು ಕೊರತೆಯೇ ಈ ವಸತಿ ನಿಲಯದಲ್ಲಿ ದೊಡ್ಡ ಸಮಸ್ಯೆ. ಮಕ್ಕಳು ಒದ್ಕೊಳ್ಳಲು ಹೊದಿಕೆ ಇಲ್ಲ.

ಸೋಲಾರ್ ವ್ಯವಸ್ಥೆ ಅಳವಡಿಸದ ಕಾರಣ ಮಕ್ಕಳು ಬಿಸಿ ನೀರಿನಿಂದ ವಂಚಿತರಾಗಿ ಎಂಥಹ ಚಳಿಗಾಲ ಬಂದರೂ ಸ್ನಾನ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇನ್ನು ವೇಳಾ ಪಟ್ಟಿ ಪ್ರಕಾರ ಸರಿಯಾದ ಊಟವನ್ನು ಸಹ ಇಲ್ಲದೆ ಮಕ್ಕಳ ಗೋಳು ಕೇಳಿವವರು ಇಲ್ಲದಾಗಿದೆ. ನಿಲಯಕ್ಕೆ ಕಾವಲುಗಾರರಿಲ್ಲದೇ ಜೀವ ಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಪ್ರಮುಖವಾಗಿಯೇ ಬೇಕಾದ ಸೌಲಭ್ಯಗಳೇ ಇಲ್ಲದಿರುವುದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಕೆಟ್ಪ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚಿದೆ. ಕಣ್ಣಿದ್ದು ಕುರುಡರಂತೆ, ಕೇಳಿಯೂ ಕಿವುಡರಂತೆ ವಿಧ್ಯಾರ್ಥಿಗಳ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ. ಆದ್ದರಿಂದ ಮೇಲಾಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವರೇ ಕಾದು ನೋಡಬೇಕಿದೆ ಎಂದು ಪಾಲಕರ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ ಇಲಕಲ್ಲ.