ಶ್ರೀ ಶರಣಬಸವೇಶ್ವರ ಮಹಾ ವಿದ್ಯಾಲಯದ ಎನ್ಎಸ್ಎಸ್ ಘಟಕದ – ಅಡಿಯಲ್ಲಿ ಶ್ರಮದಾನ.
ರೋಣ ಜು.14

ನಗರದ ಪ್ರಸಿದ್ಧ ಮಹಾ ವಿದ್ಯಾಲಯವಾದ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಭಾನುವಾರ ದಿನಾಂಕ 13.07.2025 ರಂದು ಮುಂಜಾನೆ 9:30 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಎನ್ಎಸ್ಎಸ್ ಘಟಕದ ಅಡಿಯಲ್ಲಿ ವಿದ್ಯಾರ್ಥಿಗಳು ಮಹಾ ವಿದ್ಯಾಲಯದ ಆವರಣವನ್ನು ತಮ್ಮ ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಿದರು.

ವಿದ್ಯಾರ್ಥಿಗಳು ಸ್ವಚ್ಛತೆಯ ಮೂಲಕ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮಹತ್ವವನ್ನು ಅರಿತು ಕೊಂಡರು ಅದೇ ರೀತಿಯಾಗಿ ವಿದ್ಯಾರ್ಥಿಗಳಿಗೆ ಲಘು ಉಪಹಾರವನ್ನು ಎನ್ಎಸ್ಎಸ್ ಘಟಕದ ಮುಖಾಂತರ ಆಯೋಜನೆ ಮಾಡಲಾಗಿತ್ತು.

ಈ ಸಮಯದಲ್ಲಿ ಮಹಾ ವಿದ್ಯಾಲಯದ ಸ್ಥಾನಿಕ ಮುಖ್ಯಸ್ಥರಾದ ಐ.ಬಿ ದಂಡಿನ್ ಪ್ರಾಚಾರ್ಯರಾದ ಶ್ರೀಮತಿ ಎ ಎಚ್ ನಾಯ್ಕರ್ ಹಾಗೂ ಏನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಎಂ.ಎಚ್ ನಾಯ್ಕರ್ ಹಾಗೂ ಮಹಾ ವಿದ್ಯಾಲಯದ ಉಪನ್ಯಾಸಕ ಬಳಗ ಹಾಗೂ ಎನ್ಎಸ್ಎಸ್ ಘಟಕದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ