ಎಲ್ಲರಿಗೂ ಸಮಾನ ಅವಕಾಶ – ಶಾಸಕ ಜಿ.ಹೆಚ್ ಶ್ರೀನಿವಾಸ್.

ತರೀಕೆರೆ ಮಾ.15

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒಟ್ಟಾರೆ 4.25 ಲಕ್ಷ ಕೋಟಿ ಅನುದಾನವನ್ನು ಸರ್ಕಾರ ಕೊಟ್ಟಿದೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಪುರಸಭೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪಾರ್ವತಮ್ಮ ರವರ ಅಭಿನಂದನ ಸಮಾರಂಭದಲ್ಲಿ ಮಾತನಾಡಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಯು ಫಾರೂಕ್ ಮಾತನಾಡಿ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ ಇವರಿಂದ ಈಡಿಗ ಸಮಾಜಕ್ಕೆ ಗೌರವ ಅದೇ ರೀತಿ ಸಿದ್ದರಾಮಯ್ಯ ನವರಿಂದ ಕುರುಬ ಸಮಾಜಕ್ಕೆ ಗೌರವ ಎಂದು ಹೇಳಿದರು.

ಬಸವಣ್ಣನವರು ಅನುಭವ ಮಂಟಪದಲ್ಲಿ ಸಮಾನತೆ ಸಾರಿದ ಹಾಗೆ ಇಂದು ಪಾರ್ವತಮ್ಮ ರವರನ್ನು ಪುರಸಭಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸೂಕ್ತ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಮಾತನಾಡಿ ಎಲ್ಲರೂ ಒಟ್ಟಾಗಿ ಪಟ್ಟಣದ ಅಭಿವೃದ್ಧಿಗೆ ಕೈಜೋಡಿ ಸೋಣ ಎಂದು ಹೇಳಿದರು. ಜಾತ್ಯತೀತ ಜನತಾ ದಳದ ಅಧ್ಯಕ್ಷರಾದ ಎಂ.ನರೇಂದ್ರ ಮಾತನಾಡಿ 1985 ರಲ್ಲಿ ಹಿಂದುಳಿದ ಪಂಗಡಕ್ಕೆ ಸೇರಿಸಲಾದ ಈಡಿಗ ಸಮಾಜ ಶ್ರೇಷ್ಠ ಹಿನ್ನೆಲೆ ಇರುವ ಸಮುದಾಯ, ಶ್ರೀಮಂತ ಸಮುದಾಯ, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಈ ಸಮಾಜ ಸ್ಥಾನಮಾನ ಪಡೆದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧ ಪುರಸಭಾ ಮಾಜಿ ಅಧ್ಯಕ್ಷರಾದ ಟಿ.ಎಸ್ ರಮೇಶ್, ಪ್ರಕಾಶ್ ವರ್ಮಾ, ಪರಮೇಶ್ ಹಾಗೂ ಸದಸ್ಯರಾದ ದಾದಾಪೀರ್, ಭೋಜರಾಜ್, ಶಶಾಂಕ್, ದಿವ್ಯ, ಆದಿಲ್ ಪಾಶ ಮತ್ತು ಪತ್ರಕರ್ತರಾದ ಅನಂತ್ ನಾಡಿಗ್ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಪರಶುರಾಮ್. ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button