ತರೀಕೆರೆ ಅಭಿವೃದ್ಧಿಗೆ ಶಾಸಕರು ಪಣತೊಟ್ಟಿದ್ದಾರೆ – ಎನ್.ಜಿ ರಮೇಶ್.
ತರೀಕೆರೆ ಮಾ.15
ರಾಜ್ಯದ ಮಹತ್ವಕಾಂಕ್ಷಿ ಯೋಜನೆಯದ ಭದ್ರಾ ಮೇಲ್ದಂಡೆ ಯೋಜನೆ ಅಡಿ 29. 9 ಟಿ.ಎಂ.ಸಿ ನೀರಿನ ಬಳಕೆಯೊಂದಿಗೆ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ 2. 25 ಎಕ್ಟರ್ ಭೂ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮತ್ತು ಇದರ ಜಿಲ್ಲೆಗಳಲ್ಲಿ ಬರುವ 367 ಸಣ್ಣ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಸಮಗ್ರ ಪರಿಷ್ಕೃತ ಯೋಜನಾ ವರದಿ ಸರ್ಕಾರವು 12. 340 ಕೋಟಿಗಳ ಮೊತ್ತಕ್ಕೆ ದಿನಾಂಕ 6.3.2015 ರ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ತರೀಕೆರೆ ಏತ ನೀರಾವರಿ ಯೋಜನೆ ಪ್ಯಾಕೇಜ್ – 02 ಯೋಜನೆ ಅಡಿ ಹನಿ ನೀರಾವರಿಗೆ 0.21 ಟಿ.ಎಂ.ಸಿ ಕೆರೆ ತುಂಬಿಸಲು 0.2 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ ಎಂದು ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷರಾದ ಎನ್.ಜಿ ರಮೇಶ್ ರವರು ಇಂದು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಪ್ರಸ್ತುತ ತರೀಕೆರೆ ಏತ ನೀರಾವರಿ ಯೋಜನೆ ಪ್ಯಾಕೇಜ್ ಕಾಮಗಾರಿಯು ಪೂರ್ಣ ಗೊಳ್ಳುವ ಹಂತದಲ್ಲಿರುತ್ತದೆ.

ಲೋಕಪಯೋಗಿ ಇಲಾಖೆ 20 ಕೋಟಿ, ಅಪೆಂಡಿಕ್ಸ್ ಹೆಚ್ಚುವರಿ ಅನುದಾನ 9.95 ಕೋಟಿ, ಅಪೆಂಡಿಕ್ಸ್ ಇ ಮುಖ್ಯಮಂತ್ರಿ ವಿಶೇಷ ಅನುದಾನ 4 ಕೋಟಿ, ರಾಷ್ಟ್ರೀಯ ಹೆದ್ದಾರಿ ಅನುದಾನ 4.24 ಕೋಟಿ, ಎಂ.ಜಿ ಸರ್ಕಲ್ ಕೊಡಿ ಕ್ಯಾಂಪ್ ಮತ್ತು ಜಂಕ್ಷನ್ ಪಾದಚಾರಿ ರಸ್ತೆ ಮತ್ತು ಬೀದಿ ದೀಪ ಅಳವಡಿಕೆಗೆ 5.35 ಕೋಟಿ, ಒಟ್ಟು 51.64 ಕೋಟಿ ಅನುದಾನ ಬಳಸಲಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡಲು 9 ಕೋಟಿ. ನೂತನ ಪುರಸಭೆ ಕಟ್ಟಡ ನಿರ್ಮಾಣ ಮಾಡಲು 10 ಕೋಟಿ, ತರೀಕೆರೆ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 5 ಕೋಟಿ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಕಾಮಗಾರಿಗಳಿಗೆ 3 ಕೋಟಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ 60 ಲಕ್ಷ ಮಂಜೂರಾತಿಯಾಗಿದೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಗ್ಯಾರಂಟಿ ಯೋಜನೆಗಳ ಸದಸ್ಯರಾದ ಲಕ್ಷ್ಮೀಬಾಯಿ, ಸಂತೋಷ್ ನಾಯ್ಕ, ಹರೀಶ್, ಸಂತೋಷ್ ಕುಮಾರ್,ಮಾಂತೇಶ್ ಮತ್ತು ಪ್ರಸನ್ನ ರವರು ಉಪಸಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು