ಭವಿಷ್ಯದ ವಿದ್ಯಾರ್ಥಿಗಳಿಗಾಗಿ…..

ಪುಸ್ತಕವ ಓದಿಕೋ
ಜ್ಞಾನವ ತಿಳಿದುಕೋ
ಜ್ಞಾನವಿದ್ದರೆ ಬರದು ಆಪತ್ತು
ಜ್ಞಾನ ಬೆಳೆಬಾಳುವ ಮುತ್ತು
ಶಿಕ್ಷಣವೇ ಬಾಳಿನ ಶಕ್ತಿ
ಪಡೆಯಲು ಬೇಕು ಯುಕ್ತಿ
ಗುರುಗಳೇ ನಮಗೆ ದಾರಿದೀಪ
ಅವರ ಜ್ಞಾನ ನಂದಾದೀಪ
ಶಾಲೆ ಒಂದು ದೇವಾಲಯ
ಜ್ಞಾನದ ಬಂಡಾರ ಗ್ರಂಥಾಲಯ
ಬಾ ಮಗು ನೀ ಶಾಲೆಗೆ
ಆಸಕ್ತಿ ಇರಲಿ ನಿತ್ಯ ಕಲಿಕೆಗೆ
ಶಾಲೆಯ ಬಾಗಿಲು ಕಾದಿದೆ ನಿನಗಾಗಿ
ಶಾಲೆ ಇರೋದೇ ನಿನ್ನ ಏಳಿಗೆಗಾಗಿ
ಜ್ಞಾನವ ತುಂಬಿರಿ ಮೆದುಳಿಗೆ
ಸುಂದರ ಕನಸಿರಲಿ ನಾಳೆಗೆ
ನಿನಗೆ ಗುರುವೇ ಎರಡನೆಯ ತಾಯಿ
ನಿನ್ನನ್ನು ಮೆಚ್ಚುವಂತಾಗಲಿ ಕರುನಾಡ ತಾಯಿ
ಹೆಣ್ಣಾಗಲಿ ಗಂಡಾಗಲಿ ಅಕ್ಷರವಂತನಾಗಲಿ
ಅಕ್ಷರದಿಂದ ಬದುಕು ಬಂಗಾರವಾಗಲಿ
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು,ಹಿರೇಮಾಗಿ )
ಬಾಗಲಕೋಟ
Mob-9845568484