ಅರ್ಹ ಫಲಾನುಭವಿಗಳಿಗೆ ನ್ಯಾಯ ಸಮ್ಮತವಾಗಿ ಮನೆ ಹಂಚಲು ಸಹಕಾರ ಕೊಡಬೇಕು – ಶಾಸಕ ಡಾ, ಎನ್.ಟಿ ಶ್ರೀನಿವಾಸ್.
ಕೂಡ್ಲಿಗಿ ಜ.05

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಅಭಿವೃದ್ಧಿ ವಿಷಯಗಳ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಡಾ ಎನ್.ಟಿ ಶ್ರೀನಿವಾಸ್ ಮಾತನಾಡಿ ಸ್ಲಮ್ ಬೋರ್ಡ್ ವತಿಯಿಂದ 850 ಮನೆಗಳನ್ನು ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ಹಾಗೂ ವಿಜಯ ನಗರ ಜಿಲ್ಲಾ ಉಸ್ತುವಾರಿ, ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹಮ್ಮದ್ ಖಾನ್ ಅವರ ಸಹಕಾರದಿಂದ ಮುಂಜೂರು ಮಾಡಿಸಿ ಕೊಂಡು ಬಂದಿದ್ದೇನೆ. ಅರ್ಹ ಫಲಾನುಭವಿಗಳನ್ನು ನ್ಯಾಯ ಸಮ್ಮತವಾಗಿ ಗುರುತಿಸಿ, ಬಡವರು, ನಿರ್ಗತಿಕರು, ದೇವದಾಸಿಯರು, ವಿಧವೆಯರು, ಬೀದಿ ಬದಿ ವ್ಯಾಪಾರಿಗಳು, ಎಲ್ಲರನ್ನೂ ಪರಿಗಣಿಸಲಾಗುತ್ತದೆ. ನಾನು ಕೂಡ ಎಸ್,ಸಿ/ಎಸ್.ಟಿ ಕಮಿಟಿಯ ಸದಸ್ಯನಾಗಿರುವುದರಿಂದ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಟ್ಟು ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಮುಂಜೂರು ಮಾಡಿಸಿದ್ದೇನೆ ಎಂದರು. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ನ್ಯಾಯ ಸಮ್ಮತವಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ.ಕೆ ನೇತ್ರಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೆವೂರು, ಕೊಳೆಗೇರಿ ಅಭಿವೃದ್ಧಿ ನಿಮಗದ ಅಧಿಕಾರಿ ಶಿವಕುಮಾರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಡಾ, ಟಿ.ಕೊತ್ಲಮ್ಮ, ಕೂಡ್ಲಿಗಿ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಮಾಜಿ ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಯ್ಯದ್ ಶೂಕರ್, ಪ.ಪಂ ಮಾಜಿ ಸರ್ವ ಸದಸ್ಯರು, ನಾಗರೀಕರು, ಸಾರ್ವಜನಿಕರ ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

