ಕೊಟ್ರೇಶ್ ಚಿಮ್ನಳ್ಳಿ CHC – 183 ಪೊಲೀಸ್ ಪೇದೆ ಮುಖ್ಯ ಮಂತ್ರಿ ಪದಕಕ್ಕೆ ಆಯ್ಕೆ – ಸಂತೋಸದಿಂದ ಹಾರೈಸಿದ ಹಿಂದುಳಿದ ಜಾತಿಗಳ ಒಕ್ಕೂಟ.
ಗುಡೇಕೋಟೆ ಮಾ. 31





ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯ ಮುಖ್ಯ ಪೊಲೀಸ್ ಪೇದೆ ಕೊಟ್ರೇಶ್ ಚಿಮ್ನಳ್ಳಿ ಇವರು ಮುಖ್ಯ ಮಂತ್ರಿ ಪದಕಕ್ಕೆ ಆಯ್ಕೆ ಯಾಗಿರುವುದಕ್ಕೆ ಹಿಂದುಳಿದ ಜಾತಿಗಳ ಒಕ್ಕೂಟದ ಹಲವು ಮುಖಂಡರುಗಳು ನಮ್ಮ ತಾಲೂಕಿನವರನ್ನು ಗುರುತಿಸಿ ಇಂತಹ ಉನ್ನತವಾದಂತ ಅವಾರ್ಡ್, ಪ್ರಶಸ್ತಿಗೆ ಆಯ್ಕೆ ಯಾಗಿರುವುದಕ್ಕೆ ಹಾಗೂ ಏಪ್ರಿಲ್ 2 ರಂದು ನಡೆಯುವಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಕೊಟ್ರೇಶ್ ಚಿಮ್ನಳ್ಳಿ ಇವರಿಗೆ ಹಲವು ಮುಖಂಡರುಗಳು ವಿಷಯ ತಿಳಿದ ತಕ್ಷಣ ಸಂತೋಷದಿಂದ ಉತ್ಸಾಹದಿಂದ ಮನ ತುಂಬಿ ಬಂದು ಶಾಲೂ ಹೂವಿನ ಹಾರ ಹಾಕುವುದರ ಮೂಲಕ ಕೊಟ್ರೇಶ್ ಚಿಮ್ನಳ್ಳಿ ಅವರ ಪೊಲೀಸ್ ಇಲಾಖೆಯಲ್ಲಿ ಅವರ ಶಿಸ್ತಿನ ಕೆಲಸ ಹಾಗೂ ಕಾರ್ಯ ವೈಖರಿಯನ್ನು ರಾಜ್ಯಮಟ್ಟದಲ್ಲಿ ಗುರುತಿಸಿ ಮುಖ್ಯಮಂತ್ರಿ ಪದಕ ಅವಾರ್ಡ್ ಸನ್ಮಾನಕ್ಕೆ ಕೂಡ್ಲಿಗಿ ತಾಲೂಕಿನ ನಮ್ಮ ಸಂಘಟನೆಯ ಹಾಗೂ ಹಲವಾರು ಅಭಿಮಾನಿಗಳ ಪರವಾಗಿ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಕ್ಕಜಿ ಮಲ್ಲಿಕಾರ್ಜುನ, ಇಮ್ಮಡ ಪುರದ ಕೆಂಚಪ್ಪ, ಹಾಗೂ ರೇವಣ್ಣ , ಅಜಯ್ ಕುಮಾರ್, ಜಯಣ್ಣ, ಮಹಾಂತೇಶ್, ನಾಗೇಶ್, ಶಿವಣ್ಣ, ಲೋಕೇಶ್, ಇನ್ನಿತರ ಮುಖಂಡರುಗಳು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಸಾಲುಮನೆ.ಕೂಡ್ಲಿಗಿ