ಶ್ರೀ ಗುರು ವೀರಘಂಟಿ ಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ – ಮಹಾ ಶಿವರಾತ್ರಿ ಆಚರಣೆ.
ಕಲಕೇರಿ ಫೆ.27

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಅಭಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಗುರು ವೀರಘಂಟಿ ಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ ಮಹಾ ಶಿವರಾತ್ರಿ ಜಾಗರಣಾ 13. ಉತ್ಸವ ಶಿವನ ಧ್ಯಾನ ಮಾಡಿ ಉಪವಾಸ ಮಾಡಿ ಆ ಪರಮಾತ್ಮನಿಗೆ ಪಾತ್ರರಾದರು ಸಾವಿರಾರು ಭಕ್ತರು ಮತ್ತು ತಾಯಂದಿರು ಅನೇಕ ವಿಶೇಷ ಕಲಾ ಸಿಂಚನ ಮೆಲೋಡಿಸಿ ಇವರಿಂದ ಕಾರ್ಯಕ್ರಮಗಳು ಜರಗುವುದು. ಈ ಕಾರ್ಯಕ್ರಮದ ಸಾನಿಧ್ಯ ಪರಮಪೂಜ್ಯ ಸಿದ್ದರಾಮ ಶಿವಾಚಾರ್ಯ ಶ್ರೀ ಗುರು ಮರಳಾರಾಧ್ಯ ಹಿರೇಮಠ್ ಇವರು ಪ್ರತಿ ವರ್ಷ ಅಪ್ಪು ದೇಸಾಯಿ ಬಳಗ ದಿಂದ ಮಹಾ ಶಿವರಾತ್ರಿ ಜಾಗರಣಾ ಕಾರ್ಯಕ್ರಮ ಅದ್ದೂರಿಯಿಂದ ಅನೇಕ ರಾಜಕಾರಣಿಗಳಿಗೆ ಹಾಗೂ ಊರಿನ ಹಿರಿಯರಿಗೆ ಎಲ್ಲಾ ಪೂಜ್ಯರಿಗೆ ವೇದಿಕೆಗೆ ಬರ ಮಾಡಿಕೊಂಡು ಪ್ರತಿ ವರ್ಷನು ಅಪ್ಪು ದೇಸಾಯಿ ಇವರ ಬಳಗ ವತಿಯಿಂದ ಕಾರ್ಯಕ್ರಮಗಳು ಮಾಡಿ ಎಲ್ಲಾ ಪೂಜ್ಯರ ಆಶೀರ್ವಾದ ಸದಾ ಅವರ ಮೇಲೆ ಇರಲಿ ಎಂದು ಆಶೀರ್ವಚನ ನೀಡಿದರು. ಅದ್ವೈತಾನಂದ ಗುರೂಜಿ ಧ್ಯಾನ ಶಿವಯೋಗಿ ಸಿದ್ದೇಶ್ವರ ಆಶ್ರಮ ವಿಜಯಪುರ ಇವರಿಂದ ಆಶೀರ್ವಚನ ನೀಡಿದರು. ಪ್ರಭುಗೌಡ ಲಿಂಗದಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಮಹಾ ಶಿವರಾತ್ರಿ ಅಂದರೆ ಏನು ನಾವೆಲ್ಲರೂ ಜೀವನ ಧ್ಯಾನ ಮಾಡುತ್ತ ನಾವು ಮಾಡಿದಂತ ಪಾಪಗಳನ್ನು ಕಳೆದು ಕೊಳ್ಳಬೇಕು ಎಲ್ಲರೂ ಉಪವಾಸ ಮಾಡಿ ಆ ಶಿವನ ಧ್ಯಾನ ಮಾಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸಿದ್ದು ಬುಳ್ಳ ಈ ಸಂದರ್ಭದಲ್ಲಿ ವರ್ಷಕ್ಕೆ ಒಮ್ಮೆ ಬರುವುದು ಮಹಾ ಶಿವರಾತ್ರಿಯಲ್ಲಿ ಎಲ್ಲರೂ ಆ ಶಿವನ ಧ್ಯಾನ ಮಾಡಿ ಪುನೀತರಾಗಬೇಕು ಎಂದು ತಿಳಿಸಿದರು. ಕಲಕೇರಿಯ ಪೊಲೀಸ್ ಠಾಣೆಯ ಪಿ.ಎಸ್.ಐ. ಸುರೇಶ್ ಮಂಟೂರ್ ಇವರು ಈ ಸಂದರ್ಭದಲ್ಲಿ ಅಪ್ಪು ದೇಸಾಯಿ ಇವರ ಅದ್ಭುತ ಕಾರ್ಯಕ್ರಮಗಳನ್ನು ಬಹಳ ಚೆನ್ನಾಗಿ ನಡೆಸಿದ್ದಾರೆ. ಮಹಾ ಶಿವರಾತ್ರಿ ಹಬ್ಬ ಇದು ಒಂದು ಕಲಕೇರಿಯಲ್ಲಿ ದೊಡ್ಡ ಜಾತ್ರೆ ಯಾವ ರೀತಿ ಆಗುತ್ತೆ ಅದೇ ರೀತಿ ಬಹಳ ಚೆನ್ನಾಗಿ ಅನೇಕ ಕಾರ್ಯಕ್ರಮಗಳು ಮಾಡಿಸಿದಂತ ಅಪ್ಪು ದೇಸಾಯಿ ಇವರಿಗೆ ಎಷ್ಟು ಹೊಗಳಿದರು ಕಡಿಮೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ರವಿ ಗುಮಶೆಟ್ಟಿ ಮಹಾ ಶಿವರಾತ್ರಿ 13. ನೇ ಉತ್ಸವ ಬಹಳ ವಿಜೃಂಭಣೆಯಿಂದ ಜರಗಿತು.

ಪರಮಾತ್ಮ ಅಪ್ಪು ದೇಸಾಯಿ ಬಳಗಕ್ಕೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವಂತೆ ಆ ಪರಮಾತ್ಮ ಆಶೀರ್ವಾದ ಸದಾ ಅವರ ಮೇಲೆ ಇರಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಲಕೇರಿಯ 10 ಹಳ್ಳಿಗಳಿಗೆ ಮನೆಗೆ ಮಗನಾದ ಅಪ್ಪು ದೇಸಾಯಿ ಇವರು ಎಲ್ಲಾ ಧರ್ಮಗಳು ಒಂದೇ ನಾವು ಎಲ್ಲರೂ ಒಂದೇ ಎನ್ನುವ ಮಾತುಗಳನ್ನು ಯಾವುದೇ ಕಾರ್ಯಕ್ರಮಗಳು ಇದ್ದರು ಕಾರ್ಯಕ್ರಮಗಳು ನಮ್ಮದೇ ಎಂದು ಅಪ್ಪು ದೇಸಾಯಿ ಇವರ ಬಳಗ ಚಾಚು ತಪ್ಪದೇ ಕಾರ್ಯಕ್ರಮಗಳು ಅದ್ದೂರಿಯಿಂದ ಮಾಡಿದಂತ ಎಲ್ಲಾ ಕಾರ್ಯಕ್ರಮಗಳು ಅಪ್ಪು ದೇಸಾಯಿ ಬಳಗದ ವತಿಯಿಂದ ಅದ್ದೂರಿಯಿಂದ ನಡೆಯಿತು. ಗ್ರಾಮದ ಶ್ರೀ ಸಣ್ಣ ಶರವಯ್ಯ ಗದ್ದಿಗಿ ಮಠ. ಸಂತೋಷ್ ಗೌಡ ದೊಡ್ಡಮನಿ. ದೇವೇಂದ್ರ ಜಂಬಿಗಿ. ಶ್ರೀಶೈಲ್ ವಿಶ್ವಕರ್ಮ. ದತ್ತು ಮೋಪಗಾರ. ಮುನ್ನ ಸಿರಸಗಿ. ಕನಕರಾಜ್ ವಡ್ಡರ್. ಅಶೋಕ್ ಭೋವಿ. ವಿನೋದ್ ವಡಿಗೇರಿ. ರವಿ ಹಿರೇಮಠ. ಅಜೀಜ್ ಮುಲ್ಲಾ. ಹಣಮಂತ್ ವಡ್ಡರ್. ಪರಶುರಾಮ್ ವಡ್ಡರ್. ಎಲ್ಲಾ ಮಹಾ ಶಿವರಾತ್ರಿಯ ಜಾಗರಣಾ ಕಾರ್ಯಕ್ರಮಗಳು ಅಪ್ಪು ದೇಸಾಯಿ ಇವರ ಬಳಗದ ವತಿಯಿಂದ ಜರುಗಿತು. ಮಹಾ ಶಿವರಾತ್ರಿಯ ಕಾರ್ಯಕ್ರಮ ನಿರೂಪಣೆಗಾರರು ಈರಣ್ಣ ಝಳಕಿ. ಶಿವಕುಮಾರ್ ಸಜ್ಜನ್. ಅನೇಕ ಊರಿನ ಸಾರ್ವಜನಿಕರು ತಾಯಂದಿರು ಸೇರಿದಂತೆ ಮಹಾ ಶಿವರಾತ್ರಿಯ ಜಾಗರಣಾ ಅದ್ದೂರಿಯಿಂದ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ