ಇ.ಡಿ ತನ್ನ ಅಧಿಕಾರ ದುರ್ಬಳಕೆಗೆ – ಕೆ.ಶಂಕರ್ ನಂದಿಹಾಳ ರಿಂದ ಖಂಡನೆ.
ಬಳ್ಳಾರಿ ಮೇ.25

ಡಾ, ಜಿ.ಪರಮೇಶ್ವರ ರಾಜಕೀಯ ಉನ್ನತಿ ಸಹಿಸದ ಬಿಜೆಪಿಯಿಂದ ಕುತಂತ್ರದ ಇ.ಡಿ. ದಾಳಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಶೈಕ್ಷಣಿಕ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತ ಇ.ಡಿ ದಾಳಿ ನಡೆಸಿರುವುದು ಕೆ.ಶಂಕರ್ ನಂದಿಹಾಳ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಂಡನೀಯ ವ್ಯಕ್ತಪಡಿಸಿದ್ದಾರೆ. ಡಾ, ಜಿ.ಪರಮೇಶ್ವರ್ ಅವರ ರಾಜಕೀಯ ಉನ್ನತಿ ಸಹಿಸದ ಕೇಂದ್ರ ಸರ್ಕಾರ ಶೈಕ್ಷಣಿಕ ಸಂಸ್ಥೆಗಳ ಮೇಲೆ ರಾಜಕೀಯ ದುರುದ್ದೇಶದಿಂದ ಅಗತ್ಯವಾಗಿ ಇ.ಡಿ ದಾಳಿ ನಡೆಸಿದ್ದು, ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದೆ ಎಂದು ಪತ್ರಿಕೆ ಹೇಳಿಕೆಯಲ್ಲಿ ದೂರಿದ್ದಾರೆ.ಕಳೆದ ಐವತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉನ್ನತ ಮೆಡಿಕಲ್. ಇಂಜಿನಿಯರಿಂಗ್, ಡೆಂಟಲ್ ಕಾಲೇಜ್ ನರ್ಸಿಂಗ್ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಸತಿ ನಿಲಯಗಳು ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳ ಜೀವನಕ್ಕೂ ಭದ್ರ ಬುನಾದಿ ಹಾಕಿದ್ದಾರೆ. ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದು ದುರುದ್ದೇಶದಿಂದ ದಾಳಿ ನಡೆಸಿರುವುದು ಖಂಡನೀಯ ಸುಪ್ರೀಂ ಕೋರ್ಟ್ ಕೂಡ ಜಾರಿ ನಿರ್ದೇಶನಾಲಯ ಇತಿ ಮಿತಿ ಇಲ್ಲದಂತೆ ನಡೆದು ಕೊಳ್ಳುತ್ತಿದೆ ಎಂದು ವ್ಯಕ್ತಪಡಿಸಿದ್ದು. ಆದುದರಿಂದ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಇ.ಡಿ ಇಲಾಖೆ ದುರ್ಬಳಕೆ ಆಗುತ್ತಿದ್ದೆ ಎಂದು ವ್ಯಕ್ತಪಡಿಸಲಾಗುತ್ತದೆ. ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಪರಮೇಶ್ವರ ಅವರು ರಾಜ್ಯದ ದಲಿತ ಸಮುದಾಯದ ಪ್ರಭಾವಿ ನಾಯಕರು. ಸಿಎಂ ರೇಸಿನಲ್ಲಿರುವ ಪ್ರಮುಖರಾಗಿದ್ದಾರೆ. ಅವರ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತದೆ. ಡಾ, ಜಿ.ಪರಮೇಶ್ವರ ಅವರು ದಲಿತ ಎಂಬ ಕಾರಣಕ್ಕೆ ಈ ದಾಳಿ ನಡೆದಿದ್ದು. ಅವರನ್ನು ರಾಜಕೀಯವಾಗಿ ಹಣೆಯ ಬೇಕೆಂಬ ದುರುದೇಶದಿಂದ ಕೇಂದ್ರ ಸರ್ಕಾರದ ಕುತಂತ್ರದ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು. ಅವರು ಡಾ, ಜಿ.ಪರಮೇಶ್ ಮೇಲೆ ಜಾರಿ ನಿರ್ದೇಶನಾಲಯ ಈ ಅಕ್ರಮ ದಾಳಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೆ.ಶಂಕರ್ ನಂದಿಹಾಳ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.