ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ – ರವಿ ಹತ್ತಳ್ಳಿ.
ವಿಜಯಪುರ ಮೇ.25

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮೊದಲಾದ್ಯತೆ ನೀಡಿ. ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜೊತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣಗಳನ್ನು ರೂಢಿಸಿ ಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿ ಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ರವಿ ಹತ್ತಳ್ಳಿ ಹೇಳಿದರು.ಅವರು ರವಿವಾರ ದಂದು ನಗರದ ಷಣ್ಮುಖಾರೂಢ ಮಠದಲ್ಲಿ ಅಭಿನವಶ್ರೀ ಬೇಸಿಗೆ ವಿಶೇಷ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಬಹಳ ಮುಖ್ಯ. ನಿರಂತರ ಅಧ್ಯಯನ ದಿಂದ ಗುರಿ ತಲುಪಲು ಸಾಧ್ಯ. ಯಾವುದೇ ಗುರಿ ತಲುಪ ಬೇಕಾದರು ಶ್ರದ್ಧೆ, ಸಂಯಮ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಹೇಳಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ಮುಖ್ಯ. ಮಕ್ಕಳಲ್ಲಿ ಸಕಾರಾತ್ಮಕ ಯೋಚನೆ ಜಾಗೃತವಾಗ ಬೇಕು. ಸದೃಢ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಬಹು ಮುಖ್ಯ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಅಶೋಕ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಕುಟುಂಬ, ಸಮಾಜ, ದೇಶದ ಆಸ್ತಿ ಯಾಗುವಂತೆ ಪಾಲಕರು, ಶಿಕ್ಷಕರು ಶ್ರಮಿಸ ಬೇಕು.ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ನಯ ವಿನಯ, ಸಂಸ್ಕಾರಗಳನ್ನು ಕಲಿತು ಕೊಂಡರೆ ಅದುವೇ ಭೂಷಣ ವಾಗುತ್ತದೆ’ ಎಂದು ಹೇಳಿದರು. ವಿಜಯಪುರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲನಗೌಡ ಬಿರಾದಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಿವಾನಂದ ಹಿರೇಮಠ ಸಾನಿಧ್ಯ ವಹಿಸಿದ್ದರು. ಬಿ.ಎನ್ ಗಸ್ತಿ, ರಮೇಶ ವಿಶ್ವಕರ್ಮ, ಶರತ, ಸಿದ್ದನಗೌಡ ಬಿರಾದಾರ, ಜಕರಾಯ ಪೂಜಾರಿ, ಮಹಾದೇವ, ಸಂತೋಷ ಇಂಗಳಗಿ, ಬಿ.ಎಸ್ ವಾಡೇದ, ಎಚ್.ಸಿ ಪಾಟೀಲ, ಎಸ್.ಕೆ ಉಪ್ಪಾರ, ಎಸ್.ಬಿ ಗುಲಗಂಜಿ, ರೂಪಾ ಬಿರಾದಾರ, ಗೌಡಪ್ಪ ಬಿರಾದಾರ, ಈಶ್ವರ ಹಡಗಿನಾಳ ಸೇರಿದಂತೆ ಸಂಸ್ಥೆಯ ಶಿಕ್ಷಕ ಸಿಬ್ಬಂದಿ ವರ್ಗ, ಪಾಲಕರು, ತಾಯಂದಿರು, ಮಕ್ಕಳು ಭಾಗವಹಿಸಿದ್ದರು.