ಗಣೇಶ ಚತುರ್ಥಿ ಅತ್ಯಂತ ಸಂಭ್ರಮ – ಸಡಗರದಿಂದ ಆಚರಿಸಲಾಯಿತು.
ಅಮೀನಗಡ ಆ.30




ಪಟ್ಟಣದ ವಾರ್ಡ್ ನಂಬರ್ 08 ವಡ್ಡರ್ ಕಾಲೋನಿಯಲ್ಲಿ ಶ್ರೀ ಸಿದ್ದರಾಮೇಶ್ವರ ಗಜಾನನ ಯುವಕರ ಸಂಘದ ವತಿಯಿಂದ 21 ನೇ. ವರ್ಷದ ಗಣೇಶೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಬುಧವಾರ ಬೆಳಿಗ್ಗೆ ಯಿಂದಲೇ ಚೌತಿ ಸಂಭ್ರಮದ ಗರಿಗೆದರಿತು. ಹೊಸ ಧಿರಿಸು ಧರಿಸಿ ಚಿಣ್ಣರು ವಯಸ್ಕರು ಗಣಪನನ್ನು ಬರಮಾಡಿ ಕೊಳ್ಳಲು ಅಣಿಯಾಗಿದ್ದರು.

ಪಟ್ಟಣದ ಮುಖ್ಯ ರಸ್ತೆಯ ಮುಖಾಂತರ ಚಿತ್ತರಗಿಯ ಕ್ರಾಸ್ ಮೂಲಕ ವಾರ್ಡ್ ನಂಬರ್ 08 ನೇ. ವರೆಗೆ ವಾದ್ಯ ಮೇಳಗಳೊಂದಿಗೆ ಗಣೇಶನ ಭವ್ಯ ಮೆರವಣಿಗೆ ಜರುಗಿತು. ನಂತರ ಶ್ರೀ ನರಸಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಫಲ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣೇಶನ ಮೆರವಣಿಗೆ ಹಾಗೂ ಪೂಜಾ ಕೈಂಕಾರ್ಯಗಳಲ್ಲಿ ಶ್ರೀ ಸಿದ್ದರಾಮೇಶ್ವರ ಗಜಾನನ ಯುವಕರ ಸಂಘದ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.
 
				
 
						