ದಾವಲ್ ಮಲ್ಲಿಕ್ ಬಾಲಕರ ರಾಷ್ಟ್ರೀಯ ಕಬ್ಬಡಿ – ಚಾಂಪಿಯನ್ ಶಿಪ್ ಗೆ ಆಯ್ಕೆ.
ರೋಣ ಜೂ.27

ಗದಗ ಜಿಲ್ಲೆಯ ರೋಣ ತಾಲೂಕಿನ ಒಂದಿಲ್ಲಾ ಒಂದು ಕ್ಷೇತ್ರದಲ್ಲಿ ಹೆಸರು ವಾಸಿಯಾಗುತ್ತಲೇ ಇದೆ ಈ ಬಾರಿ ಹರಿದ್ವಾರ ರಾಜ್ಯದ ರಾಣಿಪುರ್ ಮಾಡ ಬಳಿ ಇರುವ ಶ್ರೀ ಪ್ರೇಮ ನಗರ ಆಶ್ರಮದಲ್ಲಿ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ 28/06/2025 ರಿಂದ 01/7/2025 ರ ವರೆಗೆ ರಾಷ್ಟ್ರೀಯ ಕಬ್ಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ.

ಈ ಚಾಂಪಿಯನ್ ಶಿಪ್ ಗೆ ಪ್ರಪ್ರಥಮ ಬಾರಿಗೆ 18 ವರ್ಷ ದೊಳಗಿನ ಬಾಲಕರ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಪ್ರತಿ ನಿಧಿಸುತ್ತಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಯುವ ಆಟಗಾರ ದಾವಲ್ ಮಲ್ಲಿಕ್ ಇದ್ಲಿ ಈತನು ಆಯ್ಕೆ ಯಾಗಿದ್ದಾನೆ. ಈತನು ಬಿ.ಸಿ ರಮೇಶ್ ಕಬಡ್ಡಿ ಅಕಾಡೆಮಿ ರೋಣ ಹಾಗೂ ಯುವ ಮಿತ್ರ ಸ್ಪೋರ್ಟ್ಸ್ ಕ್ಲಬ್ ರೋಣ ಈ ಸಂಸ್ಥೆಯ ಹೆಮ್ಮೆಯ ಆಟಗಾರ ಈತನಾಗಿದ್ದಾನೆ. ಯುವಕನಿಗೆ ಸದಾ ಮುತ್ತಣ್ಣ.ಬ ಪ್ರಧಾನಿ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ರೋಣ ಇವರು ಸತತವಾಗಿ ಶ್ರಮಿಸಿದ್ದಾರೆ. ಹೀಗೆ ಈ ಯುವಕನ ಸಾಧನೆ ಉನ್ನತ ಮಟ್ಟಕ್ಕೆ ಮುಂದುವರೆಯಲಿ ಎಂದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಆಶಿಸುತ್ತದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

