ದಲಿತ ಸೇನೆಯ ರಾಷ್ಟ್ರೀಯ ಸಂಘಟನೆಯ ರಾಜ್ಯ ಸಂಘಟನೆಯ ಕಾರ್ಯದರ್ಶಿ ಯುವ ಹೋರಾಟಗಾರ ಜಾವಿದ್ ಖಾನ್ ರವರಿಗೆ ರಾಜ್ಯ ಮಟ್ಟದ ಸಮಾಜ ಸೇವಾ – ರತ್ನ ಪ್ರಶಸ್ತಿಗೆ ಆಯ್ಕೆ.
ಮಾನ್ವಿ ಜು.02





ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದಲಿತರ. ಸೋಷಿತರ ಅಲ್ಪಸಂಖ್ಯಾತರ ಧ್ವನಿ ಹೋರಾಟಗಾರ ಜಾವಿದ್ ಖಾನ್ ಇವರಿಗೆ ರಾಜ್ಯ ಮಟ್ಟದ ಸಮಾಜ ಸೇವ ರತ್ನ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆಂದು ಕಲಾ ಸಂಕುಲ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರೇಖಾ ಬಡಿಗೇರ ತಿಳಿಸಿದ್ದಾರೆ. ಕಲಾ ಸಂಕುಲ ಸಂಸ್ಥೆ ರಿಜಿಸ್ಟರ್ ರೈಚೂರ್ ಇವರ ವತಿಯಿಂದ ಜುಲೈ 6 ರಂದು ರವಿವಾರ ಬೆಳಗ್ಗೆ ರಾಯಚೂರು ನಗರದ ರಾಯಲ್ ಫೋರ್ಟ್ ಹೋಟೆಲ್ ನಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿ ಜಾವೀದ್ ಖಾನ್ ಅವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಣ್ಣ ನೀರಾವರಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್ ಬೋಸುರಾಜ್ ಹಾಗೂ ಮನೋವೈದ್ಯರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ, ಸಿ.ಆರ್ ಚಂದ್ರಶೇಖರ್ ಪ್ರಶಸ್ತಿಯನ್ನು ಜಾವೀದ್ ಖಾನ್ ಅವರಿಗೆ ಪ್ರಧಾನ ಮಾಡಲಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ