ಯೋಗ್ಯವಲ್ಲದ ನೀರು ಕುಡಿದು ಸತ್ತರೆ ಯಾರು ಹೊಣೆ – ಡಿ.ಸಿ ಯವರೇ ಇತ್ತ ಕಣ್ಣಾಯಿಸಿರಿ.
ನಕ್ಕುಂದಿ ಜು.04

ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಕೊಡಲಾಗುತ್ತದೆ ಎಂದು ಸರಕಾರ ಹೇಳುತ್ತದೆ. ಆದರೆ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದ ಕೆರೆಯಿಂದ ಸರಬರಾಜಾಗುವ ಕುಡಿಯುವ ನೀರು ಯೋಗ್ಯ ಇಲ್ಲದಿದ್ದರು ಅನಾಹುತವಾಗಿ ಯಾರಾದರು ಸತ್ತರೆ ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಇರುವ ಕೆರೆಯಿಂದ ಸರಬರಾಜಾಗುವ ಕುಡಿಯುವ ನೀರು ಅನೈರ್ಮಲ್ಯವಾದರು ಸಹ ಪಿಡಿಓ ಬಸವರಾಜ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ದುರಾಡಳಿತದಿಂದ ಅಮಾಯಕರು ಸತ್ತರೆ ಅಧಿಕಾರಿಗಳಿಗೆ ಖುಷಿನಾ ಎಂದು ಗ್ರಾಮಸ್ಥರ ಅಳಲು ಆಗಿದೆ.
ನಕ್ಕುಂದಿ ಗ್ರಾಮದ ಅಮಾಯಕ ಬಡ ಜನರು ಟ್ಯಾಂಕ್‌ಮೂಲಕ ಸರಬರಾಜಾಗುವ ಕೆರೆಯ ನೀರನ್ನೆ ಬಳಸುತ್ತಿದ್ದು, ರಾಯಚೂರು ಜಿಲ್ಲಾಧಿಕಾರಿ ಸಾಹೇಬ್ರೆ ಅನಾಹುತ ಸಂಭವಿಸುವ ಮುನ್ನವೇ ನಕ್ಕುಂದಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ ಪುಣ್ಯ ಕಟ್ಟಿ ಕೊಳ್ಳಿ ಎಂದು ಗ್ರಾಮಸ್ಥರ ಮನಸ್ಸಿನ ಮಾತಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ