ನಿವೃತ್ತ ಗ್ರಂಥಪಾಲಕ ಟಿ.ಗುರುರಾಜ್ ಗೆ – ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ.
ಹೂಡೇಂ ಜು.08

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ತುಡುಮ ಗುರುರಾಜ್ ಸುನಿತಾ ಅವರಿಗೆ ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಪಂ ಪಿಡಿಓ ಲಕ್ಷ್ಮಿ ಬಾಯಿ ಮಾತನಾಡಿ, ತುಡುಮಾ ಗುರುರಾಜ್ ಅವರು ಗ್ರಂಥಾಲಯದಲ್ಲಿ ಸುಮಾರು 25 ವರ್ಷ ಸುಧೀರ್ಘವಾಗಿ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ವ್ಯವಸ್ಥಿತವಾಗಿ ಬಹಳ ಅಚ್ಚು ಕಟ್ಟಾಗಿ ಗ್ರಂಥಾಲಯದಲ್ಲಿ ನಡೆಸಿ ಕೊಂಡು ಬಂದಿರುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕಂಬಳರಂಗ ಮುಖ್ಯ ಶಿಕ್ಷಕ ಅಜ್ಜಪ್ಪ ಮಾತನಾಡಿ ಗ್ರಂಥಾಲಯ ಮೇಲ್ವಿಚಾರಕರು ಗ್ರಂಥಾಲಯದ ಸೇವೆ ಎಲ್ಲಾ ಸಾರ್ವಜನಿಕರಿಗೂ ಮಕ್ಕಳಿಗೆ ಸರ್ಕಾರದಿಂದ ಬರುವ ಆದೇಶಗಳು ಅಚ್ಚು ಕಟ್ಟಾಗಿ ತಿಳಿಸುತ್ತಿದ್ದರು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ಯಾರಿಮಾಬಿ ಘನಿ ಸಾಹೇಬ್, ಕಾರ್ಯದರ್ಶಿ ಚಂದ್ರಪ್ಪ, ಸದಸ್ಯರು ಅಜ್ಜಣ್ಣ, ಕಾಟಯ್ಯ ಹಾಗೂ ಕಾಯಕ ಮಿತ್ರ ಗಂಗಮ್ಮ, ವಿ.ಆರ್ ಡಬ್ಲ್ಯೂ ಸಲ್ಮಾ, ಶ್ರೀ ಕಂಪಳ ರಂಗ ಸ್ವಾಮಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರ ಅಜ್ಜಪ್ಪ, ಸಹ ಶಿಕ್ಷಕರು ದಾದಾ ಕಲಂದರ್, ಪ್ರಹಲ್ಲಾದ್, ಸೋಮಶೇಖರ್ ಹಾಗೂ ಊರಿನ ಹಿರಿಯರಾದ ಕೆ.ರಾಜಶೇಖರಪ್ಪ, ಹಾಗೂ ಕೆ. ಪಿ ಕೆಂಗಣ್ಣ , ಬಗ್ಗಲಾರ್ ಪಾಪಣ್ಣ ,ಪುರೋಹಿತರಾದ ಎಚ್.ಎಂ ಜಗದೀಶ ಸ್ವಾಮಿ, ಅಲ್ಪ ಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ದೈಹಿಕ ಶಿಕ್ಷಕ ವೀರೇಶ್ ಹಾಗೂ ಪೇಪರ್ ಮಲ್ಲಿಕಾರ್ಜುನ, ಎಂ ತಿಪ್ಪೇಸ್ವಾಮಿ, ಪ್ರೇಮ್ ಕುಮಾರ್, ದಕ್ಷಿಣ ಮೂರ್ತಿ, ಮಹಾಂತೇಶ್, ಕಂಪ್ಯೂಟರ್ ತಿಪ್ಪೇಸ್ವಾಮಿ, ಮಲ್ಲಿಯಪ್ಪ, ಬೋಸಯ್ಯ, ರವಿಕುಮಾರ್, ಹಾಗೂ ಅರಿವು ಕೇಂದ್ರ ಗ್ರಂಥಾಲಯದ ಓದುಗರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ