ಯಲಗೋಡ ಎಂ.ಪಿ.ಎಸ್ ಶಾಲೆಯಲ್ಲಿ – ವಿಜ್ಞಾನ ದಿನ ಆಚರಣೆ.
ಯಲಗೋಡ ಮಾ.01





ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ವಿಜ್ಞಾನ ಮತ್ತು ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿರಬೇಕು. ಇದರ ಮಹತ್ವವನ್ನು ನೆನಪಿಸಲೆಂದೇ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸುತ್ತಾರೆ. ವಿಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನದ ಮೂಲ ಆಶಯವಾಗಿದೆ ಎಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಉದ್ಘಾಟಿಸಿ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಅಂಕಲಗಿ ಮಾತನಾಡಿದರು. ಜೀವನದ ಪ್ರತಿ ಸಮಸ್ಯೆಗೂ ಪರಿಹಾರವಿದೆ ಆದ್ದರಿಂದ ಎಲ್ಲರೂ ಪ್ರತಿ ಹಂತದಲ್ಲೂ ಗಣಿತ ಮತ್ತು ವಿಜ್ಞಾನದ ಬಗ್ಗೆ ಒಲವು ಮೂಡಿಸಿ ಕೊಳ್ಳಬೇಕು. ಈಗ ಪ್ರತಿ ಕಲಿಕೆಯಲ್ಲಿಯೂ ತಂತ್ರಜ್ಞಾನ ಅಗಾಧವಾದ ಪಾತ್ರವನ್ನು ವಹಿಸುತ್ತಿದೆ. ವಿಜ್ಞಾನದ ಅದ್ಭುತಗಳಿಲ್ಲದ ಜಗತ್ತನ್ನು ಕಲ್ಪಿಸಿ ಕೊಳ್ಳುವುದೇ ಕಷ್ಟ. ನಾವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದೇವೆ. ವಿಜ್ಞಾನವು ಅಸಾಧ್ಯ ವಾದುದನ್ನು ಸಾಧ್ಯವಾಗಿಸುತ್ತದೆ ಎಂದು ಹೇಳಿದರು. ಶಾಲೆಯ ವಿಜ್ಞಾನ ಶಿಕ್ಷಕಿಯಾಗಿರುವ ಕುಮಾರಿ ವಿದ್ಯಾವತಿ ಹನಮರೆಡ್ಡಿ ಇವರು ರಾಷ್ಟ್ರೀಯ ವಿಜ್ಞಾನ ದಿನದ ವಿಶೇಷತೆ ಏನೆಂದರೆ ಪ್ರಖ್ಯಾತ ವಿಜ್ಞಾನಿ ಸರ್ ಸಿ,ವಿ ರಾಮನ್ ರವರು ವಿಶ್ವಕ್ಕೆ ರಾಮನ್ ಎಫೆಕ್ಟ್ ಎಂಬ ಸಿದ್ದಾಂತವನ್ನು ನೀಡಿದ ದಿನ ಈ ಮಹೋನ್ನತ ಸಾಧನೆಯನ್ನು ನೆನಪಿಸಿ ಕೊಳ್ಳುವುದಕ್ಕಾಗಿ ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತಾರೆ ಎಂದು ಹೇಳಿದರು. ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ.ವಿ ರಾಮನ್ ಅವರು ನೀಡಿರುವ ಕೊಡುಗೆಗಳ ಕುರಿತು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದರು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಏರ್ಪಡಿಸುವ ವಿಜ್ಞಾನ ರಸಪ್ರಶ್ನೆ ವಿಜ್ಞಾನ ವಿಷಯದ ರಂಗೋಲಿ ಸ್ಪರ್ಧೆ ವಿಜ್ಞಾನ ವಿಷಯದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸಹ ಶಿಕ್ಷಕರಾಗಿರುವ ಸುರೇಶ ಬಡಿಗೇರ ವಿಜ್ಞಾನದ ಒಗಟುಗಳು ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮಂಗಳಬಾಯಿ ಅಲ್ಮದ. ಕುಮಾರಿ ಮೀನಾಕ್ಷೀ ಕೆಂಭಾವಿ. ನೀಲಮ್ಮ ತಳ್ಳೋಳ್ಳಿ. ದಸ್ತಗಿರಸಾಬ ಬಗಲಿ. ರಾಘವೇಂದ್ರ ಉಂಡಿಗೇರ ದಶರಥ ಗುಡಿಮನಿ. ಗುರುನಾಥ ರೊಟ್ಟಿ. ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸುರೇಶ ಬಡಿಗೇರ ನಿರೂಪಿಸಿದರು ಕುಮಾರಿ ಕಾವೇರಿ ಮಾದರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮೀನಾಕ್ಷಿ ಕೆಂಭಾವಿ ಸ್ವಾಗತಿಸಿ. ನೀಲಮ್ಮ ತಳ್ಳೋಳ್ಳಿ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ