ಮಹತ್ವಾಕಾಂಕ್ಷಿ ಹೋಗಿ ನಕಲಿ ಗುತ್ತಿಗೆದಾರರಿಗೆ ಮಹಾಲಕ್ಷ್ಮೀ.
ಕಂಪ್ಲಿ ಸ.14

ಹಲವು ವರ್ಷಗಳಿಂದ ಮಡಿಗಳು ಹೂಳು ಜಲ ಸಸ್ಯಗಳಿಂದ ತುಂಬಿ ಕೊಂಡು ಸರಾಗವಾಗಿ ನೀರು ಹರಿಸಲು ಸಮಸ್ಯೆ ಉಂಟಾಗಿ ರೈತರಿಗೆ ತೊಂದರೆ ಯಾಗುತ್ತಿತ್ತು. ಇದರಿಂದ ರೈತರು ಹೊಲ ಗದ್ದೆಗಳಿಗೆ ನೀರು ಹರಿಸಲು ಸರದಿ ಸಾಲಿನಲ್ಲಿ ಹಗಲು ರಾತ್ರಿ ಪಾಳೆಯದಂತೆ ಕಾಯಬೇಕಿತ್ತು. ಇದರ ಬಗ್ಗೆ ಹಲವು ಬಾರಿ ರೈತರಲ್ಲಿ ಜಗಳ ಗಲಾಟೆ ಆಗುತ್ತಿತ್ತು. ನಂತರ ರಾಜಿ ಸಂಧಾನ ಕೆಲವೊಂದು ಬಾರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದುಂಟು ಇದನ್ನೆಲ್ಲ ಮನಗಂಡು ಕರ್ನಾಟಕ ರಾಜ್ಯ ಸರ್ಕಾರ ನೀರಾವರಿ ಇಲಾಖೆಯ ಮುಖಾಂತರ ಲಕ್ಷ ಲಕ್ಷಾಂತರ ಅನುದಾನವನ್ನು ರೈತರ ಮಡಿಗಳ ಅಭಿವೃದ್ಧಿ ಅಧುನಿಕರಣ ಮಾಡಲು ಮಹತ್ತರ ಕಾಮಗಾರಿಯ ಬಗ್ಗೆ ಆಲೋಚಿಸಿ ಅನುಷ್ಠಾನ ಗೊಳಿಸಿದರು. ಇದನ್ನೇ ಅಸ್ತ್ರವಾಗಿ ಬಳಸಿ ಕೊಂಡ ಕೆಲವು ಸಂಘಟನೆಗಳು ರೈತರ ಮಡಿಗಳನ್ನು ಯಾವುದೇ ಮಾನದಂಡಗಳಿಲ್ಲದೆ ಕಾಮಗಾರಿಯ ಬಗ್ಗೆ ಯಾವುದೇ ಅನುಭವವಿಲ್ಲದೆ ಕಾಮಗಾರಿಗಳನ್ನು ಮಾಡುತ್ತಿದ್ದಾರೆ ಇದರ ಪರಿಣಾಮ ಮಡಿಗಳ ಅಭಿವೃದ್ಧಿ ನೆಪದಲ್ಲಿ ಕಳಪೆ ಕಾಮಗಾರಿ ನಡೆದು ಈಗಾಗಲೇ ಬಿರುಕು ಬಿಟ್ಟಿರುವುದು ಕಂಡು ಬಂದಿರುತ್ತದೆ ವಿಜಯನಗರ ಜಿಲ್ಲೆ ಕಾಲುವೆ ವ್ಯಾಪ್ತಿಯ ಮಡಿಗಳ ಅಧುನಿಕರಣ (ಅಭಿವೃದ್ಧಿ) ಕಾಮಗಾರಿಯು ಕ್ರಿಯಾ ಯೋಜನೆಯ ಪ್ರಕಾರ ಕಾಮಗಾರಿಯನ್ನು ಮಾಡದೆ ಗುತ್ತಿಗೆ ಮುಖಾಂತರವು ಅಥವಾ ಸಂಘ ಸಂಸ್ಥೆಗಳ ಮುಖಾಂತರವು ಗುತ್ತಿಗೆ ನೀಡಿದ್ದು. ಆ ಗುತ್ತಿಗೆದಾರರು ಒಳ ಒಪ್ಪಂದದ ಮುಖಾಂತರ ಕಾಮಗಾರಿಗಳನ್ನು ಮಾಡಿದ್ದು ಅವುಗಳು ಪ್ರಾರಂಭದ ಮುಂಚೆಯೇ (ಸೀಳು) ಬಿರುಕು ಮತ್ತು ಎಲ್ಲಿ ಬೇಕಾದರೆ ಅಲ್ಲಿ ಕುಣಿಗಳು ಬಿದ್ದಿವೆ ಇದರ ಬಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಬಂದಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸಿರುವುದಿಲ್ಲ ಕಂಪ್ಲಿ ತಾಲೂಕು ಹಾಗೂ ಹೊಸಪೇಟೆ ಭಾಗದ ಬಹಳಷ್ಟು ಕಡೆಗಳಲ್ಲಿ ಬೇಕಾ ಬಿಟ್ಟಿಯಾಗಿ ಕಾಮಗಾರಿ ಮಾಡಿ ಬಿಲ್ ಎತ್ತಿ ಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ ಮಡಿಗಳ ಅಭಿವೃದ್ಧಿ ಯೋಜನೆ ಹಳ್ಳ ಹಿಡಿಯುತ್ತಿದೆ ಇದರ ಬಗ್ಗೆ ಕೆಲವು ಇಟ್ಟ ಸಂಘಟನಾ ಸಂಸ್ಥೆಗಳು ಸಂಬಂಧಪಟ್ಟ ಸಣ್ಣ ನೀರಾವರಿ ಸಚಿವರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಛಾಯಾಚಿತ್ರ ಲಗತ್ತಿಸಿ ದೂರು ಕೊಟ್ಟರು ಯಾವುದೇ ಕ್ರಮ ಕೈಗೊಳ್ಳದ ಉನ್ನತ ಮಟ್ಟದ ಇಲಾಖೆಯಿಂದ ಹಿಡಿದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುನಿರಾಬಾದ್ ಕಮಲಾಪುರ ಬಳ್ಳಾರಿ ಜಿಲ್ಲಾಧಿಕಾರಿಗಳು ಹೊಸಪೇಟೆ ಜಿಲ್ಲಾಧಿಕಾರಿಗಳು ಸುಮ್ಮನೆ ಇರುವುದನ್ನು ನೋಡಿದರೆ ಕಂಪ್ಲಿ ಹಾಗೂ ಹೊಸಪೇಟೆಗೆ ಕಾರ್ಯನಿರ್ವಹಿಸಲು ಬರುವ ಅಧಿಕಾರಿಗಳು ನಾ ಮುಂದು ತಾ ಮುಂದು ಎಂದು ಹಪಾ ಹಪಿಸುವುದನ್ನು ನೋಡಿದರೆ ಗೊತ್ತಾಗುತ್ತದೆ.

ಮೊದಲು ದೆಹಲಿ ಸುಲ್ತಾನದ ಸಾಮ್ರಾಜ್ಯದಲ್ಲಿ ಸಿಂಹ ಸ್ವಪ್ನವಾದ ಕಂಪಲಿ ಗಂಡುಗಲಿ ಕುಮಾರರಾಮನ ಹೆಸರಿಗೆ ಮಸಿ ಬಳಿಯಲೆಂದೆ ಬರುತ್ತಿರುವ ಸರ್ಕಾರಿ ಅಧಿಕಾರಿಗಳು ಮತ್ತು ಶಾಸಕರು ಅದಕ್ಕೆ ಪೂರಕವಾಗಿ ಸಹಕರಿಸುತ್ತಿರುವ ಕಂಪ್ಲಿಯ ಪ್ರಜೆಗಳು ಈಗಾಗಲೇ ಕೆಲವು ಪತ್ರಿಕೆಗಳಲ್ಲಿ ದೂರುಗಳಲ್ಲಿ ಎಚ್ಚರಿಕೆ ಕೊಟ್ಟರು ಸುಧಾರಿಸದ ಅಧಿಕಾರಿಗಳಿಗೆ ಮತ್ತೊಮ್ಮೆ ಈ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಮುನ್ನ ಕಚೇರಿಯ ಷರತ್ತು ಮತ್ತು ಗುತ್ತಿಗೆದಾರನ ಒಡಂಬಡಿಕೆಯ ಪ್ರಕಾರ ಕಾಮಗಾರಿಯನ್ನು ಪರೀಕ್ಷಿಸಿ ಮತ್ತು ಮೂರನೇ ವ್ಯಕ್ತಿಯಿಂದ ಇಲ್ಲವೇ ಸಂಸ್ಥೆಯಿಂದ ಕಾಮಗಾರಿ ತೃಪ್ತಿಕರ ಎಂದು ದೃಢೀಕರಣ ಪ್ರಮಾಣ ಪತ್ರ ಪಡೆದ ನಂತರ ಎಲ್ಲ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಒಂದು ವೇಳೆ ತಮ್ಮ ಕಣ್ತಪ್ಪಿನಿಂದ ಈ ಕಾಮಗಾರಿಯು ಹಣ ಬಿಡುಗಡೆ ಮಾಡಿದರೆ ಅದಕ್ಕೆ ತಾವುಗಳೇ ನೇರ ಹೊಣೆ ಗಾರರಾಗುತ್ತೀರಿ ಎಂದು ಆದೇಶವು ಸಹ ಇರುತ್ತದೆ. ಆದ್ದರಿಂದ ತಾವುಗಳು ಕ್ರಿಯಾ ಯೋಜನೆಯ ಪ್ರಕಾರ ಕಾಮಗಾರಿಯನ್ನು ಮಾಡದೆ ಕಳಪೆ ಗುಣ ಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಇಲ್ಲ ಸಂಘ-ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡ ಬಾರದೆಂದು ಪತ್ರಿಕೆ ಮೂಲಕ ಮತ್ತೊಮ್ಮೆ ತಿಳಿಸುತ್ತಾ ಹಳ್ಳಿಯಿಂದ ಡೆಲ್ಲಿವರೆಗೂ ಗಂಡುಗಲಿ ಕುಮಾರರಾಮ ಎಂದೇ ಹೇಳುತ್ತಿದ್ದ ಇತಿಹಾಸ ಮುಂದೊಂದು ದಿನ ಉತ್ತರ ಕುಮಾರನ ಹೆಸರಲ್ಲಿ ಪ್ರಚಲಿತ ವಾಗಬಾರದೆಂದು ಆಶಯ ಆದರೂ ನೋಡುವ ಅಧಿಕಾರಿಗಳ ಕಾರ್ಯ ಕ್ಷಮತೆ ಹಣ ಬಿಡುಗಡೆ ಮಾಡಿದರು ಬರೆಯುತ್ತೇವೆ. ಕಾಮಗಾರಿಯನ್ನು ಪರಿಶೀಲಿಸಿ ಕ್ರಮ ಕೈಗೊಂಡರು ಬರೆಯುತ್ತೇವೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ. ರಾಜಕುಮಾರ್.ಕಂಪ್ಲಿ.ಬಳ್ಳಾರಿ.