ಪ್ರಜಾಪ್ರಭುತ್ವ ದಿನಾಚರಣೆ, ಮಾನವ ಸರಪಳಿ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ – ಶಾಸಕ ಜಿ.ಎಚ್ ಶ್ರೀ ನಿವಾಸ್.
ತರೀಕೆರೆ ಸ.14

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಯಶಸ್ವಿ ಮಾಡಲು ಸಾರ್ವಜನಿಕರು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆ ಮತ್ತು ಶಾಲಾ ಮಕ್ಕಳು, ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ಹೇಳಿದರು. ಅವರು ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿನಾಂಕ 15-9-2024 ರಂದು ಬೆಳಗ್ಗೆ 9:30 ರಿಂದ 10 ಗಂಟೆಯವರೆಗೆ ಮಾನವ ಸರಪಳಿ ಏರ್ಪಡಿಸ ಬೇಕಾಗಿದ್ದು. ಕುಡ್ಲೂರು, ಕೋರನಹಳ್ಳಿ, ಬೆಟ್ಟದಹಳ್ಳಿ, ಬೆಲೆನಹಳ್ಳಿ, ಮಾರ್ಗವಾಗಿ ಎಂ.ಸಿ ಹಳ್ಳಿಯ ವರೆಗೆ ಒಟ್ಟು 29 ಕಿಲೋಮೀಟರ್ ಉದ್ದದ ಮಾನವ ಸರಪಳಿಯನ್ನು ಮಾಡಲು ಸುಮಾರು 65 ಬಸ್ಸುಗಳ ವ್ಯವಸ್ಥೆ ಮಾಡ ಬೇಕಾಗಿದೆ ಪ್ರತಿಯೊಬ್ಬರೂ ಭಾಗವಹಿಸ ಬೇಕು ಎಂದು ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ರವರು ಮಾನವ ಸರಪಳಿಯಲ್ಲಿ 7 ಗ್ರಾಮ ಪಂಚಾಯಿತಿಗಳು ತರೀಕೆರೆ ಪುರಸಭೆ ಯೊಂದಿಗೆ ಒಂದು ಕಿಲೋಮೀಟರ್ ಗೆ ಸುಮಾರು 8000 ಜನ ಭಾಗವಹಿಸುತ್ತಾರೆ ಪ್ರತಿಯೊಂದು ಕಿಲೋಮೀಟರ್ ಗೆ ಹಾಗೂ 500 ಮೀಟರ್ ಗೆ ಒಂದು ಪಾಯಿಂಟ್ ಮಾಡಲಾಗಿದೆ. ರಂಗೋಲಿ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹.3000 ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ₹ 2000 ರೂ ಬಹುಮಾನ, ತೃತೀಯ ಸ್ಥಾನ ಪಡೆದವರಿಗೆ ₹ 1000 ಬಹುಮಾನ ನೀಡಲಾಗುವುದು ಎಂದು ಹೇಳಿದರು. ಪೊಲೀಸು ಉಪಾ ಅಧೀಕ್ಷಕ ರಾದ ಹಾಲುಮೂರ್ತಿ ರಾವ್ ರವರು ಮಾತನಾಡಿ ಮಾನವ ಸರಪಳಿಯಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು ಸಾರ್ವಜನಿಕರು ಭಾಗವಹಿಸುವು ದರಿಂದ ಯಾರಿಗೂ ತೊಂದರೆ ಯಾಗದಂತೆ ವಾಹನ ಸಂಚಾರಕ್ಕೂ ಅಡ್ಡಿ ಯಾಗದಂತೆ ಸೂಕ್ತ ಬಂದೋಬಸ್ತು ಮಾಡಿದ್ದೇವೆ ಎಲ್ಲಾ ರಸ್ತೆಗಳನ್ನು ಬ್ಲಾಕ್ ಮಾಡುವುದಿಲ್ಲ ಮಾನವ ಸರಪಳಿಯ ಪ್ರಮುಖ ಕಡೆ ರಸ್ತೆಯನ್ನು ಬಂದು ಮಾಡಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಬೆಳಿಗ್ಗೆ 9:30 ರಿಂದ 10 ಗಂಟೆಯವರೆಗೆ ರಸ್ತೆ ಸುರಕ್ಷತೆ ಬಗ್ಗೆ ಕ್ರಮ ವಹಿಸಲಾಗುವುದು. ಎಲ್ಲರೂ ಸಂಚಾರಿ ಸುರಕ್ಷತೆ ಬಗ್ಗೆ ಗಮನ ಕೊಟ್ಟು ಸಹಕರಿಸಿರಿ ಎಂದು ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಾದ ಹಿರಿಯ ಭೂ ವಿಜ್ಞಾನಿ ಅಂತರ್ಜಲ ಇಲಾಖೆಯ ನಂದಿನಿ ಅವರು, ಭೂ ದಾಖಲೆಗಳ ಉಪನಿರ್ದೇಶಕರಾದ ಲೋಹಿತ್, ತರೀಕೆರೆ ತಹಶೀಲ್ದಾರ್ ವಿಶ್ವಜಿತ ಮೆಹತಾ, ಅಜ್ಜಂಪುರ ತಹಸೀಲ್ದಾರ್ ಶಿವಕುಮಾರ್ ಕಟ್ಟೋಳಿ, ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ, ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್, ಪಂಚ ಗ್ಯಾರೆಂಟಿಗಳ ತಾಲೂಕ ಅಧ್ಯಕ್ಷರಾದ ಎನ್ ಜಿ ರಮೇಶ್, ಬಗರುಕುಂ ಸಮಿತಿ ಸದಸ್ಯರಾದ ಜೈ ಕರ್ನಾಟಕ ಜಗದೀಶ್, ಅಜ್ಜಂಪುರ ವೃತ್ತ ನಿರೀಕ್ಷಕರಾದ ವೀರೇಂದ್ರ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ, ದೇವೇಂದ್ರಪ್ಪ , ಸಮಾಜ ಕಲ್ಯಾಣ ಅಧಿಕಾರಿ ಎಸ್ ಮಂಜುನಾಥ ಹಾಗೂ 7 ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು, ಉಪಸ್ಥಿತರಿದ್ದು. ಸಮಾಜ ಸೇವಕರಾದ ಎಂ ನರೇಂದ್ರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್. ವೆಂಕಟೇಶ್, ಚೆಲುವಾದಿ ಮಹಾಸಭಾ ದ ಎಸ್ ಕೆ ಸ್ವಾಮಿ, ಶಿವಮೂರ್ತಿ ಸಲಹೆ ನೀಡಿದರು ಪುರಸಭಾ ಮುಖ್ಯ ಅಧಿಕಾರಿಯ ಎಚ್ ಪ್ರಶಾಂತ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತರೀಕೆರೆ. ಎನ್.ವೆಂಕಟೇಶ್.ಚಿಕ್ಕ ಮಗಳೂರ.